Amul milk price increased: ಇಂದಿನಿಂದ ಮತ್ತೆ ಅಮುಲ್ ಹಾಲಿನ ದರ ಲೀಟರ್‌ಗೆ 3 ರೂ ಹೆಚ್ಚಳ

ನವದೆಹಲಿ: (Amul milk price increased) ಅಮುಲ್ ಬ್ರಾಂಡ್‌ಗೆ ಹೆಸರುವಾಸಿಯಾಗಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿದ್ದು, ಇದೀಗ ಅಮುಲ್‌ ಹಾಲಿನ ದರ 66 ರೂಪಾಯಿಗಳಾಗಿವೆ. ಈ ಹಿಂದೆ ಫುಲ್ ಕ್ರೀಮ್ ಹಾಲಿನ ದರ ಲೀಟರ್ ಗೆ 63 ರೂ ಇದ್ದು ಈಗ 66 ರೂ ಗೆ ಏರಿದೆ.

ಅಮುಲ್ ಪೌಚ್ ಹಾಲಿನ (ಎಲ್ಲಾ ರೂಪಾಂತರಗಳು) ಬೆಲೆಯನ್ನು ಡಬ್ಲ್ಯೂ.ಇ.ಎಫ್. ಅಡಿಯಲ್ಲಿ ಪರಿಷ್ಕರಿಸಲಾಗಿದ್ದು, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಒಂದು ಲೀಟರ್‌ ಹಾಲಿನ ದರ 63 ರೂ ಇದ್ದು, ಈಗ 66 ರೂ ಗೆ ಏರಿದೆ.

ಕೇಂದ್ರ ಹಣಕಾಸು ಸಚಿವರು ಕೇಂದ್ರ ಬಜೆಟ್ ಮಂಡಿಸಿದ ನಂತರ ಹಾಲಿನ ದರವನ್ನು ಏರಿಕೆ ಮಾಡಲಾಗಿದ್ದು, ದರ ಪರಿಷ್ಕರಣೆಯ ನಂತರ, ಅಮುಲ್‌ ಗೋಲ್ಡ್‌ ಹಾಲಿನ ಬೆಲೆ ಪ್ರತಿ ಲೀಟರ್‌ ಗೆ 66 ರೂ ಆಗಿದೆ. ಅಮುಲ್ ಹಸುವಿನ ಹಾಲು ಲೀಟರ್‌ಗೆ 56 ರೂ., ಅಮುಲ್ ತಾಜಾ ಲೀಟರ್‌ಗೆ 54 ರೂ. ಮತ್ತು ಅಮುಲ್ ಎ2 ಎಮ್ಮೆ ಹಾಲಿನ ಲೀಟರ್‌ಗೆ 70 ರೂ.ಗೆ ಲಭ್ಯವಿದೆ. ಈ ದರಗಳು ಫೆ. 23 ರಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಣೆಯಲ್ಲಿ ತಿಳಿಸಲಾಗಿದೆ.

“ಅಮುಲ್ ಪೌಚ್ ಹಾಲಿನ (ಎಲ್ಲಾ ರೂಪಾಂತರಗಳು) ಬೆಲೆಯನ್ನು ಡಬ್ಲ್ಯೂ.ಇ.ಎಫ್. ಅಡಿಯಲ್ಲಿ ಪರಿಷ್ಕರಿಸಲಾಗಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. 02 ಫೆಬ್ರವರಿ 23 ರಂದು ರವಾನೆ ಮಾಡುತ್ತೇವೆ ”ಎಂದು ಅಮುಲ್‌ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆಧಾರಣೆ : ಸಂತಸಗೊಂಡ ಅಡಿಕೆ ಬೆಳೆಗಾರರು

ಇದನ್ನೂ ಓದಿ : ನಿಮ್ಮ ಆಧಾರ್‌ ಕಾರ್ಡ್‌ ಪೋಟೋ ಬದಲಾಯಿಸಬೇಕಾ ? ಹಾಗಾದ್ರೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : LIC WhatsApp Services : ವಾಟ್ಸಾಪ್‌ ಮೂಲಕ ಎಲ್‌ಐಸಿ ಸೇವೆ : ಪಾಲಿಸಿ ಸ್ಥಿತಿ, ಪ್ರೀಮಿಯಂ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮದರ್ ಡೈರಿಯು ಸಂಗ್ರಹಣೆ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸುವ ಸಲುವಾಗಿ ಬೆಲೆಗಳನ್ನು ಹೆಚ್ಚಿಸಲಾಗಿದ್ದು, 2022 ರ ಅಕ್ಟೋಬರ್‌ನಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ಅದಕ್ಕೂ ಮೊದಲು ಆಗಸ್ಟ್‌ನಲ್ಲಿ ಬೆಲೆಯನ್ನು ಹೆಚ್ಚಿಸಲಾಗಿತ್ತು. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವ ಕಾರಣದಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮುಲ್‌ ತಿಳಿಸಿದೆ.

Amul milk price increased: Amul milk price increased by Rs 3 per liter from today

Comments are closed.