ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾ ಬಳಕೆದಾರರು ಗ್ಯಾಲಕ್ಸಿ S24 ಅಲ್ಟ್ರಾಗೆ ಮರಳುತ್ತಿದ್ದಾರಾ? ಯಾಕೆ?

ತಂತ್ರಜ್ಞಾನ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಹೋಗುತ್ತಲೇ ಇದೆ. ಅದರಲ್ಲಿ ಒಂದಾದ ಸ್ಯಾಮ್‌ಸಂಗ್‌ ತನ್ನದೇ ಆದ ವೈಶಿಷ್ಟ್ಯದ ಜೊತೆ, ಉತ್ತಮ ಹೆಸರಿನಲ್ಲಿ ಜನಪ್ರಿಯಗೊಂಡು ಜನರಿಗೆ ಹೆಚ್ಚು ಆಪ್ತವಾಗಿದೆ. ದಿನ ಕಳೆದಂತೆ ಹೊಸ ಹೊಸ ಮೊಬೈಲ್‌ಗಳು ಜಗತ್ತಿಗೆ ಕಾಲಿಡುತ್ತಲೇ ಇದೆ. ಅದರಲ್ಲಿ ಇತ್ತೀಚೆಗೆ ಲಾಂಚ್‌ ಆದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಕೂಡಾ ಒಂದು. S24 ಅಲ್ಟ್ರಾಗಿಂತ ಸ್ವಲ್ಪ ಮಟ್ಟಿಗಿನ ಅಪ್ಡೇಟ್ಸ್‌ ಹೊಂದಿದ್ದರೂ ಕೂಡಾ ಗ್ರಾಹಕರು ಹೆಚ್ಚು S24 ಅಲ್ಟ್ರಾ ಕಡೆಯೇ ಹೆಚ್ಚು ವಾಲುತ್ತಿದ್ದಾರೆ ಎಂದು ಸ್ಯಾಮ್‌ಸಂಗ್‌ ವರದಿ ಬಹಿರಂಗಪಡಿಸಿದೆ.

ಇತ್ತೀಚಿಗೆ ಪ್ರಚಲಿತದಲ್ಲಿರುವ ಪ್ರಮುಖ ಫೋನ್‌ ಗ್ಯಾಲಕ್ಸಿ S25 ಅಲ್ಟ್ರಾ ಕೆಲವು ಸ್ಪೆಷಲ್‌ ಕ್ವಾಲಿಟಿಗಳನ್ನು ಹೊಂದಿದೆ. ಆದರೂ ಕೂಡಾ ಕೆಲವರು ಇದನ್ನು ಬಿಟ್ಟು ಗ್ಯಾಲಕ್ಸಿ S24 ವನ್ನೇ ಹೆಚ್ಚು ಇಷ್ಟಪಟ್ಟಿದ್ದಾರೆ. ಅಲ್ಟ್ರಾ S25 ಹೊಸ ಚಿಪ್‌ಸೆಟ್‌ನೊಂದಿಗೆ, ನವೀಕರಿಸಿದ ಕ್ಯಾಮೆರಾ ಮತ್ತು ವಿನ್ಯಾಸದೊಂದೊಗೆ ಚಾಲ್ತಿಯಲ್ಲಿದೆ. ಅದಾಗ್ಯೂ ಕೂಡಾ ಗ್ರಾಹಕರು ಹೆಚ್ಚು S24 ಅಲ್ಟ್ರಾಕ್ಕೆ ಹೆಚ್ಚು ಉತ್ಸಾಹಭರಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಏಕೆ ಗ್ರಾಹಕರು S24 ವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬುದಕ್ಕೆ ಕೆಲವು ಮಾಹಿತಿಯನ್ನು ತಿಳಿಯೋಣ;

ವಿನ್ಯಾಸ ಬದಲಾವಣೆ

S25 ಅಲ್ಟ್ರಾದ ಹೊಸ ಫ್ಲಾಟ್‌, ಚೂಪಾದ ಅಂಚುಗಳ ಫ್ರೇಮ್‌ ಗ್ರಾಹಕರ ಅತ್ಯಂದ ದೊಡ್ಡ ದೂರುಗಳಲ್ಲಿ ಒಂದಾಗಿದೆ. ಫ್ಲಾಟ್‌ನ ವಿನ್ಯಾಸವು ಟ್ರೆಂಡಿಯಾಗಿದ್ದರೂ, ಅನೇಕ ಬಳಕೆದಾರರಿಗೆ ಅದನ್ನು ಹಿಡಿದುಕೊಳ್ಳಲು ಕಠಿಣ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಬದಲಿ, S24 ಅಲ್ಟ್ರಾ ಪೋನ್‌ ಸ್ವಲ್ಪ ದುಂಡಾದ ಅಂಚುಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಜನರಿಗೆ ಹೆಚು ಇಷ್ಟವಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಅಲ್ಟ್ರಾದಲ್ಲಿ Sಪೆನ್‌ ನಿಂದ ಬ್ಲೂಟುತ್‌ ಸಂಪರ್ಕ ಇಲ್ಲ. ಅಂದರೆ,

-ರಿಮೋಟ್‌ ಕ್ಯಾಮಾರಾ ಶಟರ್‌ ಇಲ್ಲ

-ಸ್ವೈಪ್‌ ಸನ್ನೆಗಳು ಇಲ್ಲ

-ರಿಮೋಟ್‌ ಪ್ರಸ್ತುತಿಯ ನಿಯಂತ್ರಣಗಳಿಲ್ಲ

-ಮೀಡಿಯಾ ನಿಯಂತ್ರಣದ ಶಾರ್ಟ್‌ಕಟ್‌ಗಳಿಲ್ಲ

ಸಾಮಾನ್ಯ ಬಳಕೆದಾರರಿಗೆ ಇದು ರೂಢಿಯಲ್ಲಿದೆ. ಹಾಗಾಗಿ ಇದನ್ನು ಹೆಚ್ಚು ಇಷ್ಟಪಡುತ್ತಿಲ್ಲ.

ಅದೇ S24 ಅಲ್ಟ್ರಾದಲ್ಲಿ ಬ್ಲೂಟುತ್‌ Sಪೆನ್‌, ಗ್ರೂಪ್‌ ಫೋಟೋ, ವೀಡಿಯ ಚಿತ್ರೀಕರಣಗಳು ಮತ್ತು ಸ್ಲೈಡ್‌ಶೋಗಳಿಗೆ ರಿಮೋಟ್‌ನ ಬಳಕೆ ಇದೆ. ಹಾಗಾಗಿ ಜನರಿಗೆ ಹೆಚ್ಚು ಸುಲಭದಲ್ಲಿ ಬಳಸಲು ಸಹಾಯಕವಾಗಿದೆ.

ಅದರಲ್ಲಿಯೂ S24 ಅಲ್ಟ್ರಾವನ್ನು ಹಿಡಿಯಲು ಮತ್ತು ಬಳಸಲು ಹೆಚ್ಚು ಸುಲಭ ಎಂಬ ಕಾರಣಕ್ಕೆ ಗ್ರಾಹಕರು S24 ಅಲ್ಟ್ರಾಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories