Portronics Harmonics Z5 neckband : ನೆಕ್‌ಬ್ಯಾಂಡ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಹೊಸ ವಿನ್ಯಾಸದ ನೆಕ್‌ಬ್ಯಾಂಡ್‌

ದಿನದ ಅತಿ ಹೆಚ್ಚಿನ ಸಮಯ ಫೋನ್‌ (Smartphone) ಬಳಸುವವರಿಗೆ ನೆಕ್‌ಬ್ಯಾಂಡ್‌ (Neckband) ಅವಶ್ಯಕ. ಹೆಚ್ಚಿನ ಕಾಲ್‌ ಮಾಡುವವರು, ಆನ್‌ಲೈನ್‌ ಮೀಟಿಂಗ್‌ ನಡೆಸುವವರು, ಮ್ಯೂಸಿಕ್‌ ಪ್ರಿಯರು ಉತ್ತಮ ನೆಕ್‌ಬ್ಯಾಂಡ್‌ಗಳ ಹುಡುಕಾಟದಲ್ಲಿರುತ್ತಾರೆ. ಈಗ ಪೋರ್ಟ್ರೋನಿಕ್ಸ್‌ (Portronics) ಹೊಸ ವಿನ್ಯಾಸದೊಂದಿಗೆ ಹಾರ್ಮೋನಿಕ್ಸ್‌ Z5 (Portronics Harmonics Z5 neckband) ನೆಕ್‌ಬ್ಯಾಂಡ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದು ಉತ್ತಮ ಗ್ರಿಪ್‌ ಮತ್ತು ಕಂಫರ್ಟ್‌ ಆಗಿದ್ದು ಬಳಕೆದಾರರಿಗೆ ಫಿಟ್‌ ಅನಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ನೆಕ್‌ಬ್ಯಾಂಡ್‌ನಲ್ಲಿ ಬ್ಲೂಟೂತ್‌ ಸಂಪರ್ಕಕ್ಕಾಗಿ V5.2 ಚಿಪ್‌ ಅಳವಡಿಸಲಾಗಿದೆ. ಇದು ವೇಗವಾಗಿ ಕನೆಕ್ಟ್‌ ಆಗಲು ಸಹಾಯ ಮಾಡುತ್ತದೆ. ಇದರಲ್ಲಿ ಉತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ 250mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಒಂದೇ ಚಾರ್ಜ್‌ನಲ್ಲಿ 33 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಪೋರ್ಟ್ರೋನಿಕ್ಸ್‌ ಹಾರ್ಮೋನಿಕ್ಸ್ Z5 ಅನ್ನು, ಬಾಸ್‌ ಮೋಡ್‌ ಮತ್ತು ಮ್ಯೂಸಿಕ್‌ ಮೋಡ್‌ –EQ ಮೋಡ್‌ಗಳ ನಡುವೆ ಬದಲಾಯಿಸಬಹುದಾಗಿದೆ. ಇದರಲ್ಲಿರುವ ಇತರ ಬಟನ್‌ಗಳು ಟ್ರ್ಯಾಕ್ ಬದಲಾಯಿಸಲು, ಕರೆಗೆ ಉತ್ತರಿಸಲು ಮತ್ತು ವಾಲ್ಯೂಮ್ ನಿಯಂತ್ರಣ ಮಾಡುತ್ತದೆ. ಆದ್ದರಿಂದ ಕೆಲಸ ಮಾಡುವಾಗ, ವ್ಯಾಯಾಮ ಮಾಡುವಾಗ ಅಥವಾ ಪ್ರಯಾಣಿಸುವಾಗ ಸ್ಮಾರ್ಟ್‌ಫೋನ್ ಅನ್ನು ಸ್ಪರ್ಶಿಸುವ ಅಗತ್ಯವಿಲ್ಲ.

ಇದನ್ನೂ ಓದಿ : Samsung New Phones : ಫೆಬ್ರವರಿ 1ಕ್ಕೆ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿ ಸ್ಮಾರ್ಟ್‌ಫೋನ್‌ಗಳು

ಬೆಲೆ ಮತ್ತು ಲಭ್ಯತೆ:
ಪೋರ್ಟ್ರೋನಿಕ್ಸ್ ಹಾರ್ಮೋನಿಕ್ಸ್ Z5 ನೆಕ್‌ಬ್ಯಾಂಡ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕಪ್ಪು, ನೀಲಿ, ಕೆಂಪು ಮತ್ತು ನೇರಳೆ. ಇದರ ಬೆಲೆ 12-ತಿಂಗಳ ವಾರಂಟಿಯೊಂದಿಗೆ 849 ರೂ. (MRP 2,499 ರೂ.). ಬಳಕೆದಾರರು ಈ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ Portronics.com, Flipkart.com, Amazon.com ಮತ್ತು ಇತರ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿಸಬಹುದಾಗಿದೆ.

ಇದನ್ನೂ ಓದಿ : PM Matsya Sampada Yojana : ಏನಿದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ? ಇದರ ಲಾಭ ಪಡೆಯುವುದು ಹೇಗೆ…

ಇದನ್ನೂ ಓದಿ : Bike Under 1Lakh : ಒಂದು ಲಕ್ಷದೊಳಗೆ ಖರೀದಿಸಬಹುದಾದ ಆಕರ್ಷಕ ಬೈಕ್‌ಗಳು

(Portronics Harmonics Z5 neckband launched in India. Know the price and specifications)

Comments are closed.