Hair Beauty Tips:ಕೂದಲು ತೊಳೆಯಲು ಶಾಂಪು ಬಳಸಬೇಕಿಲ್ಲ! ಈ ಟಿಪ್ಸ್ ಅನುಸರಿಸಿ

(Hair Beauty Tips)ಅಂಗಡಿಯಿಂದ ಕೊಂಡು ತಂದ ರಾಸಾಯನಿಕಯುಕ್ತ ಶಾಂಪೂ ಬಳಕೆ ಮಾಡುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಮನೆಯಲ್ಲಿರುವ ನೈಸರ್ಗಿಕ ವಸ್ತುವನ್ನು ಬಳಕೆ ಮಾಡಿಕೊಂಡು ಕೂದಲು ಉದುರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಶಾಂಪೂ ಬಳಸದೆ ಕೂದಲು ಹೇಗೆ ತೊಳೆಯುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Hair Beauty Tips)ಅಲವೇರಾ ,ದಾಸವಾಳ ,ಗ್ರೀನ್‌ ಟೀ ಪುಡಿ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು:

  • ಅಲವೇರಾ
  • ದಾಸವಾಳ
  • ಗ್ರೀನ್‌ ಟೀ

ಮಾಡುವ ವಿಧಾನ:
ಮೊದಲಿಗೆ ಗ್ರೀನ್‌ ಟೀ ಪುಡಿಯನ್ನು ನೀರಲ್ಲಿ ನೆನಸಿಡಬೇಕು. ನಂತರ ಅಲವೇರಾದ ಸಿಪ್ಪೆಯನ್ನು ತೆಗೆದುಕೊಂಡು ಅದರಲ್ಲಿರುವ ಜೆಲ್‌ ಅನ್ನು ಬೌಲ್‌ ಗೆ ಹಾಕಿಕೊಳ್ಳಬೇಕು. ಅನಂತರ ಗ್ರೀನ್‌ ಟೀ ಯನ್ನು ಸೊಸಿಕೊಂಡು ,ಮಿಕ್ಸಿ ಜಾರಿಯಲ್ಲಿ ಎರಡನ್ನು ಹಾಕಿ ಗ್ರೈಂಡ್‌ ಮಾಡಿಕೊಳ್ಳಬೇಕು. ಇದನ್ನು ಕೂದಲ ಬುಡಕ್ಕೆ ಹಚ್ಚಿಕೊಂಡು ನಿದಾನಕ್ಕೆ ಮಸಜಾ ಮಾಡಿಕೊಂಡು ಎರಡು ಮೂರು ನಿಮಿಷ ಬಿಟ್ಟು ಕೂದಲು ತೊಳೆಯಬೇಕು. ತಲೆ ಸ್ನಾನ ಮಾಡುವಾಗ ಇದನ್ನು ಬಳಕೆ ಮಾಡುವುದರಿಂದ ಕೂದಲು ಸಮೃದ್ಧಿಯಾಗಿ ಬೆಳೆಯುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಕಡಲೆಹಿಟ್ಟು
  • ಮೆಂತ್ಯೆ ಪುಡಿ
  • ಅಗಸೆ ಬೀಜದ ಪುಡಿ
  • ಬಿಸಿನೀರು
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಬೌಲ್ ನಲ್ಲಿ ಒಂದು ಚಮಚ ಕಡಲೆ ಹಿಟ್ಟು, ಎರಡು ಚಮಚ ಮೆಂತ್ಯೆ ಪುಡಿ, ಒಂದು ಚಮಚ ಅಗಸೆ ಬೀಜದ ಪುಡಿ ಹಾಕಿಕೊಂಡು ಅದಕ್ಕೆ ಸ್ವಲ್ಪ ಬಿಸಿನೀರು ಹಾಕಿ ಮಿಶ್ರಣ ಮಾಡಿಕೊಂಡು ಅದಕ್ಕೆ ಅರ್ಧ ಚಮಚ ಕೊಬ್ಬರಿ ಎಣ್ಣೆ( ನೀವು ಬಳಕೆ ಮಾಡುವಂತಹ ಎಣ್ಣೆಯನ್ನು ಬಳಕೆ ಮಾಡಿ) ಹಾಕಿ ಮಿಶ್ರಣಮಾಡಿ ಕೂದಲಿಗೆ ಹಚ್ಚಿಕೊಂಡು ಮಸಾಜ್‌ ಮಾಡಿ ಸ್ವಲ್ಪ ಸಮಯದ ನಂತರ ಕೂದಲು ತೊಳೆದರೆ ,ಕೂದಲ ಹಲವು ತೊಂದರೆಗಳಿಂದ ಮುಕ್ತಿ ನೀಡುತ್ತದೆ.

ಕರಿಬೇವು, ಅಲವೇರಾ ಮಿಶ್ರಣ

ಬೌಲ್ ನಲ್ಲಿ ಬಿಸಿನೀರು ಹಾಕಿಕೊಂಡು ಎರಡು ಕಡ್ಡಿ ಕರಿಬೇವು ಹಾಕಿ ನೆನಸಿಡಬೇಕು ನಂತರ ಅದನ್ನು ಸೊಸಿಕೊಂಡು ಅಲವೇರಾ ಜೆಲ್‌ ಸೇರಿಸಿ ಅಂಟು ವಾಳದಿಂದ ನೊರೆಯನ್ನು ಮಾಡಿಕೊಂಡು ಅದನ್ನು ಬೆರೆಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು ಇದನ್ನು ಕೂದಲಿಗೆ ಹಚ್ಚಿಕೊಂಡು ತೊಳೆಯುವುದರಿಂದ ಕೂದಲ ರಕ್ಷಣೆಯನ್ನು ಮಾಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಸೀಗೆಕಾಯಿ ಪುಡಿ
  • ಮೆಂತ್ಯೆ ಪುಡಿ
  • ದಾಸವಾಳ ಹೂವಿನ ಪುಡಿ
  • ನೆಲ್ಲಿಕಾಯಿ ಪುಡಿ

ಮಾಡುವ ವಿಧಾನ
ಡಬ್ಬಿಯಲ್ಲಿ ಸೀಗೆಕಾಯಿ ಪುಡಿ, ಮೆಂತ್ಯೆ ಪುಡಿ, ದಾಸವಾಳ ಹೂವಿನ ಪುಡಿ, ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಡಬೇಕು. ತಲೆಸ್ನಾನ ಮಾಡುವಾಗ ಈ ಪುಡಿಯನ್ನು ಬೌಲ್‌ ಗೆ ಹಾಕಿಕೊಂಡು ಸ್ವಲ್ಪ ನೀರು ಬೆರೆಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಂಡು ಕೂದಲು ತೊಳೆಯುವುದರಿಂದ . ಕೂದಲು ಕಪ್ಪಾಗಿ ಬೆಳೆಯುವುದರ ಜೊತೆಗೆ ಕೂದಲ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ:Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

ಇದನ್ನೂ ಓದಿ:Flax Seed Gel:ತಲೆ ಕೂದಲು ಕಪ್ಪಾಗಬೇಕೆ ? ಹಾಗಾದ್ರೆ ಬಳಸಿ ಅಗಸೆ ಬೀಜದ ಜೆಲ್

ಇದನ್ನೂ ಓದಿ:Oats Beauty Tips :ಮುಖದ ಅಂದ ಹೆಚ್ಚಿಸುತ್ತೆ ಓಟ್ಸ್‌ ಫೇಸ್‌ ಫ್ಯಾಕ್‌

ಒಣಗಿದ ನೆಲ್ಲಿಕಾಯಿ,ಮೆಂತ್ಯೆ,ಅಂಟುವಾಳ ಐಸ್‌ ಕ್ಯೂಬ್‌

ಬೇಕಾಗುವ ಸಾಮಾಗ್ರಿಗಳು:

  • ಅಂಟು ವಾಳ
  • ಒಣಗಿದ ನೆಲ್ಲಿಕಾಯಿ
  • ಮೆಂತ್ಯೆ

ಮಾಡುವ ವಿಧಾನ:
ಮೊದಲಿಗೆ ಕುಟ್ಟಣಿಗೆಯಲ್ಲಿ ಅಂಟುವಾಳ , ಒಣಗಿದ ನೆಲ್ಲಿಕಾಯಿ ಸ್ವಲ್ಪ ಜಜ್ಜಿಕೊಂಡು ಬದಿಯಲ್ಲಿ ಇಟ್ಟುಕೊಳ್ಳಬೇಕು. ಪಾತ್ರೆಯಲ್ಲಿ ಜಜ್ಜಿಕೊಂಡ ಅಂಟುವಾಳ, ಒಣಗಿದ ನೆಲ್ಲಿಕಾಯಿ, ಮೆಂತ್ಯೆ ಹಾಕಿ ರಾತ್ರಿ ನೆನಸಿಡಿ ಬೆಳಿಗ್ಗೆ ಬಿಸಿಮಾಡಿಕೊಂಡು ತಣ್ಣಗಾದ ನಂತರ ಸೊಸಿಕೊಳ್ಳಬೇಕು. ಇದನ್ನು ಐಸ್‌ ಕ್ಯೂಬ್‌ ಡಬ್ಬಿಯಲ್ಲಿ ಹಾಕಿ ಪ್ರಿಡ್ಜ್‌ ನಲ್ಲಿ ಇಟ್ಟುಕೊಂಡು . ತಲೆಸ್ನಾನ ಮಾಡುವಾಗ ಈ ಐಸ್‌ ಕ್ಯೂಬ್‌ ತೆಗೆದುಕೊಂಡು ಕೂದಲು ತೊಳೆಯುವುದರಿಂದ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Hair Beauty Tips No need to use shampoo to wash hair! Follow these tips

Comments are closed.