Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು

ಚೈನಾ(China) ದ ಸ್ಮಾರ್ಟ್‌ಫೋನ್‌ (Smartphone) ತಯಾರಿಕಾ ಕಂಪನಿ ರಿಯಲ್‌ಮಿ (Realme) ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವುದರ ಮೂಲಕ ತನ್ನ ಸ್ಮಾರ್ಟ್‌ಫೋನ್‌ ಮಾರಾಟದ ಪೋರ್ಟ್‌ಫೋಲಿಯೋ ಅನ್ನು ಹೆಚ್ಚಿಸಿಕೊಂಡಿದೆ. ಅದು ಇತ್ತಿಚೆಗೆ ರಿಯಲ್‌ಮಿ 10 ಪ್ರೋ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿತ್ತು. ಈ ಲೈನ್‌–ಅಪ್‌ನಲ್ಲಿ ಎರಡು ಮಾದರಿಯ ರಿಯಲ್‌ಮಿ 10 ಪ್ರೋ ಮತ್ತು ರಿಯಲ್‌ಮಿ 10 ಪ್ರೋ ಪ್ಲಸ್‌ 5G (Realme 10 Pro Plus 5G) ಸ್ಮಾರ್ಟ್‌ಫೋನ್‌ಗಳಿವೆ. ಇತ್ತೀಚಿನ ರಿಯಲ್‌ಮಿ 10 ಪ್ರೋ ಪ್ಲಸ್‌ 5G 120 Hz ರಿಫ್ರೆಶ್‌ ದರವನ್ನು ಬೆಂಬಲಿಸುವುದರ ಜೊತೆಗೆ ಕರ್ವಡ್‌ ಡಿಸ್ಲ್ಪೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭಿಸಿದೆ. ಇದು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡರ ಮೂಲಕವು ಲಭ್ಯವಿರಲಿದೆ. ಈ ಫೋನ್‌ನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು ಹೀಗಿವೆ.

ರಿಯಲ್‌ಮಿ 10 ಪ್ರೋ ಪ್ಲಸ್‌ 5G ವೈಶಿಷ್ಟ್ಯಗಳು :
ರಿಯಲ್‌ಮಿ 10 ಪ್ರೋ ಪ್ಲಸ್‌ 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ HD+ ಡಿಸ್ಲ್ಪೇ ಹೊಂದಿದೆ. ಇದು 61 ಡಿಗ್ರಿ ಯ ಬಾಗಿದ 10–ಬಿಟ್‌ OLED ಪ್ಯಾನೆಲ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 120 Hz ರಿಫ್ರೆಶ್‌ ದರ ಮತ್ತು ಡಿಸ್ಲ್ಪೇಯ ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಹೊಂದಿದೆ. ಹೊಸ ಹ್ಯಾಂಡ್‌ಸೆಟ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 1080 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಇದು 8 GM RAM ಮತ್ತು 128 GB ಸಂಗ್ರಹಣೆಯನ್ನು ಹೊಂದಿದೆ.

ರಿಯಲ್‌ಮಿ 10 ಪ್ರೋ ಪ್ಲಸ್‌ 5G ಸ್ಮಾರ್ಟ್‌ಫೋನ್‌ 3 ಕ್ಯಾಮೆರಾಗಳ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 108 MP ಯ ಸ್ಯಾಮ್‌ಸಂಗ್‌ HM6 ಸೆನ್ಸಾರ್‌ ಮತ್ತು 112 ಡಿಗ್ರಿಯ 8MP ಅಲ್ಟ್ರಾವೈಡ್‌ ಲೆನ್ಸ್‌ ಮತ್ತು 2 MPಯ ಮೈಕ್ರೋ ಯುನಿಟ್‌ ಹೊಂದಿದೆ. ವೀಡಿಯೋ ಕರೆ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16 MP ಕ್ಯಾಮೆರಾ ವನ್ನು ಅಳವಡಿಸಲಾಗಿದೆ. ರಿಯಲ್‌ಮಿ 10 ಪ್ರೋ ಪ್ಲಸ್‌ 5G ಫೋನ್‌ 67Wನ ಫಾಸ್ಟ್‌ ಚಾರ್ಜಿಂಗ್‌ ಹೊಂದಿದ್ದು, 5000mAh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ.

ರಿಯಲ್‌ಮಿ 10 ಪ್ರೋ ಪ್ಲಸ್‌ 5G ಬೆಲೆ ಮತ್ತು ಲಭ್ಯತೆ :
ಈ ಸ್ಮಾರ್ಟ್‌ಫೋನ್‌ ಎರಡು ರೀತಿಯ RAMನ ಆವೃತ್ತಿಗಳಲ್ಲಿ ಬರಲಿದೆ. 6 GB ಮತ್ತು 8GM RAM ಗಳಾಗಿವೆ. ಇದರ ಮೂಲ ಮಾದರಿಯ ಫೋನ್‌ 6GB ಮತ್ತು 128 GB ಸಂಗ್ರಹಣೆಯ ಫೋನ್‌ಗೆ 24,999 ರೂ.ಗಳಾಗಿದೆ. ಅದೇ ರೀತಿ 8GB RAM ಮಾದರಿಯ ಪೋನ್‌ಗೆ 25,999 ರೂ. ಗಳಾಗಿದೆ. ಎರಡೂ ಆವೃತ್ತಿಗಳು 3 ಬಣ್ಣಗಳ–ಹೈಪರ್‌ಸ್ಪೇಸ್‌ ಗೋಲ್ಡ್‌, ಡಾರ್ಕ್‌ ಮ್ಯಾಟರ್‌ ಮತ್ತು ನೆಬ್ಯುಲಾ ಬ್ಲ್ಯೂ ಆಯ್ಕೆಯೊಂದಿಗೆ ಲಭ್ಯವಿರಲಿದೆ.

ಇದು ರಿಯಲ್‌ಮಿಯ ಅಧಿಕೃತ ವೈಬ್‌ಸೈಟ್‌ನಲ್ಲಿ, ಇ–ಫ್ಲಾಟ್‌ಫಾರ್ಮ್‌ ಆದ ಫ್ಲಿಪ್‌ಕಾರ್ಟ್‌ ಮತ್ತು ಆಫ್‌ಲೈನ್‌ನಲ್ಲಿ ರಿಟೇಲ್‌ ಅಂಗಡಿಗಳಲ್ಲಿ ದೊರಯಲಿದೆ. ಖರೀದುದಾರರು ಮೂಲ ಮಾದರಿಯ ಫೋನ್‌ಗಳಲ್ಲಿ ಡಿಸ್ಕೌಂಟ್‌ಗಳನ್ನು ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಕಂಪನಿಯು realme.com ಮತ್ತು ಫ್ಲಿಪ್‌ಕಾರ್ಟ್‌ ಮೂಲಕ 6 GB ಯ ಬೇಸ್‌ ಮಾಡೆಲ್‌ ಫೋನ್‌ ಖರೀದಿಸುವವರಿಗೆ ಫ್ಲಾಟ್‌ 1,000 ರೂಗಳ ಡಿಸ್ಕೌಂಟ್‌ ನೀಡಿದೆ. ಇದರ ಜೊತೆಗೆ ಕಂಪನಿಯು 6 ತಿಂಗಳುಗಳ ನೋ–ಕಾಸ್ಟ್‌ EMI ಅನ್ನು ಸಹ ನೀಡಿದೆ.

ಇದನ್ನು ಓದಿ: Namma clinic: ಆರೋಗ್ಯ ಕ್ರಾಂತಿಗೆ ಕರ್ನಾಟಕ ಸಜ್ಜು: ಒಂದೇ ದಿನ 114 ನಮ್ಮ ಕ್ಲಿನಿಕ್‌ ಆರಂಭ

ಇದನ್ನು ಓದಿ: Twitter Accounts : ಖಾತೆಗಳ ಪರಿಶೀಲನೆಗಾಗಿ 3 ಬಣ್ಣಗಳನ್ನು ಪ್ರಾರಂಭಿಸಿದ ಎಲಾನ್‌ ಮಸ್ಕ್‌: ಇನ್ನು ಈ ಬಣ್ಣಗಳಲ್ಲಿ ಖಾತೆಗಳನ್ನು ಪರಿಶೀಲಿಸಲಿದೆ ಟ್ವಿಟರ್‌..

(Realme 10 Pro Plus 5G sale starts today in India. Know the availability and specifications)

Comments are closed.