Samsung Galaxy M53 5G ಭಾರತದಲ್ಲಿ ಇದೇ ಏಪ್ರಿಲ್‌ 22 ಕ್ಕೆ ಬಿಡುಗಡೆಯಾಗಲಿದೆ! ಅದರ ವೈಶಿಷ್ಟ್ಯ ಹೀಗಿದೆ

ಭಾರತದಲ್ಲಿ Samsung Galaxy M53 5G ಏಪ್ರಿಲ್‌ 22 ರಂದು ಬಿಡುಗಡೆಮಾಡಲಿದೆ ಅನ್ನುವುದನ್ನು ಕಂಪನಿಯ ಟೀಸರ್‌ ಮೂಲಕ ತಿಳಿಸಿದೆ. ಸ್ಯಾಮ್‌ಸಂಗ್‌ನ ಮೊದಲ 5ಜಿ ಫೋನ್‌ ಜಾಗತಿಕವಾಗಿ ಈ ತಿಂಗಳ ಮೊದಲಲ್ಲೇ ಬಿಡುಗಡೆಯಾಗಿತ್ತು. ಇದರ ವಿಶೇಷವೆಂದರೆ 108 ಮೆಗಾಪಿಕ್ಸಲ್‌ ಪ್ರಾಥಮಿಕ ಹಿಂದಿನ ಕ್ಯಾಮೆರಾದ ಜೊತೆ 120 Hz ನ AMOLED+ ಡಿಸ್ಪ್ಲೇ ಹೊಂದಿದೆ. Samsung Galaxy M53 5G ಯು ಹೋಲ್‌–ಪಂಚ್‌ ಡಿಸ್ಪ್ಲೇ ಡಿಸೈನ್‌ ಹೊಂದಿದ್ದು 25W ಫಾಸ್ಟ್‌ ಚಾರ್ಚಿಂಗ್‌ ಅನ್ನು ಬೆಂಬಲಿಸುವುದು. ಈ ಫೋನ್‌ ಕಳೆದ ವರ್ಷ ಮೊದಲಬಾರಿಗೆ ಬಿಡುಗಡೆಯಾಗಿದ್ದ ಹಿಂಬದಿಯ 3 ಕ್ಯಾಮರಾ ಮತ್ತು 120 Hz ಡಿಸ್ಪ್ಲೇ ಯ Galaxy M52 5G ಯ ಮುಂದುವರಿದ ಆವೃತ್ತಿಯಾಗಿದೆ.

Samsung Galaxy M53 5G ಬಾರತದಲ್ಲಿ ಬಿಡುಗಡೆಯಾಗುವ ದಿನ

ಸ್ಯಾಮಸಂಗ್‌ ಭಾರತದಲ್ಲಿ ಮೈಕ್ರೊಸೈಟ್‌ಗಳ ಮೂಲಕ Samsung Galaxy M53 5G ಎಂದು ಬಿಡುಗಡೆ ಹೊಂದಲಿದೆ ಎಂದು ತಿಳಿಸಿದೆ. ಅದಕ್ಕೆಂದೇ ಅಮೇಜಾನ್‌ ಪ್ರತ್ಯೇಕ ಪ್ರಚಾರದ ವೆಬ್‌ ಪುಟವನ್ನೂ ರಚಿಸಿದೆ. ಈ ಫೋನ್‌ ಸ್ಯಾಮಸಂಗ್‌ ಇಂಡಿಯಾದ ವೆಬ್‌ ಪೇಜ್‌ ಮತ್ತು ಅಮೇಜಾನ್‌ ಎರಡರಲ್ಲೂ ಏಕಕಾಲಕ್ಕೆ ಏಪ್ರಿಲ್‌ 22 ರ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ.

Samsung Galaxy M53 5G ವೈಶಿಷ್ಟ್ಯತೆಗಳು :
ಇದು ಆಂಡ್ರಾಯ್ಡ್‌ 12 ಮತ್ತು ಒನ್‌ ಯುಐ 4.1 ನೊಂದಿಗೆ ಚಾಲನೆ ಮಾಡುವ ಸಾಧ್ಯತೆಯಿದೆ. ಇದರ ಡಿಸ್ಪ್ಲೇಯು 6.7 ಇಂಚ್‌ ನ 1,084X2,400 ಪಿಕ್ಸೆಲ್‌ಗಳ ಫುಲ್‌ HD+ ಆಗಿದ್ದು, ಇನ್ಫಿನಿಟಿ–O ಸುಪರ್‌ AMOLED+ ಡಿಸ್ಪ್ಲೇ ಜೊತೆಗೆ 120Hz ಹೆಚ್ಚಿನ ರಿಫ್ರೆಶ್‌ ರೇಟ್‌ ಹೊಂದಿದೆ. ಈ ಫೋನ್‌ ಆಕ್ಟಾ– ಕೊರ್‌ SoC ನಿಂದ ಚಾಲಿತವಾಗಿದ್ದು ಅದನ್ನು ಇನ್ನೂ ನಿರ್ದಿಷ್ಟಪಡಿಸಲಾಗಿಲ್ಲ. 108 ಮೆಗಾಪಿಕ್ಸೆಲ್‌ ಪ್ರೈಮರಿ ಸೆನ್ಸಾರ್‌ ಇರುವ ಕ್ವಾಡ್‌ ರಿಯರ್‌ ಕ್ಯಾಮರಾ ಹೊಂದಿದೆ. ಅದರ ಜೊತೆಗೆ 8 ಮೆಗಾಪಿಕ್ಸೆಲ್‌ಗಳ ಅಲ್ಟ್ರಾ ವೈಡ್‌ ಶೂಟರ್‌, 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಮತ್ತು 2 ಮೆಗಾಪಿಕ್ಸೆಲ್‌ನ ಮಾಕ್ರೋ ಶೂಟರ್‌ ಒಳಗೊಂಡಿದೆ.

ಸೆಲ್ಫಿ ಮತ್ತು ವಿಡಿಯೋ ಚಾಟ್‌ ಗಾಗಿ Samsung Galaxy M53 5G 32 ಮೆಗಾಪಿಕ್ಸೆಲ್‌ಗಳ ಮುಂದಿನ ಸೆಲ್ಫಿ ಕ್ಯಾಮಾರ ಹೊಂದಿದೆ.

Samsung Galaxy M53 5G ಮೈಕ್ರೋ SD ಕಾರ್ಡ್‌ ಬಳಸಿ ಅಂದರೆ 1ಟಿಬಿ ವರೆಗೆ ಸ್ಟೋರೇಜ್‌ ಹೆಚ್ಚಿಸಿಕೊಳ್ಳುಬಹುದಾಗಿದೆ.

Samsung Galaxy M53 5G ಯ ಕನೆಕ್ಟಿವಿಟಿಯ ಆಯ್ಕೆಗಳು 5G, 4G LTE, Wi-Fi 802.11ac, ಬ್ಲೂಟೂತ್‌ 5.2, GPS/A-GPS, ಮತ್ತು ಯುಎಸ್‌ಬಿ ಟೈಪ್‌ C ಪೋರ್ಟ್‌ ಒಳಗೊಂಡಿದೆ. ಎಕ್ಸೆಲೆರೊಮೀಟರ್‌, ಅಂಬಿಯಂಟ್‌ ಲೈಟ್‌ ಸೆನ್ಸಾರ್‌, ಗ್ರೇಸ್ಕೋಪ್‌, ಮ್ಯಾಗ್ನೆಟೊಮೀಟರ್‌, ಮತ್ತು ಪ್ರೋಕ್ಸಿಮೀಟರ್‌ ಸೆನ್ಸಾರ್‌ಗಳಿವೆ. ಈ ಫೋನ್‌ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ನ ವೈಶಿಷ್ಟ್ಯವನ್ನು ಹೊಂದಿದೆ.

Samsung Galaxy M53 5G ಯು 5000 mAh ಬ್ಯಾಟರಿ ಸಾಮಾರ್ಥ್ಯವನ್ನು ಹೊಂದಿದ್ದು, 25W ನ ಫಾಸ್ಟ್‌ ಚಾರ್ಜಿಂಗ್‌ ಹೊಂದಿದೆ. ಫೋನಿನ ಅಳತೆಯು 164.7 X 77.0 X 7.4mm ಇದೆ. ಅದರ ತೂಕವು 176 ಗ್ರಾಂ ಗಳಿದೆ.

ಇದನ್ನೂ ಓದಿ : WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್‌ ಮಾಡುವುದು ಹೇಗೆ ಗೊತ್ತೇ?

ಇದನ್ನೂ ಓದಿ : Google Lens : ಡೆಸ್ಕ್‌ಟಾಪ್‌ ಕ್ರೋಮ್‌ನಲ್ಲಿಯ ಗೂಗಲ್‌ ಲೆನ್ಸ್‌ ಹೇಗೆಲ್ಲಾ ಕೆಲಸ ಮಾಡುತ್ತದೆ ಗೊತ್ತೇ?

(Samsung Galaxy M53 5G will launch on April 22 in India here are the specifications of the Phone)

Comments are closed.