Student delivers baby : ಶಾಲಾ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ :10ನೇ ತರಗತಿ ವಿದ್ಯಾರ್ಥಿ ಬಂಧನ

ತಮಿಳುನಾಡು :Student delivers baby : ತಮಿಳುನಾಡಿನ ಕಡಲೂರು ಜಿಲ್ಲೆಯ ಭುವನಗಿರಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದ ಅಡಿಯಲ್ಲಿ 10ನೇ ತರಗತಿ ವಿದ್ಯಾರ್ಥಿಯ ಮೇಲೆ ಪ್ರಕರಣ ದಾಖಲಾಗಿದೆ. ಗುರುವಾರ ವಿದ್ಯಾರ್ಥಿಯೊಬ್ಬ ಪೊದೆಯಲ್ಲಿ ಮಗುವನ್ನು ನೋಡಿದ್ದು ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದನು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನವಜಾತ ಶಿಶುವಿನ ಮೃತದೇಹವನ್ನು ಪೊದೆಯಿಂದ ಹೊರ ತೆಗೆದಿದ್ದಾರೆ.

ಶಿಶುವಿನ ಕರುಳ ಬಳ್ಳಿಯನ್ನು ಸರಿಯಾಗಿ ಕತ್ತರಿಸಲಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಮಗುವಿಗೆ ಯಾರೋ ಶಾಲೆಯಲ್ಲಿಯೇ ಜನ್ಮ ನೀಡಿದ್ದು ಪೊದೆಯಲ್ಲಿ ತಂದು ಎಸೆದಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿದ ಸಂದರ್ಭದಲ್ಲಿ 11ನೇ ತರಗತಿ ವಿದ್ಯಾರ್ಥಿನಿಯೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿ ತಪ್ಪೊಪ್ಪಿಕೊಂಡಿದ್ದಾಳೆ.

ಶಾಲಾ ಕಟ್ಟಡದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿಯೊಬ್ಬಳು ಮಗುವನ್ನು ಶಾಲೆಯ ಕಾಂಪೌಂಡ್​​ ಬಳಿಯಲ್ಲಿಯೇ ಇದ್ದ ಪೊದೆಯಲ್ಲಿ ಎಸೆದು ಮನೆಗೆ ತೆರಳಿದ್ದಳು. ವಿಚಾರಣೆಯ ಸಂದರ್ಭದಲ್ಲಿ ಈಕೆ ಮತ್ತೊಂದು ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಿಂದಾಗಿ ನಾನು ಗರ್ಭ ಧರಿಸಿದ್ದೆ ಎಂದು ಹೇಳಿದ್ದಾಳೆ. ಬಾಲಕಿಯನ್ನು ಪ್ರಸ್ತುತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ವಿರುದ್ದ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ಸುರಿಯುತ್ತಿರುವ ರಣ ಮಳೆಗೆ ಬಾಳಿ ಬದುಕಬೇಕಿದ್ದ ಯುವತಿಯೊರ್ವಳು ಬಲಿಯಾಗಿದ್ದಾಳೆ. ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಬಳಿಯ ಸಿದ್ಧಾಪುರದ ನಿವಾಸಿ ಅಖಿಲಾ ಎಂಬ ಯುವತಿ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರ ನಿವಾಸಿಯಾಗಿರೋ 23 ವರ್ಷದ ಅಖಿಲಾ ಸೋಮವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಸಿದ್ಧಾಪುರ ಬಳಿ ಇರುವ ಮಯೂರ ಬೇಕರಿ ಬಳಿ ರಸ್ತೆ ಮೇಲೆ ಮಂಡಿಯುದ್ದಕ್ಕೆ ನೀರು ನಿಂತಿತ್ತು.

ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದು,ರಾತ್ರಿ 9.30 ಆಗಿರೋದರಿಂದ ಅಖಿಲಾ ಅದೇ ಮಳೆಯಲ್ಲೇ ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಮನೆಗೆ ಹೋಗೋ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ರಸ್ತೆಯಲ್ಲಿ ನೀರು ಹೆಚ್ಚಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವಂತಾಗಿದೆ. ಈ ಸಮಯದಲ್ಲಿ,ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ ಹಿಡಿದುಕೊಂಡಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ.

ಇದನ್ನು ಓದಿ : ಚಿರು ಸ್ನೇಹಿತರ ಹೊಸ ಸಾಹಸ‌ : ಒಂದೇ ಸಿನಿಮಾದಲ್ಲಿ ಪನ್ನಾಗಭರಣ, ಮೇಘನಾರಾಜ್‌ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

Class 11 Student delivers baby in school toilet, 15 year boy arrests

Comments are closed.