ಸ್ಯಾಮ್‌ಸಂಗ್‌ನಿಂದ ಹೊಸ ‘ಗ್ಯಾಲಕ್ಸಿ F70’ ಸರಣಿಯ ಹೊಸ ಫೋನ್: ಫೆಬ್ರವರಿ 2 ರಂದು ಭಾರತದಲ್ಲಿ ಬಿಡುಗಡೆ!
Samsung Galaxy F70 Series: ಸ್ಯಾಮ್‌ಸಂಗ್ ಕಂಪನಿಯು ತನ್ನ ಜನಪ್ರಿಯ ‘F’ ಸರಣಿಯಲ್ಲಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದ್ದು, ಭಾರತದಲ್ಲಿ ‘ಗ್ಯಾಲಕ್ಸಿ F70’ (Samsung Galaxy F70) ಸರಣಿಯನ್ನು ಅಧಿಕೃತವಾಗಿ ಘೋಷಿಸಿದೆ. ವಿಶೇಷವಾಗಿ ಯುವಜನತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿಯೇ ಈ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಫೆಬ್ರವರಿ 2, 2026 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ.
ಬೆಲೆಯ ವಿಷಯಕ್ಕೆ ಬಂದರೆ, ಸ್ಯಾಮ್‌ಸಂಗ್ ಈ ಸರಣಿಯ ಫೋನ್‌ಗಳನ್ನು 30 ಸಾವಿರ ರೂಪಾಯಿಗಳ ಒಳಗಿನ ಬಜೆಟ್‌ನಲ್ಲಿ ಬಿಡುಗಡೆ ಮಾಡಲಿದೆ. ಆದರೆ, ಫೆಬ್ರವರಿ 2 ರಂದು ಬಿಡುಗಡೆಯಾಗಲಿರುವ ಮೊದಲ ಮಾದರಿಯು 10 ರಿಂದ 15 ಸಾವಿರ ರೂಪಾಯಿಗಳ ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಿರುವ ನಿರೀಕ್ಷೆಯಿದೆ. ಈ ಫೋನ್‌ಗಳು ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮೂಲಕ ಮಾರಾಟವಾಗಲಿವೆ.
ಈ ಹೊಸ ಸರಣಿಯಲ್ಲಿ ಕ್ಯಾಮೆರಾಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಜೆಟ್ ಬೆಲೆಯಲ್ಲೂ ಅದ್ಭುತ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ಸ್ಯಾಮ್‌ಸಂಗ್ ಭರವಸೆ ನೀಡಿದೆ. ಬಲಿಷ್ಠ ಹಾರ್ಡ್‌ವೇರ್ ಜೊತೆಗೆ ಮೊದಲ ಬಾರಿಗೆ ಈ ವಿಭಾಗದಲ್ಲಿ ನವೀನ AI (ಕೃತಕ ಬುದ್ಧಿಮತ್ತೆ) ಫೀಚರ್‌ಗಳನ್ನು ಪರಿಚಯಿಸಲಾಗುತ್ತಿದೆ. ಇದು ಬಳಕೆದಾರರಿಗೆ ವೃತ್ತಿಪರ ಮಟ್ಟದ ಫೋಟೋ ಎಡಿಟಿಂಗ್ ಮತ್ತು ಸ್ಮಾರ್ಟ್ ಫೋನ್ ಪರ್ಫಾರ್ಮೆನ್ಸ್ ಅನುಭವ ನೀಡಲಿದೆ.
ಎಲ್‌ಎಲ್‌ಬಿ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: ಈ ದಿನದ ಒಳಗೆ ಅರ್ಜಿ ಹಾಕಿ
ಸ್ಯಾಮ್‌ಸಂಗ್ ಈ ಸರಣಿಯನ್ನು ಕೇವಲ ಒಂದು ಫೋನ್ ಆಗಿ ನೋಡದೆ, ತನ್ನ ಇಡೀ ‘F’ ಸರಣಿಯ ಹೊಸ ರೂಪ ಎಂದು ಕರೆದಿದೆ. ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ ಈ ಫೋನ್ ದೊಡ್ಡ ಬ್ಯಾಟರಿ ಮತ್ತು ಸುಧಾರಿತ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಮಾರುಕಟ್ಟೆಯಲ್ಲಿ ಇತರ ಬಜೆಟ್ ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.



