Emergency Movie: ‘ಎಮರ್ಜೆನ್ಸಿ’ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕಂಗನಾ; ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ ಮೂಲಕ ಅನಾವರಣ ಗೊಳಿಸಿದರು . ಈ ಚಿತ್ರದಲ್ಲಿ ಕಂಗನಾ ದಿವಂಗತ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರ ನಿಭಾಯಿಸಲಿದ್ದಾರೆ. ಕಂಗನಾ ಕಳೆದ ವರ್ಷ ತನ್ನ ನಿರ್ದೇಶನದ ‘ಎಮರ್ಜೆನ್ಸಿ’ಯನ್ನು ಘೋಷಿಸಿದರು. ಈ ಪೋಸ್ಟರ್ ನಲ್ಲಿ ಅವರು ಸೀರೆಯನ್ನು ಧರಿಸಿ ಮತ್ತು ಕೈಯಲ್ಲಿ ಕನ್ನಡಕವನ್ನು ಹಿಡಿದಿದ್ದಾರೆ (Emergency Movie).

https://www.instagram.com/p/Cf-rnETBRiz/?utm_source=ig_embed&ig_rid=2d41dedb-2813-4fdd-b745-33bcfa8eb631

ಕಂಗನಾ ರಣಾವತ್ ಈ ಚಿತ್ರಕ್ಕಾಗಿ ಎರಡನೇ ಬಾರಿಗೆ ನಿರ್ದೇಶಕರಾಗುತ್ತಿದ್ದರೆ. ಈ ಹಿಂದೆ, ಅವರು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿಯನ್ನು 2019 ರಲ್ಲಿ ಬಿಡುಗಡೆ ಮಾಡಿದ್ದರು. ಚಿತ್ರದ ಬಗ್ಗೆ ಮಾತನಾಡುತ್ತಾ, ಎಮರ್ಜೆನ್ಸಿ ರಾಜಕೀಯ ನಾಟಕವಾಗಿದ್ದರೂ, ಇದು ಇಂದಿರಾ ಗಾಂಧಿಯವರ ಬಯೋಪಿಕ್ ಅಲ್ಲ ಎಂದು ನಟಿ ಈ ಹಿಂದೆ ಉಲ್ಲೇಖಿಸಿದ್ದರು. “ಇದು ಇಂದಿರಾ ಗಾಂಧಿಯವರ ಜೀವನಾಧಾರಿತ ಚಿತ್ರವಲ್ಲ. ಇದೊಂದು ಗ್ರ್ಯಾಂಡ್ ಪೀರಿಯಡ್ ಚಿತ್ರ. ನಿಖರವಾಗಿ ಹೇಳುವುದಾದರೆ, ಇದು ಪ್ರಸ್ತುತ ಭಾರತದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಅರ್ಥಮಾಡಿಕೊಳ್ಳಲು ನನ್ನ ಪೀಳಿಗೆಗೆ ಸಹಾಯ ಮಾಡುವ ರಾಜಕೀಯ ನಾಟಕವಾಗಿದೆ, ”ಎಂದು ಅವರು ಉಲ್ಲೇಖಿಸಿ ಹೇಳಿದ್ದಾರೆ.

ನಟಿ ಆಗಾಗ್ಗೆ ತಮ್ಮ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿಅಪ್ಡೇಟ್ ಹಂಚಿಕೊಳ್ಳುತ್ತಾರೆ. ಕಳೆದ ತಿಂಗಳು, ಅವರು ತಮ್ಮ ಟ್ರಾನ್ಸ್ಫವ್ರ್ಮೇಷನ್ ಒಂದು ನೋಟವನ್ನು ನೀಡುವ ಒಂದೆರಡು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಆಸ್ಕರ್ ಮತ್ತು BAFTA-ವಿಜೇತ ಮೇಕಪ್ ಕಲಾವಿದ ಡೇವಿಡ್ ಮಲಿನೋವ್ಸ್ಕಿಯನ್ನು ಪರಿಚಯಿಸಿದ್ದರು. ಅವರು ತಮ್ಮ ಪಾತ್ರಕ್ಕೆ ರೂಪಾಂತರಗೊಳ್ಳಲು ಸಹಾಯ ಮಾಡಿದರು ಎಂದಿದ್ದಾರೆ . ಈ ಕುರಿತು ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಡೇವಿಡ್ ಚಿತ್ರದ ಲುಕ್ ಕುರಿತು ಕಂಗನಾ ಜೊತೆ ಚರ್ಚಿಸುವುದನ್ನು ಮತ್ತು ಮೇಕ್ಅಪ್‌ನಲ್ಲಿ ಸಹಾಯ ಮಾಡುವುದನ್ನು ಕಾಣಬಹುದು.

ಏತನ್ಮಧ್ಯೆ, ಕಂಗನಾ ರಣಾವತ್ ಅವರ ಕೊನೆಯ ಥಿಯೇಟ್ರಿಕಲ್ ಬಿಡುಗಡೆಯಾದ ಧಕಡ್ ಬಾಕ್ಸ್ ಆಫೀಸ್‌ನಲ್ಲಿ ಪ್ಲಾಪ್ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಕೊನೆಗೊಳಿಸಿದ ನಂತರ, ರಜನೀಶ್ ಘಾಯ್ ಅವರ ನಿರ್ದೇಶನದ ಈ ಚಿತ್ರ ರೂ 3 ಕೋಟಿ ಗಳಿಸಲು ವಿಫಲವಾಯಿತು. ಬಾಲಿವುಡ್ ಹಂಗಾಮಾದಲ್ಲಿ ಇತ್ತೀಚಿನ ವರದಿಯ ಪ್ರಕಾರ, ನಿರ್ಮಾಪಕರು 78 ಕೋಟಿ ರೂಪಾಯಿ ನಷ್ಟವನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಕಂಗನಾ ಅವರ ಆಕ್ಷನ್‌ನ ಅಂದಾಜು ಮೇಕಿಂಗ್ ಬಜೆಟ್ 85 ಕೋಟಿ ರೂಪಾಯಿಗಳು. ಈ ಚಿತ್ರವು ಬಾಕ್ಸಾಫೀಸ್‌ನಲ್ಲಿ ಜೀವಿತಾವಧಿಯಲ್ಲಿ 2.58 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :Monkey Pox: ಕೇರಳದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಲಕ್ಷಣ ಪತ್ತೆ

ಇದನ್ನೂ ಓದಿ : NEET UG Exam Postpone :ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ ? ದೆಹಲಿ ಹೈಕೋರ್ಟ್ ಇಂದು ಅರ್ಜಿಯ ವಿಚಾರಣೆ

(Emergency Movie first look poster out )

Comments are closed.