POCO X5 5G : 48MP ಕ್ಯಾಮೆರಾ, 33W ಫಾಸ್ಟ್‌ ಚಾರ್ಜಿಂಗ್‌ನ ಪೋಕೋ X5 5G ಸ್ಮಾರ್ಟ್‌ಫೋನ್‌ ಅನಾವರಣ

ಇಂದಿನ ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಹಲವಾರು ಆಯ್ಕೆಗಳಿವೆ. ಆದರೆ ಒಳ್ಳೆಯ ಮ್ಯೂಸಿಕ್‌, ಗೇಮಿಂಗ್‌, ಫೋಟೋ ಮುಂತಾದ ವೈಶಿಷ್ಟ್ಯಗಳನ್ನು ಬೆಂಬಲಿಸುವ ಫೋನ್‌ನ ಹುಡುಕಾಟದಲ್ಲಿದ್ದರೆ ಈಗ ಖರೀದಿಸಲು ಸುಸಮಯ. ಪೋಕೋ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಆದ ಪೋಕೋ X5 5ಜಿ (POCO X5 5G) ಯನ್ನು ಬಿಡುಗಡೆ ಮಾಡಿದೆ. ಮಿಡ್‌ ರೇಂಜ್‌ನ ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 695 ಪ್ರೊಸೆಸ್ಸರ್‌ ಹೊಂದಿದೆ. AMOLED ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ರಿಫ್ರೆಶ್‌ ದರವು 120 Hz ಆಗಿದ್ದು, 5ಜಿ ನೆಟ್‌ವರ್ಕ್‌ ಬೆಂಬಲಿಸಲಿದೆ.

ಪೋಕೋ X5 5ಜಿ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಲಭ್ಯತೆ:
ಪೋಕೋ ಎರಡು ಮಾದರಿಯಲ್ಲಿ ಈ ಫೋನ್‌ ಅನ್ನು ಹೊರತಂದಿದೆ. ಈ ಸ್ಮಾರ್ಟ್‌ಫೋನ್‌ನ ಬೇಸ್‌ ಮಾಡಲ್‌ 6GB RAM ಮತ್ತು128GB ಸಂಗ್ರಹಣೆಯ ಬೆಲೆ 18,999 ರೂ. ಗಳಾಗಿದೆ. ಅದರ 8GB RAM ಮತ್ತು 256GB ಸಂಗ್ರಹಣೆಯ ಫೋನ್‌ನ ಬೆಲೆ 20,999 ರೂ. ಗಳಾಗಿದೆ.

ಪೋಕೋ X5 5ಜಿ ಫೋನ್‌ ಮೂರು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಸೂಪರ್‌ನೋವಾ ಗ್ರೀನ್‌, ವೈಲ್ಡ್‌ಕ್ಯಾಟ್‌ ಬ್ಲ್ಯೂ ಮತ್ತು ಜಗ್ವಾರ್‌ ಬ್ಲಾಕ್‌ ಬಣ್ಣಗಳದ್ದಾಗಿದೆ. ಈ ಹ್ಯಾಂಡ್‌ಸೆಟ್‌ ಮಾರ್ಚ್‌ 21 ರಿಂದ ಪೋಕೋನ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಪ್ರಾರಂಭವಾಗಲಿದೆ.

ಕಂಪನಿಯು ಲಾಂಚ್‌ ಆಫರ್‌ಅನ್ನು ನೀಡಿದೆ. ಅದು ICICI ಬ್ಯಾಂಕ್‌ ಕಾರ್ಡ್‌ ಹೊಂದಿರುವವರಿಗೆ ಕಂಪನಿಯು 2,000 ರೂ. ಗಳ ಡಿಸ್ಕೌಂಟ್‌ ನೀಡಿದೆ.

ಇದನ್ನೂ ಓದಿ : Alert : ಯೂಟ್ಯೂಬ್‌ನಲ್ಲಿ ಟ್ಯೂಟೋರಿಯಲ್‌ ವೀಡಿಯೋ ನೋಡುತ್ತೀರಾ? ಎಚ್ಚರ! ನಿಮ್ಮ ಬ್ಯಾಂಕ್‌ ಅಕೌಂಟ್‌ ಖಾಲಿಯಾಗಬಹುದು…

ಪೋಕೋ X5 5G ನ ವೈಶಿಷ್ಟ್ಯಗಳು:

ಡಿಸ್ಪ್ಲೇ : FHD+ ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ ವಾಟರ್-ಡ್ರಾಪ್ ನಾಚ್ ಡಿಸ್ಪ್ಲೇ
ಪ್ರೊಸೆಸರ್: ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 695 ಆಕ್ಟಾ-ಕೋರ್ SoC
RAM ಮತ್ತು ಸಂಗ್ರಹಣೆ: 6GB/8GB RAM ಮತ್ತು 128GB/256GB ಆಂತರಿಕ ಸಂಗ್ರಹಣೆ
ಚಾರ್ಜಿಂಗ್: 33W ವೇಗದ ಚಾರ್ಜಿಂಗ್
ಬ್ಯಾಟರಿ: 5,000mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 12 OS
ಸಂಪರ್ಕ: ಡ್ಯುಯಲ್-ಸಿಮ್ 5G, Wi-Fi 6 ಮತ್ತು ಬ್ಲೂಟೂತ್ 5.1

ಪೋಕೋ X5 5G ನಲ್ಲಿ ಸೂಪರ್ AMOLED ಪ್ಯಾನೆಲ್ ಅನ್ನು ನೀಡಿದೆ. ಇದರಲ್ಲಿ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರ ಲಭ್ಯವಿದೆ. ಇದರೊಂದಿಗೆ, 1200 ನಿಟ್ಸ್ ಪೀಕ್ ಬ್ರೈಟ್‌ನೆಸ್, 100 ಪ್ರತಿಶತ DCI-P3 ಕಲರ್ ಗ್ಯಾಮಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಸಹ ನೀಡಲಾಗಿದೆ. ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಇದರಲ್ಲಿ 48MPಯ ಮುಖ್ಯ ಲೆನ್ಸ್, 8MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೋಗಾಗಿ 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ.

ಇದನ್ನೂ ಓದಿ : Jio Prepaid Plans : ಜಿಯೋ ಬಳಕೆದಾರರೆ ಗಮನಿಸಿ; 500 ರೂ. ಗಿಂತಲೂ ಕಡಿಮೆ ದರದಲ್ಲಿದೆ 13 ಪ್ಲಾನ್‌ಗಳು

(POCO X5 5G launch in India. Know the price, availability, and specifications)

Comments are closed.