Realme 10 4G : ಸದ್ಯದಲ್ಲೇ ಬಿಡುಗಡೆಯಾಗಲಿದೆ ರಿಯಲ್‌ಮಿ 10 4G ಫೋನ್‌; ಒಂದೇ ಸಮಯದಲ್ಲಿ 18 ಅಪ್ಲಿಕೇಶನ್‌ ರನ್‌ ಮಾಡಬಹುದಂತೆ…

ರಿಯಲ್‌ಮಿ (Realme) ತನ್ನ ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಬಿಡುಗಡೆ ಮಾಡುತ್ತದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಈಗ ರಿಯಲ್‌ಮಿ ಇಂಟರ್‌ನ್ಯಾಷನಲ್‌ನ ಹೆಡ್‌ ಮಾಧವ ಸೇಠ ಇದರ ಕೆಲವು ವೈಶಿಷ್ಟ್ಯಗಳನ್ನು ಹೇಳಿದ ನಂತರ ಈ ಸ್ಮಾರ್ಟ್‌ಫೋನ್‌ನ ಕುತೂಹಲ ಇನ್ನೂ ಹೆಚ್ಚಿದೆ. ಸೇಠ ಅವರು ಹೇಳುವಂತೆ ಮುಂಬರಲಿರುವ ರಿಯಲ್‌ಮಿ 10 4G (Realme 10 4G), ಮಿಡಿಯಾ ಟೆಕ್‌ ಹೀಲಿಯೊ G99 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಹೊಸ ಫೋನ್‌ 16GBಯ ವರೆಗೆ ಡೈನಾಮಿಕ್‌ RAM ಹೊಂದಿರಲಿದೆ. ಅದರಲ್ಲಿ 8GB ಆನ್‌ಬೋರ್ಡ್‌ ಆದರೆ ಉಳಿದ 8GB ವರ್ಚುವಲ್‌ ವಿಸ್ತರಣೆಯನ್ನು ಹೊಂದಿದೆ. ರಿಯಲ್‌ಮಿ ಟೀಸರ್‌ನಲ್ಲಿ ಹೇಳಿರುವಂತೆ ಇದು ಒಂದೇ ಸಮಯದಲ್ಲಿ 18 ಅಪ್ಲಿಕೇಶನ್‌ಗಳನ್ನು ರನ್‌ ಮಾಡಲಿದೆ.

ಇದಲ್ಲದೇ ಮುಂದೆ ಬಿಡುಗಡೆಯಾಗಲಿರು ರಿಯಲ್‌ಮಿ ಫೋನ್‌ ಕ್ಯಾಮೆರಾ ಸಾಮರ್ಥ್ಯವನ್ನು ಸಹ ಬಹಿರಂಗಪಡಿಸಿದೆ. ರಿಯಲ್‌ 9 ನಲ್ಲಿದ್ದಂತೆ 108 MP ಕ್ಯಾಮೆರಾದ ಬದಲಿಗೆ 50MP ಪ್ರಾಥಮಿಕ ಸಂವೇದಕ ಹೊಂದಿದೆ. ಕಡಿಮೆ ರೆಸಲ್ಯೂಶನ್‌ನ ಹೊರತಾಗಿಯೂ ಉತ್ತಮ ಕಾರ್ಯಕ್ಷಮತೆಗೆ ಇದು ಆದ್ಯತೆ ನೀಡಿದೆ ಎಂದು ಸೇಠ ಹೇಳಿಕೊಂಡಿದ್ದಾರೆ. ಬಳಕೆದಾರರು ಬಿಡುಗಡೆಯಾದ ಮೇಲೆ ಇದನ್ನು ಹೋಲಿಸಿ ನೋಡಬಹುದಾಗಿದೆ.

ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 16MP ಮುಂಭಾಗದ ಕ್ಯಾಮೆರಾ ಹೊಂದಿರುವುದನ್ನು ಸೇಠ ಅವರು ದೃಢಪಡಿಸಿದ್ದಾರೆ. ಇನ್ನು ಈ ಸ್ಮಾರ್ಟ್‌ಫೋನ್‌ 33W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದು 0–28 ಪ್ರತಿಶತ ಚಾರ್ಜ್‌ ಆಗಲು ಇದು ಕೇವಲ 20 ನಿಮಿಷಗಳ ತೆಗೆದುಕೊಳ್ಳಲಿದೆ. ಮ ಇದು ರಿಯಲ್‌ಮಿ 9 ನಂತೆಯೇ 5000mAh ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಹೆಚ್ಚಿನ ಸಮಯದವರೆಗೆ ಕಾರ್ಯ ನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ.

ರಿಯಲ್‌ಮಿ 10 4G ಬಿಡುಗಡೆ ಎಂದು?
ಮುಂಬರುವ ರಿಯಲ್‌ಮಿ 10 4G ಯು ಇದೇ ನವೆಂಬರ್‌ 9 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ರೂಪಾಂತರಗಳು ಅನಾವರಣಗೊಳ್ಳಲಿದೆ. ಬಿಡುಗಡೆಯಲ್ಲಿ ಮತ್ತೆರಡು 4G ಸ್ಮಾರ್ಟ್‌ಫೋನ್‌ಗಳು ಮತ್ತು 5G ಸಾಧನಗಳನ್ನು ಅನಾವರಣಗೊಳಿಸಬಹುದು ಎಂಬ ವದಂತಿಯೂ ಇದೆ.

ಇದನ್ನೂ ಓದಿ : Mark Zuckerberg:ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದ ಮಾರ್ಕ್‌ ಜುಕರ್‌ಬರ್ಗ್‌

ಇದನ್ನೂ ಓದಿ : Twitter Crisis : ಶೇಕಡಾ 50 ರಷ್ಟು ಸಿಬ್ಬಂದಿಗಳ ಕಿತ್ತೊಗೆಯಲು ಎಲನ್‌ ಮಸ್ಕ್‌ ಪ್ಲಾನ್‌

(Realme 10 4G will launch in India soon, 50MP camera, 33W fast charging, and many specifications)

Comments are closed.