Pak Horror: ಆಸ್ಪತ್ರೆಯೊಂದರ ಛಾವಣಿಯಲ್ಲಿ ಪತ್ತೆಯಾಯ್ತು 200ಕ್ಕೂ ಅಧಿಕ ನಗ್ನ ಕೊಳೆತ ಶವಗಳು : ತನಿಖೆಗೆ ಆದೇಶ

ಪಾಕಿಸ್ತಾನ : Pak Horror: ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಸಾರ್ವಜನಿಕ ವಲಯದ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ ಹಲವಾರು ಕೊಳೆತ ಮೃತದೇಹಗಳು ಪತ್ತೆಯಾಗಿದೆ. ಈ ವಿಚಾರ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಪಾಕಿಸ್ತಾನ ಪ್ರಾಂತ್ಯದ ಪಂಜಾಬ್​ ಮುಖ್ಯಮಂತ್ರಿ ಪರ್ವೆಜ್​ ಇಲಾಹಿ ಈ ವಿಚಾರದ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.


ಈ ಪ್ರಕರಣದ ಉನ್ನತ ತನಿಖೆಯನ್ನು ನಡೆಸಲು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗಿದೆ. ವಿಶೇಷ ಆರೋಗ್ಯ ಕಾರ್ಯದರ್ಶಿ ಮುಜಾಮಿಲ್​ ಬಶೀರ್​ ನೇತೃತ್ವದ ಆರು ಸದಸ್ಯರ ಸಮಿತಿಯು ತನಿಖೆಯನ್ನು ಪೂರ್ಣಗೊಳಿಸಲು ಹಾಗೂ ಜವಾಬ್ದಾರಿಯನ್ನು ನಿಗದಿಪಡಿಸಲು ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ. ವರದಿಗಳ ಪ್ರಕಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗ್ನ ಸ್ಥಿತಿಯಲ್ಲಿ 200 ಮೃತದೇಹಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಮುಖ್ಯಮಂತ್ರಿಗಳ ಸಲಹೆಗಾರ ಚೌಧರಿ ಜಮಾನ್​ ಗುಹ್ಹರ್​​ ಲಾಹೋರ್​ನಿಂದ ಸುಮಾರು 350 ಕಿಲೋಮೀಟರ್​ ದೂರದಲ್ಲಿರುವ ಮುಲ್ತಾನ್​​ನಲ್ಲಿರುವ ನಿಶ್ಟರ್​​ ಆಸ್ಪತ್ರೆಗೆ ಭೇಟಿ ನೀಡಿದರು ಹಾಗೂ ಆಸ್ಪತ್ರೆಯ ಶವಾಗಾರದ ಛಾವಣಿಯ ಮೇಲೆ ಹಲವಾರು ಶವಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ಗುಜ್ಜರ್​ ನಿಶ್ತಾರ್​ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಓರ್ವ ವ್ಯಕ್ತಿ ತನ್ನ ಬಳಿ ಬಂದು ನೀವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಬಯಸಿದ್ದರೆ ಮೊದಲು ಶವಾಗಾರಕ್ಕೆ ಹೋಗಿ ಪರೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.


ಗುಜ್ಜರ್​ ಶವಾಗಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶವಾಗಾರದ ಬಾಗಿಲನ್ನು ತೆರೆಯಲು ಸಿಬ್ಬಂದಿ ಸಿದ್ಧರಿರಲಿಲ್ಲ. ಆದರೆ ಶವಾಗಾರದ ಬಾಗಿಲು ತೆರೆಯದೇ ಹೋದಲ್ಲಿ ನಿಮ್ಮ ಮೇಲೆ ಎಫ್​ಐಆರ್​ ದಾಖಲಿಸುತ್ತೇನೆಂದು ಆಸ್ಪತ್ರೆ ಸಿಬ್ಬಂದಿ ಗುಜ್ಜರ್​ ಅವಾಜ್​ ಹಾಕಿದರು. ಕೊನೆಗೆ ಶವಾಗಾರದ ಬಾಗಿಲನ್ನು ತೆರೆದು ನೋಡಿದ ಸಂದರ್ಭದಲ್ಲಿ ಶವಾಗಾರದಲ್ಲಿ ಏನಿಲ್ಲವೆಂದರೂ ಕನಿಷ್ಟ 200 ಶವಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಸಂಪೂರ್ಣ ಬೆತ್ತಲಾದ ಪುರುಷ ಹಾಗೂ ಮಹಿಳೆಯ ಶವಗಳು ಅಲ್ಲಿದ್ದವು . ಮಹಿಳೆಯರ ಶವದ ಮೇಲೂ ಒಂದೇ ಒಂದು ತುಂಡು ಬಟ್ಟೆ ಇರಲಿಲ್ಲ.

ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ವೈದ್ಯರಿಗೆ ಕೇಳಿದಾಗ, ವೈದ್ಯಕೀಯ ವಿದ್ಯಾರ್ಥಿಗಳು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುತ್ತಿದ್ದರು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆಂದು ಗುಜ್ಜರ್ ತಿಳಿಸಿದ್ದಾರೆ. ಈ ಶವಗಳ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಆದೇಶ ನೀಡಿದ್ದು, ಈ ವಿಚಾರದಲ್ಲಿ ಭಾಗಿಯಾಗಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನು ಓದಿ : Surya Grahan 2022 : ಸೂರ್ಯ ಗ್ರಹಣ 2022 : ಈ ವರ್ಷದ ಕೊನೆಯ ಸೂರ್ಯಗ್ರಹಣ, ದೀಪಾವಳಿ ಹಬ್ಬದ ದಿನ ಸೂತಕದ ಛಾಯೆ

ಇದನ್ನೂ ಓದಿ : APJ Abdul Kalam Birthday : ಭಾರತದ “ಕ್ಷಿಪಣಿ ಮಾನವ ” ಡಾ. ಎಪಿಜೆ ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ

Pak Horror: ‘200 Half-nude Decomposing’ Bodies Found at Rooftop of Hosp, Probe Order Against Staff

Comments are closed.