Sony Wireless Headphone :ಹೊಸ ವೈಶಿಷ್ಟ್ಯಗಳೊಂದಿಗೆ ಈ ವಾರ ಬಿಡುಗಡೆಯಾಗಲಿರುವ ಸೋನಿಯ ಹೊಸ WH-1000XM5 ವೈರ್‌ಲೆಸ್‌ ಹೆಡ್‌ಫೋನ್‌!

ಸೋನಿ ತನ್ನ ಹೊಸ WH-1000 (Sony Wireless Headphone ) ಸರಣಿಯ ವೈರ್‌ಲೆಸ್‌ ಹೆಡ್‌ಫೋನ್‌ ಕೇಳುಗರಿಗೆ ಉನ್ನತ ಮಟ್ಟದ ಸೌಂಡ್‌ ಕ್ವಾಲಿಟಿ, ಸೌಕರ್ಯ ಮತ್ತು ವಿಶ್ವಾಸಾರ್ಹ ಸಕ್ರಿಯ ಶಬ್ದಗಳ ರದ್ದತಿಗಳು ಮುಂತಾದವುಗಳನ್ನು ಬೆಂಬಲಿಸುತ್ತದೆ. ಸರಣಿಯ ಹೊಸ ಹೆಡ್‌ಫೋನ್‌ಗಳನ್ನು ಇದೇ ಮೇ 12 ಕ್ಕೆ ಬಿಡುಗಡೆಮಾಡಲಿದೆ. ಪ್ರತಿಯೊಬ್ಬರೂ ಈ ಕಂಪನಿಯ ಹೊಸ ಉತ್ಪನ್ನವನ್ನು ಉತ್ಸಾಹದಿಂದ ಎದುರುನೋಡುತ್ತಿದ್ದಾರೆ. ಆಡಿಯೋ ವಿಭಾಗದಲ್ಲಿ ಸೋನಿ ತನ್ನನ್ನು ತಾನೇ ನವೀಕರಿಸಿಕೊಂಡಿದೆ. WH-1000XM5 ವಿಶೇಷ ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ನೀರಿಕ್ಷೆಯಿದೆ.

ಸೋನಿ ಆಡಿಯೋ ಗೇರ್‌ಗಳನ್ನು ಉನ್ನತ ದರ್ಜೆಯ ಸಕ್ರೀಯ ನೊಯ್ಸ್‌ ಕ್ಯಾನ್ಸಲೇಷನ್‌ನೊಂದಿಗೆ ಕರಗತ ಮಾಡಿಕೊಂಡಿದೆ. ಹೆಚ್ಚಿನ ಬೆಲೆಯ ಟ್ಯಾಗ್‌ಗಳನ್ನು ಸಮರ್ಥಿಸುವ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಇದು ಮಾರುಕಟ್ಟೆಯಲ್ಲಿ ಆಪಲ್‌, ಬಾಶ್‌, ಮತ್ತು ಯಮಹಾ ನಂತಹ ದೈತ್ಯರೊಂದಿಗೆ ಸ್ಪರ್ಧಿಸುತ್ತದೆ. ಈ ವಾರ WH-1000XM5 ಅಧಿಕೃತವಾಗಿ ಬಿಡುಗಡೆಯಾಗಲಿದೆ. ಸೋನಿಯ ಹೊಸ ವೈರ್‌ಲೆಸ್‌ ಹೆಡ್‌ಫೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೋನಿಯ WH-1000XM5 ವೈರ್‌ಲೆಸ್‌ ಹೆಡ್‌ಫೋನ್‌ನ ನಿರೀಕ್ಷಿತ ಬೆಲೆ:

ಸೋನಿಯ WH-1000XM5 ಹೆಡ್‌ಫೋನ್‌ನ ಬೆಲೆಯು ಸುಮಾರು 22,500 ರೂಪಾಯಿಗಳಿಂದ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬೆಲೆಯು ಹೊಸ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುತ್ತದೆ, ಎಂದು ಕಂಪನಿ ತಿಳಿಸಿದೆ.

ಸೋನಿಯ WH-1000XM5 ವೈರ್‌ಲೆಸ್‌ ಹೆಡ್‌ಫೋನ್‌ನ ವೈಶಿಷ್ಟ್ಯಗಳು :

ಸೋನಿಯ ಹೊಸ ಹೆಡ್‌ಫೋನ್‌ ಹೊಸ ರೂಪದೊಂದಿಗೆ ಬರುವ ಸಾಧ್ಯತೆಯಿದೆ. ಹೆಡ್‌ಫೋನ್‌ಗಳು ಹಗುರವಾದ ರಚನೆ ಮತ್ತು ಸೌಕರ್ಯಗಳನ್ನು ನೀಡುವ ನಿರೀಕ್ಷೆಯಿದೆ. ಹೆಡ್‌ಫೋನ್‌ನ ನಯವಾದ ನಿರ್ಮಾಣವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಇತ್ತೀಚಿನ ಉತ್ಪನ್ನಗಳು ಹೊಸ ಭಾಷೆಯನ್ನು ದೃಢೀಕರಿಸುವಂತೆ ತೋರುತ್ತಿದೆ.

ಸೋನಿಯ ಹೊಸ ಹೆಡ್‌ಫೋನ್‌ಗಳು ವೈರ್‌ಲೆಸ್‌ ಸ್ಟ್ರೀಮಿಂಗ್‌ಗಾಗಿ ಬ್ಲೂಟೂತ್‌ 5.2 ಅನ್ನು ಬೆಂಬಲಿಸಬಹುದು ಮತ್ತು ಅಗತ್ಯವಿದ್ದಾಗ ವೈರ್‍ಡ ಮೋಡ್‌ನಲ್ಲಿಯೂ ಸಂಪರ್ಕಿಸಲು ನಿಮಗೆ ಅವಕಾಶ ನೀಡಬಲ್ಲದು. ಸೋನಿ ಹೊಸ ಕ್ಯಾನ್‌ಗಳ ಮೂಲಕ ಯಾವುದೇ ಆಡಿಯೋವನ್ನು ನಷ್ಟವಿಲ್ಲದೇ ಬೆಂಬಲ ನೀಡಬಲ್ಲದು. ಇದು ಆಪಲ್‌ನ ಏರ್‌ಪಾಡ್ಸ್‌ ಸ್ಟುಡಿಯೋ ಮತ್ತು ಇತರ ಉನ್ನತ–ಶ್ರೇಣಿಯ ಹೆಡ್‌ಫೋನ್‌ಗಳ ಮೇಲೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತದೆ.

ಉತ್ತಮ ಸೌಕರ್ಯ ಮತ್ತು ಸೌಂಡ್‌ ಕ್ವಾಲಿಟಿಯ ಜೊತೆಗೆ ಸೋನಿ WH-1000XM5 ನಾಯ್ಸ್‌ ಕ್ಯಾನ್ಸಲ್‌ ಗೊಳಿಸುವ ವೈಶಿಷ್ಟ್ಯವನ್ನೂ ಹೊಂದಿದೆ. ಗೂಗಲ್‌, ಆಪಲ್‌ ಮತ್ತು ಅಲೆಕ್ಸಾಗಳಂತಹ ಧ್ವನಿ ಸಹಾಯಕ ಗಳಿಗೆ ಬೆಂಬಲಗಳೊಂದಿಗೆ ಪ್ಯಾಡ್‌ಗಳಲ್ಲಿನ ಟಚ್‌ ಕಂಟ್ರೋಲ್‌ಗಳನ್ನು ಸಹ ನೀಡಲಾಗಿದೆ.

ಹೊಸ ರಚನೆಯು ಬ್ಯಾಟಿರಿ ಮೇಲಿನ ಕಾಳವಳವನ್ನು ಹುಟ್ಟುಹಾಕಿದೆ. ಹೊಸ ವರದಿಗಳ ಪ್ರಕಾರ ಸಂಪೂರ್ಣ ಚಾರ್ಜ್‌ ಮಾಡಲು ಕೇವಲ 3.5 ಗಂಟೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ : WhatsApp new feature : ವಾಟ್ಸಾಪ್‌ ಖಾತೆಯನ್ನು ಎರಡು ಮೊಬೈಲ್‌ಗಳಲ್ಲಿ ಬಳಕೆ ಮಾಡುವುದು ಹೇಗೆ ?

ಇದನ್ನೂ ಓದಿ : Google Pay Bitcoin:ಗೂಗಲ್‌ ಪೇಗೂ ಬರಲಿದೆ ಬಿಟ್‌ಕಾಯಿನ್‌? ಹೊಸ ಆಪ್ಶನ್ ತರಲು ಗೂಗಲ್ ಉತ್ಸುಕ

(Sony Wireless Headphone launching this week)

Comments are closed.