asani cyclone effect : ಅಸಾನಿ ಚಂಡಮಾರುತ ಅಬ್ಬರ : ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

asani cyclone effect : ಅಸಾನಿ ಚಂಡಮಾರುತದ ಅಬ್ಬರವು ರಾಜ್ಯದ ವಿವಿಧ ಜಿಲ್ಲೆಗಳ ಮೇಲೆಯೂ ಪ್ರಭಾವ ಬೀರಿದೆ. ಗಂಟೆಗೆ 120 ಕಿಲೋಮೀಟರ್​ ವೇಗದಲ್ಲಿ ಬೀಸುತ್ತಿರುವ ಗಾಳಿಯು ಪಶ್ಚಿಮ ಮಧ್ಯ ಹಾಗೂ ವಾಯುವ್ಯ ಬಂಗಾಳಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ. ಅಸಾನಿ ಚಂಡಮಾರುತದಿಂದಾಗಿ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಹೆಚ್ಚಿನ ಗಾಳಿ ಹಾಗೂ ವಾಯುವ್ಯ ಭಾರತದಲ್ಲಿ ತಾಪಮಾನ ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.


ಅಸಾನಿ ಚಂಡಮಾರುತದಿಂದ ಒಡಿಶಾಗೆ ಹೆಚ್ಚಿನ ಎಫೆಕ್ಟ್​ ಇದ್ದು ಖುರ್ದಾ, ಗಂಜಾಂ, ಪುರಿ, ಕಟಕ್ ಮತ್ತು ಭದ್ರಕ್ ಜಿಲ್ಲೆಗಳಲ್ಲಿ ಸತತ ಮಳೆಯಾಗುತ್ತಿದೆ. ಒಡಿಶಾ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕಡೆಗಳಲ್ಲಿ ಎನ್​ಡಿಆರ್​ಎಫ್​ ಹಾಗೂ ಒಡಿಆರ್​ಎಫ್​ ಪಡೆಗಳನ್ನು ನಿಯೋಜಿಸಿದೆ.


ನಿನ್ನೆ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದ ಅಸಾನಿ ಚಂಡಮಾರುತವು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ 450 ಕಿಲೋ ಮೀಟರ್​ ಆಗ್ನೇಯಕ್ಕೆ ಹಾಗೂ ಓಡಿಶಾದ ಪುರಿಯಿಂದ 610 ಕಿಲೋಮೀಟರ್​​ ದೂರದಲ್ಲಿ ಕೇಂದ್ರೀಕೃತವಾಗಿತ್ತು.


ಇತ್ತ ಅಸಾನಿ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕೂಡ ರಾಜ್ಯದಲ್ಲಿ ಭಾರೀ ಮಳೆ ಇರೋದ್ರಿಂದ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೊಪ್ಪಳದ ಮುನಿರಾಬಾದ್​ನಲ್ಲಿ 15 ಮಿ.ಮೀ ಮಳೆ ಸುರಿದಿದೆ.ಇತ್ತ ಚಾಮರಾಜನಗರದ ಹರದನಹಳ್ಳಿಯಲ್ಲಿ 19 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ

ಇದನ್ನೂ ಓದಿ : three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವು

asani cyclone effect yellow alert in karnataka

Comments are closed.