Realme Buds Air 3 Neo : ಹೊಸ ಇಯರ್‌ ಬಡ್ಸ್‌ ಬಿಡುಗಡೆ ಮಾಡಿದ ರಿಯಲ್‌ಮಿ! 30 ಗಂಟೆ ಬ್ಯಾಟರಿ ಲೈಫ್‌ ನೀಡುವ ಏರ್‌ 3 ನಿಯೊ!!

ಇಯರ್‌ ಬಡ್ಸ್‌(Realme Buds) ತಯಾರಿಸುವ ಕಂಪನಿ ರಿಯಲ್‌ಮಿ ಹೊಸದಾದ ಏರ್‌ 3 ನಿಯೊ ಇಯರ್‌ ಬಡ್ಸ್‌(Realme Buds Air 3 Neo ) ಅನ್ನು ಬಿಡುಗಡೆ ಮಾಡಿದೆ. ಇದು ಏರ್‌ 2 ನಿಯೊ ದ ಮುಂದುವರಿದ ಶ್ರೇಣಿಯಾಗಿ ಬಿಡುಗಡೆಗೊಂಡಿದೆ. 30 ಗಂಟೆಗಳ ಕಾಲ ನಿರಂತರ ಬ್ಯಾಟರಿ ಲೈಫ್‌ ನಂತಹ ಬದಲಾವಣೆಗಳೊಂದಿಗೆ ಹೊಸದಾಗಿ ಏರ್‌ 3 ನಿಯೊ ಇಯರ್‌ ಬಡ್ಸ್‌(Realme Buds Air 3 Neo ) ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಸದ್ಯ ಚೀನಾದಲ್ಲಿ ಬಿಡುಗಡೆಯಾಗಿರುವ ಏರ್‌ 3 ಇಯರ್‌ ಬಡ್ಸ್‌ಗಳು ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಂಭವವಿದೆ.

ರಿಯಲ್‌ಮಿ ಯ ಏರ್‌ 3 ನಿಯೊ ಇಯರ್‌ ಬಡ್ಸ್‌ನ ವೈಶಿಷ್ಟ್ಯಗಳು ಹೀಗಿವೆ:

ರಿಯಲ್‌ಮಿ ಯ ಏರ್‌ 3 ನಿಯೊ ಇಯರ್‌ ಬಡ್ಸ್‌ ಇದು ಬಡ್ಸ್‌ ಏರ್‌ 3 ನಂತಹ ಸ್ಟೆಮ್‌ ವಿನ್ಯಾಸವನ್ನೇ ಹೊಂದಿದೆ. ಇದರ ಹಿಂದಿನ ಆವೃತ್ತಿಯಾದ ಬಡ್ಸ್‌ ಏರ್‌ 2 ನಿಯೊ ಸ್ಟೆಮ್‌ ರಚನೆಯನ್ನು ಹೊಂದಿರಲಿಲ್ಲ. ಕಿವಿಗೆ ಧರಿಸಬಹುದಾದ ರಿಯಲ್‌ಮಿ ಯ ಏರ್‌ 3 ನಿಯೊ ಇಯರ್‌ ಬಡ್‌ ಡಾಲ್ಬಿ ಅಟ್ಮಾಸ್‌ ಚಾಲಿತ 3D ಸೌಂಡ್‌ ನ ಅನುಭವ ನೀಡುತ್ತದೆ. ಇದು ಎನ್ವೈರ್‌ಮೆಂಟಲ್‌ ನೊಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸಿದರೂ, ನೊಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸುವುದಿಲ್ಲ.

ರಿಯಲ್‌ಮಿ ಯ ಏರ್‌ 3 ನಿಯೊ ಇಯರ್‌ ಬಡ್ಸ್‌ 10mm ಡ್ರೈವರ್ಸ್‌, ಗೇಮಿಂಗ್‌ ಆಡಿಯೊದ ಅನುಭವಕ್ಕಾಗಿ 88ms ವರೆಗೆ ಕಡಿಮೆ ಲೆಟೆನ್ಸಿ ಮೋಡ್‌ ಅನ್ನು ಹೊಂದಿದೆ. ಟಚ್‌ ಗೆಸ್ಚರ್‌ ಕಂಟ್ರೋಲ್‌ ಅನ್ನೂ ಸಹ ಬೆಂಬಲಿಸುತ್ತದೆ. ಸ್ಪ್ಲಾಶ್‌ ರೆಸಿಸ್ಟೆನ್ಸ್‌ಗಾಗಿ IPX5 ನಿಂದ ದೃಢೀಕರಿಸಲ್ಪಟ್ಟಿದೆ. ಸಂಪರ್ಕಕ್ಕಾಗಿ ಬ್ಲೂಟೂತ್‌ 5.2 ಅನ್ನು ಹೊಂದಿದೆ. ಇದಲ್ಲದೇ ಹೆಚ್ಚಿನ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ಬೆಂಬಲಿಸುತ್ತದೆ. ಏರ್‌ 3 ನಿಯೊ ಇಯರ್‌ ಬಡ್‌ಗಳು ಏಳು ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್‌, ಮತ್ತು 30 ಗಂಟೆ ವರೆಗೆ ಚಾರ್ಜಿಂಗ್‌ ಕ್ಷಮತೆ ನೀಡುತ್ತದೆ.

ಬೆಲೆ ಮತ್ತು ಲಭ್ಯತೆ :

ರಿಯಲ್‌ಮಿ ಏರ್‌3 ಇಯರ್‌ ಬಡ್ಸ್‌ಗಳ ಬೆಲೆಯು CNY 149 (ಅಂದಾಜು 1,760 ರೂ.ಗಳು) ಆಗಿದೆ. ಇದು ಸ್ಟ್ರೀಮರ್ ವೈಟ್ ಮತ್ತು ಸ್ಟಾರ್ರಿ ನೈಟ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ರಿಯಲ್‌ಮಿ ಭಾರತದಲ್ಲಿ ಹಲವಾರು ವೈಯರ್‌ಲೆಸ್‌ ಪರಿಕರಗಳನ್ನು ಮಾರಾಟ ಮಾಡುತ್ತದೆ. ಈ ರಿಯಲ್‌ಮಿ ಕಂಪನಿಯ ಏರ್‌ 3 ಬಡ್ಸ್‌ಗಳು ರೂ. 3,999, ಬಡ್ಸ್‌ ಏರ್‌ 2 ಅನ್ನು 3,299, ಬಡ್ಸ್‌ ಏರ್‌ ಪ್ರೊ ಅನ್ನು ರೂ. 4,999 ಬಡ್ಸ್‌ Q2 ಅನ್ನು 1,999 ರೂಪಾಯಿಗಳಲ್ಲಿ ಮಾರಾಟ ಮಾಡುತ್ತಿದೆ. ಮುಂಬರುವ ವಾರಗಳಲ್ಲಿ ಕಂಪನಿಯು ಭಾರತದ ಮಾರುಕಟ್ಟೆಗೆ ಏರ್‌ 3 ನಿಯೊ ಇಯರ್‌ ಬಡ್ಸ್‌ಗಳನ್ನು ಪರಿಚಯಿಸಬಹುದು ಎನ್ನಲಾಗುತ್ತದೆ.

ಇದನ್ನೂ ಓದಿ : Nokia C21 Plus : ನೋಕಿಯಾ C21 ಪ್ಲಸ್‌! ಆಕರ್ಷಕ ಆಫರ್‌ನೊಂದಿಗೆ ನಿಮ್ಮ ಬಜೆಟ್‌ನಲ್ಲೇ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌!

ಇದನ್ನೂ ಓದಿ : NEET UG Exam Postpone :ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ ? ದೆಹಲಿ ಹೈಕೋರ್ಟ್ ಇಂದು ಅರ್ಜಿಯ ವಿಚಾರಣೆ

(Realme Buds Air 3 Neo launched 30 hours battery is its special feature)

Comments are closed.