Samsung Galaxy S23 : ಹೊಸ ವಿಶೇಷತೆಯೊಂದಿಗೆ ಬರಲಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸೀರಿಸ್‌ ! 200MP ಕ್ಯಾಮರಾ ಮತ್ತು ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಇದರ ವಿಶೇಷತೆಯಾಗಲಿದೆಯೇ?

ಪ್ರತಿ ವರ್ಷ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S–ಸೀರೀಸ್‌(Samsung Galaxy S23) ಫ್ಲಾಗ್‌ ಶಿಪ್‌ ಮತ್ತು ಎರಡು ಚಿಪ್‌ಸೆಟ್‌ ವೇರಿಯಂಟ್‌ ಹೊಂದಿರುವ ಸ್ನಾಪ್‌ಡ್ರಾಗನ್‌ ಮತ್ತು ಇನ್‌–ಹೌಸ್‌ ಎಕ್ಸಿನೊಸ್‌ ಪ್ರೊಸೆಸ್ಸರ್‌ ಫೋನ್‌ಗಳನ್ನು ಲಾಂಚ್‌ ಮಾಡುತ್ತದೆ. ಸಾಮಾನ್ಯವಾಗಿ ಸ್ನಾಪ್‌ಡ್ರಾಗನ್‌ ವೇರಿಯಂಟ್‌ ಫೋನ್‌ಗಳು ಯುಎಸ್‌ ಮತ್ತು ಚೀನಾದಲ್ಲಿ ಲಭ್ಯವಿದ್ದರೆ ಎಕ್ಸಿನೊಸ್‌ ಪವರ್ಡ್‌ ವೇರಿಯಂಟ್‌ಗಳು ಯುರೋಪ್‌ ಮತ್ತು ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಆದರೆ ಈ ವರ್ಷ ಭಾರತದಲ್ಲೂ ಸ್ನಾಪ್‌ಡ್ರಾಗನ್‌ ವೇರಿಯಂಟ್‌ಗಳು ಲಭ್ಯವಾಗಿದೆ. ಈಗ ಸ್ಯಾಮ್‌ಸಂಗ್‌ ಭಾರತ ಸೇರಿದಂತೆ ಹಲವು ಜಾಗತಿಕ ಮಾರುಕಟ್ಟೆಯಲ್ಲಿ ಸ್ನಾಪ್‌ಡ್ರಾಗನ್‌ ವೇರಿಯಂಟ್‌ಗಳು ಲಭ್ಯವಿರುವಂತೆ ಮಾಡಿದೆ. ಹೊಸ ವರದಿಯ ಪ್ರಕಾರ ಸ್ಯಾಮಸ್ಂಗ್‌ ಎಕ್ಸೊನಸ್‌ ವೇರಿಯಂಟ್‌ಗಳನ್ನು ಬಿಡುಗಡೆಗೊಳಿಸುವುದಿಲ್ಲ ಎನ್ನಲಾಗುತ್ತಿದೆ.

ಸ್ಯಾಮಸ್ಂಗ್‌ ಗ್ಯಾಲಕ್ಸಿ S23 ಸೀರಿಸ್‌ (Samsung Galaxy S23) ನ ಸಂಭಾವ್ಯ ಚಿಪ್‌ಸೆಟ್‌ ಮತ್ತು ಕ್ಯಾಮರಾಗಳು:

ಮಿಂಗ್–ಚಿ ಕೊ ಪ್ರಕಾರ ಈ ವರ್ಷ ಸ್ಯಾಮ್‌ಸಂಗ್‌ ನ ಬಹುಮುಖ್ಯ ಪ್ರೊಸೆಸ್ಸರ್‌ ಕ್ಯಾಲ್ಕಮ್‌ ಆಗಲಿದೆ. ಇದರರ್ಥ ಬಹುಶಃ ಈ ವರ್ಷ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ ಚಾಲಿತ ಗ್ಯಾಲಕ್ಸಿ S23 ಮಾದರಿಯ ಫೋನಗಳು ಮಾತ್ರ ಇರುತ್ತವೆ. ಹಿಂದಿನ ವರ್ಷ ಸ್ನಾಪ್‌ಡ್ರಾಗನ್‌– ಚಾಲಿತ ಮಾದರಿಗಳು ಹೆಚ್ಚಿದ್ದವು. ಮತ್ತು ಶೇಕಡಾ 70 ರಷ್ಟು ಮಾರಾಟ ಪ್ರಮಾಣವನ್ನು ಹೊಂದಿದ್ದವು. ವಿಶ್ಲೇಷಕರ ಪ್ರಕಾರ, ಗ್ಯಾಲಕ್ಸಿ S23 ಗಾಗಿ ಸ್ಯಾಮ್‌ಸಂಗ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ ಪ್ರೊಸಿಸ್ಸರ್‌ ಅನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.

ಎಕ್ಸಿನೊಸ್‌ 2300 ಸ್ನಾಪ್‌ಡ್ರಾಗನ್‌ 8 ಜೆನ್‌ 2 (SM8550) ಗೆ ಸ್ಪರ್ಧೆ ನೀಡಲಾರದು ಎಂದು ಮಿಂಗ್‌–ಚಿ ಕೊ ಹೇಳಿದೆ. ಏಕೆಂದರೆ SM8550 ಉತ್ತಮ ಮತ್ತು ಪರಿಣಾಮಕಾರಿಯಾಗಿದೆ. ಸದ್ಯ ಸ್ಯಾಮ್‌ಸಂಗ್‌ ಕ್ವಾಲ್ಕಮ್‌ ಚಿಪ್‌ ಸೆಟ್‌ ಅನ್ನೇ ಸಂಪೂರ್ಣವಾಗಿ ಬಳಕೆ ಮಾಡುತ್ತದೆಯೇ ಇಲ್ಲವೇ ಎಂದು ಕಂಪನಿಯೇ ತಿಳಸಬೇಕಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸೀರಿಸ್‌ ಅನ್ನು ಬಹುಶಃ 2023 ಯ ಮೊದಲ ಕಾರ್ಟರ್‌ ನಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಕೆಲವೊಂದು ವಂದಂತಿಗಳ ಪ್ರಕಾರ ಗ್ಯಾಲಕ್ಸಿ S23 ಸ್ಯಾಮ್‌ಸಂಗ್‌ HM ISOCELL ಸೆನ್ಸಾರ್‌ ಹೊಂದಿರುವ 200 MP ಕ್ಯಾಮರಾ ಹೊಂದಿದೆ ಅನ್ನಲಾಗುತ್ತಿದೆ.

ಇದನ್ನೂ ಓದಿ :Smartphones to Launch : ಭಾರತದಲ್ಲಿ ಈ ವಾರ ಬಿಡುಗಡೆ ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಸ್ಮಾರ್ಟ್‌ಫೋನ್‌ಗಳು!!

ಇದನ್ನೂ ಓದಿ : Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…

(Samsung Galaxy S23 Snapdragon 8 Gen 2 SoC and 200MP cameras specification leaked)

Comments are closed.