Food processing plant: ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

ಕೊಪ್ಪಳ: (Food processing plant) ತುಂಗಭದ್ರಾ ನದಿಯುದ್ದಕ್ಕೂ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರಾವರಿಯಾಗುತ್ತಿದ್ದು, ಈ ಕಾರಣಕ್ಕೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳೆಗಳ ಮೌಲ್ಯವರ್ಧನ ಮಾಡಲು ಕೊಪ್ಪಳದಲ್ಲಿ ನೂರು ಆಹಾರ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ. ಗಂಗಾವತಿಯ ತಾಲೂಕು ಕ್ರೀಡಾಗಂಣದಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜ್ಯಾದ್ಯಂತ ಹಲವು ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ತುಂಗಭದ್ರಾ ನದಿಯುದ್ದಕ್ಕೂ ಭದ್ರಾ ಜಲಾಶಯ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿದ್ದು, ಲಕ್ಷಾಂತರ ಎಕರೆ ಪ್ರದೇಶಗಳಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಕ್ಕಾಗಿ ನೂರು ಬೃಹತ್‌ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ, ಪಂಜಾಬ್‌ ಮಾದರಿಯಲ್ಲೇ ಅಭಿವೃದ್ದಿ ಮಾಡಿ, ಬ್ರಾಂಡ್‌ ಮೂಲಕ ರೈತರು ಮಾರಾಟಗಳನ್ನು ಮಾಡಿ ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಂಕ್‌ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದರಿಂದ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ. ಅನೇಕ ಯೋಜನೆಗಳನ್ನು ನೇರವಾಗೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವುದರಿಂದ ನಮ್ಮ ಬಿಜೆಪಿ ಸರಕಾರದಲ್ಲಿ ಹಣ ಸೋರಿಕೆಯಿಲ್ಲ ಎಂದರು. ಇನ್ನೂ ಕಿಸಾನ್‌ ಸಮ್ಮಾನ್‌ ಯೋಜನೆಯ ಎರಡನೇ ಕಂತಿನ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಇನ್ನೆರಡು ದಿನಗಳಲ್ಲಿ ಯೋಜನೆಯ ಎರಡನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ ಎಂದರು.

ಇದನ್ನೂ ಓದಿ : BBMP Strike: ಉದ್ಯೋಗ ಖಾಯಂಗೆ ಒತ್ತಾಯ : ಮಾ. 20 ರಂದು ಬಿಬಿಎಂಪಿ ಪೌರಕಾರ್ಮಿಕರ ಪ್ರತಿಭಟನೆ

ಇದನ್ನೂ ಓದಿ : Classrooms Construction: ಮುಂದಿನ 3 ವರ್ಷಗಳಲ್ಲಿ 25 ಸಾವಿರ ತರಗತಿ ಕೊಠಡಿ ನಿರ್ಮಾಣ: ಸಿಎಂ ಬೊಮ್ಮಾಯಿ

ಇದನ್ನೂ ಓದಿ : KSRTC bus Rate hike: ಪ್ರಯಾಣಿಕರಿಗೆ ಬಿಗ್‌ ಶಾಕ್‌ ನೀಡಿದ KSRTC: ಮೈಸೂರು ‌- ಬೆಂಗಳೂರು ನಡುವೆ ಪ್ರಯಾಣದ ಬಸ್ ದರ ಹೆಚ್ಚಳ

Food processing plant: Commencement of 100 food processing plant in Koppal: CM Bommai announcement

Comments are closed.