Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಪದ್ಮಭೂಷಣ ಗರಿ

ಸ್ಯಾನ್ ಫ್ರಾನ್ಸಿಸ್ಕೋ: (Sundar Pichai) ಭಾರತದ ಅತೀ ಶ್ರೇಷ್ಠ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿ ಇದೀಗ ಗೂಗಲ್ ಸಿಇಒ ಸುಂದರ್ ಅವರ ಮುಡಿಗೇರಿದೆ. ಭಾರತದ ರಾಯಭಾರಿಯಾಗಿರುವ ತಾರಂಜೀತ್ ಸಿಂಗ್ ಸಂಧು ಅವರು ಸುಂದರ್ ಪಿಚೈಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ್ದಾರೆ. ಸುಂದರ್‌ ಪಿಚೈ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಸಂಧು ಅವರು ಟ್ವೀಟ್‌ ಮಾಡಿದ್ದು, ಸುಂದರ್‌ ಅವರಿಗೆ ಪ್ರಶಸ್ತಿ ನೀಡಿರುವುದು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ಸುಂದರ್ ಪಿಚೈಗೆ ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ ಬಳಿಕ ಟ್ವೀಟ್ ಮಾಡಿದ ತಾರಂಜೀತ್ ಸಿಂಗ್ ಸಂಧು, “ಗೂಗಲ್ & ಆಲ್ಫಾಬೈಟ್ ಸಿಇಒ ಸುಂದರ್ ಪಿಚೈ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋರದಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಹಸ್ತಾಂತರ ಮಾಡಿರುವುದು ನನಗೆ ಸಂತೋಷವಾಗಿದೆ,” ಎಂದು ತಿಳಿಸಿದ್ದಾರೆ. ಹಾಗೆಯೇ “ಮದುರೈನಿಂದ ಕಣಿವೆ ಎತ್ತರಕ್ಕೂ ಸುಂದರ್‌ ಪಿಚೈ ಅವರ ಸ್ಪೂರ್ತಿದಾಯಕ ಜೀವನ ಸಂಚಾರವು ಆರ್ಥಿಕ ಹಾಗೂ ಟೆಕ್‌ ಕ್ಷೇತ್ರವನ್ನು ಬಲಗೊಳಿಸಿದೆ. ಜಾಗತಿಕವಾಗಿ ಭಾರತದ ಪ್ರತಿಭೆಯ ಕೊಡುಗೆಯನ್ನು ದೃಡೀಕರಿಸಿದೆ.” ಎಂದು ಸಂಧು ಅವರು ಹೇಳಿದ್ದಾರೆ.

ನನಗೆ ಈ ಗೌರವ ನೀಡಿದ ಭಾರತ ಸರ್ಕಾರಕ್ಕೆ ಹಾಗೂ ಭಾರತದ ಜನರಿಗೆ ನಾನು ಅಭಾರಿಯಾಗಿದ್ದಾನೆ. ನನ್ನನ್ನು ಬೆಳೆಸಿದ ದೇಶದಿಂದ ಈ ರೀತಿಯಾಗಿ ಗೌರವ ಪಡೆಯುವುದು ನನಗೆ ಸಂತೋಷವಾಗಿದೆ.” ಎಂದು ಐವತ್ತು ವರ್ಷ ಪ್ರಾಯದ ಸುಂದರ್‌ ಪಿಚೈ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಹೇಳಿದ್ದಾರೆ.

“ಭಾರತ ನನ್ನ ಭಾಗವಾಗಿದೆ. ನಾನು ಎಲ್ಲಿ ಹೋದರು ಭಾರತ ನನ್ನೊಂದಿಗೆ ಇದೆ. ಈ ಪ್ರಶಸ್ತಿಯನ್ನು ನಾನು ಸುರಕ್ಷಿತವಾಗಗಿ ಇರಿಸುತ್ತೇನೆ,” ಎಂದು ತಿಳಿಸಿದ್ದಾರೆ. “ನನ್ನ ಕಲಿಕೆಯನ್ನು, ಜ್ಞಾನವನ್ನು ಅಭಿವೃದ್ಧಿಪಡಿಸುವ ಕುಟುಂಬದಲ್ಲಿ ಹುಟ್ಟಿರುವುದು ನನ್ನ ಅದೃಷ್ಟವಾಗಿದೆ. ನನ್ನ ಆಸಕ್ತಿಯ ಕ್ಷೇತ್ರದಲ್ಲಿ ಕಲಿಕೆ ಮಾಡಲು ನನ್ನ ಪೋಷಕರು ಹಲವಾರು ತ್ಯಾಗವನ್ನು ಮಾಡಿದ್ದಾರೆ,” ಎಂದು ಕೂಡಾ ತಿಳಿಸಿದ್ದಾರೆ.

ಇದನ್ನೂ ಓದಿ : Upcoming Smartphone in December 2022 : ಬಿ–ರೆಡಿ; ಈ ಸ್ಮಾರ್ಟ್‌ಫೋನ್‌ಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬಹುದು

ಇದನ್ನೂ ಓದಿ : Upcoming Smartphone in December 2022 : ಬಿ–ರೆಡಿ; ಈ ಸ್ಮಾರ್ಟ್‌ಫೋನ್‌ಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬಹುದು

The Padma Bhushan Award, India’s highest award, has now gone to Google CEO Sundar Pichai. Ambassador of India Taranjeet Singh Sandhu presented the award to Sundar Pichai in San Francisco. After giving the award to Sundar Pichai, Sandhu tweeted that he is happy that Sundar has been given the award.

Comments are closed.