mayamruga and magalu janaki : ಮತ್ತೆ ಬರ್ತಿದೆ ಮಾಯಾಮೃಗ ಧಾರವಾಹಿ : ಸಿಹಿ ಸುದ್ದಿ ನೀಡಿದ ಟಿ.ಎನ್​ ಸೀತಾರಾಮ್​

mayamruga and magalu janaki : ಕನ್ನಡ ಕಿರುತೆರೆಯಲ್ಲಿ ಪ್ರಸ್ತುತ ಅದೆಷ್ಟೇ ಧಾರವಾಹಿಗಳು ಬರುತ್ತಿರಲಿ. ಈಗಲೂ ಸಹ ಮಾಯಾಮೃಗ ಎಂಬ ಹೆಸರು ಕೇಳಿದರೆ ಧಾರವಾಹಿ ಪ್ರಿಯರ ಮುಖ ಅರಳುವುದುಂಟು. ಈ ಧಾರವಾಹಿ ಮುಕ್ತಾಯಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಸಹ ಈಗಲೂ ಸಹ ಟಿ.ಎನ್​ ಸೀತಾರಾಮ್​ ನಿರ್ದೇಶನದ ಮಾಯಾ ಮೃಗ ಧಾರವಾಹಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಮಾಯಾಮೃಗ ಧಾರವಾಹಿ ಕುರಿತಂತೆ ಟಿ.ಎನ್​ ಸೀತಾರಾಮ್​ ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಗಳು ಜಾನಕಿ ಧಾರವಾಹಿ ಪುನಾರಂಭಗೊಳ್ಳುತ್ತಿದೆ ಎಂಬ ಖುಷಿ ಸುದ್ದಿಯನ್ನು ನೀಡಿದ್ದ ಟಿ.ಎನ್​ ಸೀತಾರಾಮ್​​​ ಇದೇ ರೀತಿಯ ಮತ್ತೊಂದು ಖುಷಿ ಸುದ್ದಿಯನ್ನು ನೀಡಿದ್ದಾರೆ.

ಮಾಯಾಮೃಗ ಧಾರವಾಹಿ ಎಷ್ಟರ ಮಟ್ಟಿಗೆ ಫೇಮಸ್​ ಆಗಿತ್ತು ಅಂದರೆ ಈ ಧಾರವಾಹಿಯನ್ನು ಮರುಪ್ರಸಾರ ಮಾಡಿ ಎಂಬ ಬೇಡಿಕೆ ಕೂಡ ಕೇಳಿ ಬರ್ತಿತ್ತು. ಟಿ.ಎನ್​ ಸೀತಾರಾಮ್​ ನಿರ್ದೇಶನ ಮಾಡಿದ್ದ ಈ ಧಾರವಾಹಿ ಆಗಿನ ಕಾಲಘಟ್ಟದಲ್ಲಿ ಇಷ್ಟಪಡದವರೇ ಇರಲಿಲ್ಲ. ಅಷ್ಟೊಂದು ಸುಂದರವಾಗಿ ಮೂಡಿ ಬಂದಿದ್ದ ಧಾರವಾಹಿಯದು. ಇದೀಗ ಈ ಧಾರವಾಹಿಯ ಮುಂದುವರಿದ ಸಂಚಿಕೆಗಳನ್ನು ಪ್ರಸಾರ ಮಾಡೋದಾಗಿ ಟಿ.ಎನ್​ ಸೀತಾರಾಮ್​ ಮಾಹಿತಿ ನೀಡಿದ್ದಾರೆ .


ಮಾಯಾಮೃಗ ಧಾರವಾಹಿ ಬರೋಬ್ಬರಿ 24 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಸಾರವಾಗುತ್ತಿತ್ತು. ಈ ಧಾರವಾಹಿಯಲ್ಲಿ ಮಾಳಾವಿಕಾ ಅವಿನಾಶ್​, ಎಂ.ಡಿ ಪಲ್ಲವಿ ರಾಜೇಶ್ ನಟರಂಗ , ದತ್ತಣ್ಣ, ಸುಂದರ್​ ರಾಜ್​, ಸೇತುರಾಂ, ಮುಖ್ಯಮಂತ್ರಿ ಚಂದ್ರು. ವೈಶಾಲಿ ಕಾಸರವಳ್ಳಿ ಲಕ್ಷ್ಮೀ ಚಂದ್ರಶೇಖರ್​ ಸೇರಿದಂತೆ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸಿದ್ದರು. ಪ್ರಬುದ್ಧ ನಟನೆ, ಅತ್ಯಂತ ಸುಂದರ ಕತೆ ಈ ಧಾರಾವಾಹಿಯನ್ನು ಯಶಸ್ಸಿನ ಉತ್ತುಂಗವೇರುವಂತೆ ಮಾಡಿತ್ತು.


ಮಾಯಾಮೃಗ ಧಾರವಾಹಿ ಮರು ಪ್ರಸಾರದ ಕುರಿತಂತೆ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಟಿ.ಎನ್​ ಸೀತಾರಾಮ್​, ಮಾಯಾಮೃಗದ ಮುಂದಿನ ಭಾಗ ಅಕ್ಟೋಬರ್​ನಲ್ಲಿ ನಿಮ್ಮ ಮುಂದೆ ಎಂದು ಬರೆದುಕೊಂಡಿದ್ದಾರೆ. 24 ವರ್ಷಗಳ ಹಿಂದೆ ಪ್ರಸಾರವಾಗ್ತಿದೆ ಧಾರವಾಹಿಯ ಕತೆಯನ್ನೇ ಮುಂದುವರಿಸಲು ಟಿ.ಎನ್​ ಸೀತಾರಾಮ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಇದು ಮಾತ್ರವಲ್ಲದೇ 2020ರಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಕ್​ಡೌನ್​ ಹೇರಿಕೆಯಾದ ಸಂದರ್ಭದಲ್ಲಿ ಟಿ.ಎನ್​ ಸೀತಾರಾಮ್​ ನಿರ್ದೇಶನದಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಮಗಳು ಜಾನಕಿ ಧಾರವಾಹಿ ಕೂಡ ಅರ್ಧಕ್ಕೆ ನಿಂತು ಹೋಗಿತ್ತು. ಈ ಧಾರಾವಾಹಿಯನ್ನು ಮುಂದುವರಿಸಬೇಕು ಎಂದೂ ಕೂಡ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಇದಕ್ಕೂ ಒಪ್ಪಿಗೆ ನೀಡಿರುವ ಟಿ.ಎನ್​ ಸೀತಾರಾಮ್​​ ಜಾನಕಿಯ ಮುಂದುವರಿದ ಕತೆಯ ಧಾರವಾಹಿಯೂ ಆಗಸ್ಟ್​​ನಲ್ಲಿ ಶೂಟಿಂಗ್​​ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಮೊದಲು ಕಲರ್ಸ್​ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗ್ತಿದ್ದ ಮಗಳು ಜಾನಕಿ ಮುಂದುವರಿದ ಭಾಗ ಯುಟ್ಯೂಬ್​ನಲ್ಲಿ ಪ್ರಸಾರ ಕಾಣಲಿದೆ.

ಇದನ್ನು ಓದಿ : Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!

ಇದನ್ನೂ ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್

mayamruga and magalu janaki serials are coming again under the direction of tn seetharam

Comments are closed.