Realme 9 Pro 5G: ಇಂದಿನಿಂದ ಗ್ರಾಹಕರ ಕೈ ಸೇರಲಿದೆ ರಿಯಲ್ ಮಿ 9 ಪ್ರೊ 5ಜಿ; ವಿಶೇಷ ಆಫರ್ ಘೋಷಿಸಿದ ಫ್ಲಿಪ್ ಕಾರ್ಟ್

ರಿಯಲ್ ಮಿಯ ಇತ್ತೀಚಿನ ರಿಯಲ್ ಮಿ 9 ಪ್ರೊ 5ಜಿ(Realme 9 Pro 5G) ಭಾರತದಲ್ಲಿ ಫೆಬ್ರವರಿ 23 ರಂದು ಮೊದಲ ಬಾರಿಗೆ ರಿಯಲ್ ಮಿ ಇ ಸ್ಟೋರ್ (Realme e-store )ಮತ್ತು ಫ್ಲಿಪ್ ಕಾರ್ಟ್ ಮೂಲಕ ಮಾರಾಟವಾಗಲಿದೆ. ಸ್ಮಾರ್ಟ್‌ಫೋನ್ ಗಮನ ಸೆಳೆಯುವ ವೈಶಿಷ್ಟ್ಯಗಳನ್ನು ನೀಡುತ್ತದೆ .ಆದರೆ ಇನ್ನೂ ಕೈಗೆಟುಕುವ ಬೆಲೆಯನ್ನು ಉಳಿಸಿಕೊಂಡಿದೆ. ಭಾರತದಲ್ಲಿನ ಗ್ರಾಹಕರು ಅದರ ಎರಡು ಸ್ಟೋರೇಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು. ಅಷ್ಟೇ ಅಲ್ಲದೇ, ಅದು ಮಿಡ್ನೈಟ್ ಬ್ಲಾಕ್, ಅರೋರಾ ಗ್ರೀನ್ ಮತ್ತು ಸನ್ರೈಸ್ ಬ್ಲೂ ಹೀಗೆ ಮೂರು ಬಣ್ಣಗಳಲ್ಲಿ ಬರುತ್ತದೆ. ರಿಯಲ್ ಮಿ ಇ ಸ್ಟೋರ್ ಮತ್ತು ಫ್ಲಿಪ್ ಕಾರ್ಟ್ (Filpkart) ಎರಡೂ ಮಾರಾಟದ ಕೊಡುಗೆಗಳನ್ನು ನೀಡುತ್ತಿದ್ದು ಅದು ಖರೀದಿ ಮಾಡಲು ಸಹಾಯ ಮಾಡುತ್ತದೆ. ರಿಯಲ್ ಮಿ 9 ಪ್ರೊ 5ಜಿ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತದಲ್ಲಿ ರಿಯಲ್ ಮಿ 9ಪ್ರೊ 5ಜಿ ಬೆಲೆ, ಮಾರಾಟದ ಕೊಡುಗೆಗಳು
ಭಾರತದಲ್ಲಿ ರಿಯಲ್ ಮಿ 9ಪ್ರೊ 5ಜಿ ಬೆಲೆಯು ಬೇಸ್ 6ಜಿಬಿ ರಾಮ್ + 128ಜಿಬಿ ಸ್ಟೋರೇಜ್ ಆಯ್ಕೆಗೆ ರೂ 17,999 ರಿಂದ ಪ್ರಾರಂಭವಾಗುತ್ತದೆ. ಆದರೆ ಅದೇ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ 8ಜಿಬಿ ರಾಮ್ ರೂಪಾಂತರದ ಬೆಲೆ 20,999 ರೂ. ರಿಯಲ್ ಮಿ ವೆಬ್‌ಸೈಟ್ ಬಜಾಜ್ ಮತ್ತು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಆರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇ ಎಂಐ ಪಾವತಿ ವಿಧಾನವನ್ನು ನೀಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ರೂ 2,000 ತ್ವರಿತ ರಿಯಾಯಿತಿಯನ್ನು ಸಹ ಆನಂದಿಸಬಹುದು. ಮತ್ತೊಂದೆಡೆ, ಫ್ಲಿಪ್‌ಕಾರ್ಟ್ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮಾಲೀಕರಿಗೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.

ವಿಶೇಷಣಗಳಿಗೆ ಬರುವುದಾದರೆ, ಈ ಸ್ಮಾರ್ಟ್ ಫೋನ್ 6.6-ಇಂಚಿನ 120ಹರ್ಟ್ಸ್ ಫುಲ್ ಎಚ್ಡಿ+ ಡಿಸ್ಪ್ಲೇಯೊಂದಿಗೆ 90.8 ಪ್ರತಿಶತ ಸ್ಕ್ರೀನ್-ಟು-ಬಾಡಿ ರೇಷಿಯೋ ಹೊಂದಿದೆ. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ 8ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಜೊತೆ ಜೋಡಿಸಲ್ಪಟ್ಟಿದೆ. ಇತರ ರಿಯಲ್ ಮಿ ಫೋನ್‌ಗಳಂತೆಯೇ, ರಿಯಲ್ ಮಿ 9 ಪ್ರೊ 5ಜಿ ಡೈನಾಮಿಕ್ ರಾಮ್ ಬೆಂಬಲವನ್ನು ಪಡೆಯುತ್ತದೆ. ಅದು 13ಜಿಬಿ ವರೆಗೆ ರಾಮ್ ಸಾಮರ್ಥ್ಯವನ್ನು ಹೆಚ್ಚಿಸಲು ಐಡಲ್ ರೋಮ್ ಅನ್ನು ಬಳಸಿಕೊಳ್ಳುತ್ತದೆ. ಹಿಂಭಾಗದಲ್ಲಿ, ನಾವು 64-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೇವೆ ಮತ್ತು ಮುಂಭಾಗವು 16-ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಅನ್ನು ಒಳಗೊಂಡಿದೆ.

ಹೆಸರೇ ಸೂಚಿಸುವಂತೆ, ಫೋನ್ 5ಜಿ ಸಂಪರ್ಕವನ್ನು ಬೆಂಬಲಿಸುತ್ತದೆ. ಮತ್ತು ನಾವು ಡ್ಯುಯಲ್-ಬ್ಯಾಂಡ್ ವೈಫೈ ಅನ್ನು ಸಹ ಪಡೆಯುತ್ತೇವೆ. ಇತರ ಸಂಪರ್ಕ ಆಯ್ಕೆಗಳಲ್ಲಿ 3.5ಎಂಎಂ ಆಡಿಯೋ ಜ್ಯಾಕ್, ಚಾರ್ಜಿಂಗ್‌ಗಾಗಿ ಯುಎಸ್ ಬಿ ಸಿ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್ ಮತ್ತು 4ಜಿ ಸೇರಿವೆ. ಇದು 5000 ಎಂಎಎಚ್ ಬ್ಯಾಟರಿ ಹೊಂದಿದೆ.

ಇದನ್ನೂ ಓದಿ: Best Face Mask: ಸುಂದರ ಹೊಳಪಿನ ಚರ್ಮಕ್ಕೆ ಸೆಲೆಬ್ರೆಟಿಗಳು ಹೇಳಿರುವ 5 ಫೇಸ್ ಮಾಸ್ಕ್ ಟ್ರೈ ಮಾಡಿ

(Realme 9 pro 5G sales started in India full details are here)

Comments are closed.