Mahesh Babu:ವೈರಲ್‌ ಆಯ್ತು ನಟ ಮಹೇಶ್‌ ಬಾಬು ಹೊಸ ಲುಕ್‌

ನಟ ಮಹೇಶ್‌ ಬಾಬು (Mahesh Babu) ತಮ್ಮ ಹೆಚ್ಚಿನ ಸಮಯವನ್ನು ಫ್ಯಾಮಿಲಿ ಜೊತೆ ಕಳೆಯುವ ಮೂಲಕ ತಾವೊಬ್ಬ ಫ್ಯಾಮಿಲಿ ಮ್ಯಾನ್‌ ಅಂತಾ ಕರೆಯಿಸಿಕೊಂಡಿದ್ದಾರೆ. ತಮ್ಮ ನಟನೆಯ ಯಾವುದೇ ಸಿನಿಮಾ ತೆರೆ ಕಂಡದ್ರೂ ಕೂಡ ನಂತರದಲ್ಲಿ ಅವರು ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗುವುದು ಮಾಮೂಲು. ʼಸರ್ಕಾರು ವಾರಿ ಪಾಟ” ಚಿತ್ರ ತೆರೆಕಂಡ ಬೆನ್ನಲ್ಲೇ ಫಾರಿನ್‌ ಟೂರ್‌ ಕೈಗೊಂಡಿದ್ದು, ಕುಟುಂಬಸ್ಥರ ಜೊತೆಗೆ ಸಖತ್‌ ಎಂಜಾಯ್‌ ಮಾಡಿದ್ದಾರೆ. ಆದ್ರೆ ಟೂರ್‌ ಜೊತೆಗೆ ಇದೀಗ (Mahesh Babu) ಮಹೇಶ್‌ ಬಾಬು ಅವರ ಹೊಸ ಲುಕ್‌ ಎಲ್ಲರ ಗಮನ ಸೆಳೆದಿದೆ.

ಮಹೇಶ್‌ ಬಾಬು ಖ್ಯಾತ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ (Trivikram Srinivas)ರವರ ಜೊತೆಗೂಡಿ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಪ್ರಥಮ ದಿನದ ಶೂಟಿಂಗ್‌ ನಡೆಸಿದ್ದು, ಮಹೇಶ್‌ ಬಾಬು ಅವರು ಹೊಸ ಲುಕ್‌ ನೊಂದಿಗೆ ಶೂಟಿಂಗ್‌ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಹೇಶ್‌ ಬಾಬುರವರ ಹೊಸ ಲುಕ್‌ನ ಪೋಟೊವನ್ನು ಪತ್ನಿ ತಮ್ಮ ಇನ್‌ ಸ್ಟಾಗ್ರಾಮ್‌ ಅಕೌಂಟ್ ನಲ್ಲಿ ಹಿರಿಬಿಟ್ಟಿದ್ದಾರೆ. ಮಹೇಶ್‌ ಬಾಬುರವರ ಹೊಸ ಲುಕ್‌ ನೋಡಿದ ಪ್ರೇಕ್ಷಕರು ಪುಲ್‌ ಫಿದಾ ಆಗಿದ್ದಾರೆ. ಮಹೇಶ್‌ ಬಾಬು ನಟಿಸುವ ಸಿನಿಮಾದಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿದ್ದು ಅದು ಈ ಬಾರಿ ಕೂಡ ಮುಂದುವರಿದಿದೆ. ಮಹೇಶ್‌ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್‌ (Trivikram Srinivas)ರವರು 12 ವರ್ಷಗಳ ನಂತರ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವು ಮಹೇಶ್‌ ಬಾಬುರವರ 28ನೇ ಸಿನಿಮಾವಾಗಿದೆ. ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ (Trivikram Srinivas) ಮತ್ತು ಮಹೇಶ್‌ ಬಾಬು ರವರು ಸೇರಿ ನೆಡೆಸುತ್ತಿರುವ ಸಿನಿಮಾವಾಗಿದ್ದರಿಂದ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಗಳಿವೆ. ಇದೊಂದು ಮಾಸ್‌ ಸಿನಿಮಾವಾಗಿ ತೆರೆಗೆ ಬರೋದು ಪಕ್ಕಾ.

ಆದರೆ ಚಿತ್ರ ತಂಡ ಸಿನಿಮಾದ ಕುರಿತು ಹೆಚ್ಚಿನ ಗುಟ್ಟು ಬಿಟ್ಟುಕೊಂಡಿಲ್ಲ. ಆದರೆ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲ ತೆಲುಗು ಚಿತ್ರರಂಗವೇ ಕುತೂಹಲದಿಂದ ನೋಡುವಂತೆ ಮಾಡಿದೆ. ಇನ್ನು ಸಿನಿಮಾದಲ್ಲಿ ಮಹೇಶ್‌ ಬಾಬುಗೆ ನಾಯಕಿಯಾಗಿ ಪೂಜಾ ಹೆಗ್ಡೆ ಸಾಥ್‌ ಕೊಟ್ಟಿದ್ದಾರೆ. ಸಾಲು ಸಾಲು ಸಿನಿಮಾದ ಸೋಲಿನಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ ಈ ಸಿನಿಮಾ ಬ್ರೇಕ್‌ ಕೊಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

ಇದನ್ನೂ ಓದಿ : ಮಣಿರತ್ನಂ (Maniratham) ಚಿತ್ರದ ಆಫರ್‌ ರಿಜೆಕ್ಟ್‌ ಮಾಡಿದ್ದೇಕೆ “ಹೆಬ್ಬುಲಿ” ನಟಿ ಅಮಲಾ ಪೌಲ್‌

ಇದನ್ನೂ ಓದಿ : ಪುನೀತ್‌ ರಾಜ್ ಕುಮಾರ್‌ ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಮಹೇಶ್‌ ಬಾಬು ನಟನೆಯ “ಸರ್ಕಾರು ವಾರಿ ಪಾಟ” ಸಿನಿಮಾವು ಭರ್ಜರಿ ಗೆಲುವುವನ್ನು ತಂದುಕೊಟ್ಟಿದೆ. ಮಹೇಶ್‌ ಬಾಬು 28ನೇ ಚಿತ್ರದ ನಂತರ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಅಲ್ಲದೇ ರಾಮಮೌಳಿ ಹಾಗೂ ಮಹೇಶ್‌ ಬಾಬು ಕಾಂಬಿನೇಷನ್‌ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದೆ. ಆದ್ರೆ ಸಿನಿಮಾಕ್ಕೆ ಡೇಟ್ಸ್‌ ನೀಡುವ ವಿಚಾರದಲ್ಲಿ ಇನ್ನೂ ಫೈನಲ್‌ ಆಗಿಲ್ಲ.

Comments are closed.