Realme C33 Flipkart : 50 ಮೆಗಾ ಫಿಕ್ಸಲ್‌ ಕ್ಯಾಮರಾ, ಬೆಲೆ 8,900 ರೂ ಬೆಲೆ : ಮಾರುಕಟ್ಟೆಗೆ ಬಂತು ರಿಯಲ್‌ ಮಿ ಸಿ 33 ಪೋನ್‌

(Realme C33 Flipkart)ತಂತ್ರಜ್ಞಾನ ಲೋಕದಲ್ಲಿ ದಿನಕ್ಕೊಂದು ಆವಿಷ್ಕಾರಗಳು ನಡೆಯುತ್ತಿವೆ. ಅದ್ರಲ್ಲೂ ಹೊಸ ಹೊಸ ವಿನ್ಯಾಸ ಮೊಬೈಲ್‌ ಪೋನ್‌ಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದ್ರಲ್ಲೂ ರಿಯಲ್‌ ಮೀ ( Realme) ಕಂಪೆನಿ ಹೊಸ ಮೊಬೈಲ್‌ ಪೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, 50 ಮೆಗಾ ಫಿಕ್ಸಲ್‌ ಕ್ಯಾಮರಾ ಸೇರಿದಂತೆ ಹಲವು ವಿಶಿಷ್ಟತೆಯನ್ನು ಹೊಂದಿರುವ ಪೋನ್‌ ಅನ್ನು ಕೇವಲ 8,900 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇಂದಿನಿಂದ ಪ್ಲಿಪ್‌ ಕಾರ್ಟ್‌ನಲ್ಲಿ ಸೇಲ್‌ ಆರಂಭಿಸಿದೆ.

(Realme C33 Flipkart)ಗ್ರಾಹಕರು Realme ಕಂಪೆನಿಯ ಮೊಬೈಲ್‌ಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಅದ್ರಲ್ಲೂ(Realme C33) ರಿಯಲ್‌ ಮೀ C33 ಮೊಬೈಲ್‌ 50-ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, ಪಿಂಗರ್‌ ಪ್ರಿಂಟ್‌ ತಂತ್ರಜ್ಞಾನವನ್ನು ಒಳಗೊಂಡಿದೆ. Realme C33 ಮೊಬೈಲ್ 3GB RAM ಜೊತೆಗೆ 32GB ಸಂಗ್ರಹದೊಂದಿಗೆ ಸಾಮರ್ಥ್ಯವನ್ನು ಹೊಂದಿದೆ. ಇದು ಮಾರುಕಟ್ಟೆಯಲ್ಲಿ 8,999 ರೂ. ಲಭ್ಯವಾಗುತ್ತಿದೆ. ಇನ್ನು (Realme C33)ರಿಯಲ್‌ ಮೀ ಸಿ 33 4GB RAM ಜೊತೆಗೆ 64GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಮೊಬೈಲ್ 9,999 ‌ ರೂಪಾಯಿಗೆ ಮಾರಾಟವಾಗುತ್ತಿದೆ.

Realme C33 Flipkart ನಲ್ಲಿ ಮಾರಾಟವನ್ನು ಆರಂಭಿಸಿದ್ದು, ಕೆಲವು ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ಗಳ ಮೇಲೆಯೂ ರಿಯಾಯಿತಿಯನ್ನು ಘೋಷಿಸಿದೆ. ಪ್ರಮುಖವಾಗಿ HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 1,000 ರೂ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ವಹಿವಾಟಿನ ಮೇಲೆ 5% ಕ್ಯಾಶ್‌ಬ್ಯಾಕ್ ಇದೆ. Realme C33 88.7% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 6.5-ಇಂಚಿನ HD+ ಪರದೆಯನ್ನು ಹೊಂದಿದೆ. ಪ್ರದರ್ಶನವು 120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 400 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಯುನಿಸಾಕ್ ಟಿ612 ಪ್ರೊಸೆಸರ್ ಜೊತೆಗೆ 4ಜಿಬಿ ವರೆಗೆ RAM ಒಳಗೊಂಡಿದೆ.

Realme C33 ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆ ಮತ್ತು ಬೆಲೆ:

ಫೋನ್ 64GB ವರೆಗೆ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು, 1TB ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ ಕಂಪನಿಯ ಸ್ವಂತ Realme UI S ಆವೃತ್ತಿಯಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. Realme C33 ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾವನ್ನು 0.3MP ಸೆಕೆಂಡರಿ ಕ್ಯಾಮೆರಾದೊಂದಿಗೆ ಜೋಡಿಸಲಾಗಿದೆ. ಹ್ಯಾಂಡ್‌ಸೆಟ್ ವಿಹಂಗಮ ನೋಟ, ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್, ಸೂಪರ್ ನೈಟ್ ಮೋಡ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ : ಹಣ ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ

ಇದನ್ನೂ ಓದಿ : ಅಕ್ರಮ ಲೋನ್ ಆ್ಯಪ್ ಗಳಿಗೆ ಕೇಂದ್ರ ಸರ್ಕಾರದಿಂದ ಅಂಕುಶ

ಸೆಲ್ಪಿ ಪ್ರಿಯರಿಗಾಗಿಯೇ ಸ್ಮಾರ್ಟ್‌ ಪೋನ್‌ನ ಮುಂಭಾಗದಲ್ಲಿ 5MP ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು 5,000 mAh ಬ್ಯಾಟರಿ ಹೊಂದಿದ್ದು, 10W ಚಾರ್ಜಿಂಗ್ ಬೆಂಬಲದೊಂದಿಗೆ ಬಳಕೆ ಮಾಡಬಹುದಾಗಿದೆ. ಇದು 38 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. Realme C33 4G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಸಂಪರ್ಕ ವೈಶಿಷ್ಟ್ಯಗಳಾಗಿ ನೀಡುತ್ತದೆ. ಹ್ಯಾಂಡ್‌ಸೆಟ್ 187 ಗ್ರಾಂ ತೂಗುತ್ತದೆ ಮತ್ತು 8.3 ಮಿಮೀ ದಪ್ಪವನ್ನು ಅಳೆಯುತ್ತದೆ. ಸುರಕ್ಷತೆಗಾಗಿ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಗ್ರಾಹಕರ ಕೈ ಸೇರಲು ಸಜ್ಜಾಗಿದೆ.

Realme C33 Flipkart first sale today at 12pm: price and features

Comments are closed.