Tata Play OTT Plans ದರ ಇಳಿಕೆ! ಕಡಿಮೆ ಬೆಲೆಗೆ ನೋಡಿ ಅಗ್ದಿ ಬೆಸ್ಟ್ ವೆಬ್ ಸಿರೀಸ್

ಇತ್ತೀಚಿಗೆ ಬಿಡುಗಡೆಯಾಗಿದ್ದ ಟಾಟಾ ಪ್ಲೇ ಒಟಿಟಿ (Tata Play OTT) ತನ್ನ ಪ್ಯಾಕ್‌ಗಳ ದರ ಇಳಿಕೆ ಮಾಡಿದೆ. ತನ್ನ ಸೇವೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಟಾಟಾ ಪ್ಲೇ ಹಿಂದಿನ ಶನಿವಾರದಿಂದ ಬಳಕೆದಾರರಿಗೆ ಪ್ಯಾಕ್‌ಗಳ ಬೆಲೆಯನ್ನು (Tata Play OTT Plans) ಕಡಿತಗೊಳಿಸಿದೆ. ಈ ಕ್ರಮವು ತಿಂಗಳ ಆಧಾರದ ಮೇಲೆ ಪ್ಯಾಕ್ ಹಾಕುವ ಗ್ರಾಹಕರಿಗೆ ರೂ 30 ರಿಂದ ರೂ 100 ರವರೆಗೂ ಹಣ  ಉಳಿಸುತ್ತದೆ. ಟಾಟಾ ಪ್ಲೇ ಇದೀಗ 19 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಚಂದಾದಾರರನ್ನು ಹೊಂದಿದೆ.

ಟಾಟಾ ಸ್ಕೈ ಇತ್ತೀಚೆಗೆ ತನ್ನ ಹೆಸರನ್ನು ಟಾಟಾ ಪ್ಲೇ ಎಂದು ಬದಲಾಯಿಸಿದೆ. ಜನವರಿ 27, 2022 ರಿಂದ ಟಾಟಾ ಸ್ಕೈ ಹೊಸ ಹೆಸರು ಟಾಟಾ ಪ್ಲೇ ಎಂದು ಬದಲಾಗಿದೆ. ಟಾಟಾ ಪ್ಲೇ ಟಿವಿ ಚಾನೆಲ್‌ಗಳ ಜೊತೆಗೆ OTT ಸೇವೆಗಳನ್ನು ನೀಡುತ್ತದೆ. ಕಂಪನಿಯು ಪ್ರಮುಖ OTT ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ಡಿಟಿಎಚ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ಸೇರಿದಂತೆ 13 ಇತರ ಓಟಿಟಿ ಸೇವೆಗಳನ್ನು(Tata Play TV OTT) ತನ್ನ ಪ್ಯಾಕೇಜ್‌ನಲ್ಲಿ ಸೇರಿಸಿದೆ ಎಂದು ಹೇಳಿದೆ. ಜೊತೆಗೆ ಬಿಂಗೆ+ ಪ್ಯಾಕ್ ಗ್ರಾಹಕರಿಗೆ ಸಿಗಲಿದೆ.

ಇದನ್ನೂ ಓದಿ: Mahindra Bolero Luxury Camper: ಮಹೀಂದ್ರಾ ಜೀಪ್‌ನಲ್ಲೇ ಅಡಿಗೆ, ಊಟ, ಸ್ನಾನ, ನಿದ್ದೆ, ಶೌಚ! ಐಷಾರಾಮಿ ಕಾರು ಭಾರತದಲ್ಲೂ ಬಿಡುಗಡೆ

ಒಂದೇ ಪ್ಯಾಕ್ ಹೊಂದಿದರೆ ಸ್ಮಾರ್ಟ್ ಟಿವಿಯಿಂದ ಮೊಬೈಲ್ ಫೋನಿನವರೆಗೆ ಎಲ್ಲಿ ಬೇಕಾದರೂ ಕಂಟೆಂಟ್ ವೀಕ್ಷಿಸಬಹುದು. ಒಂದು ವೇಳೆ ನೀವು ಹೆಚ್ಚಿನ ಸ್ಕ್ರೀನ್‌ನಲ್ಲಿ ನೋಡಲು ಬಯಸಿದರೆ ಹೆಚ್ಚು ಪಾವತಿಸಬೇಕಾಗುತ್ತದೆ. “ನಾವು ಮೂಲತಃ ಡಿಟಿಎಚ್ ಕಂಪನಿಯಾಗಿ ಪ್ರಾರಂಭಿಸಿ, ಈಗ ಸಂಪೂರ್ಣವಾಗಿ ಕಂಟೆಂಟ್ ವಿತರಣಾ ಕಂಪನಿಯಾಗಿ ಮಾರ್ಪಟ್ಟಿದ್ದೇವೆ” ಎಂದು ಟಾಟಾ ಪ್ಲೇಯ ಎಂಡಿ ಮತ್ತು ಸಿಇಒ ಹರಿತ್ ನಾಗ್ಪಾಲ್ ತಿಳಿಸಿದರು. ಅವರು ಗ್ರಾಹಕರ ನೆಲೆಯು ಬದಲಾಗುತ್ತಿದೆ ಮತ್ತು ಆದ್ದರಿಂದ, ಜನರಿಗೆ ಇಷ್ಟವಾಗುವ ಕಂಟೆಂಟ್ ತಲುಪಿಸುವ ಯೋಜನೆ ಹೊಂದಿದ್ದೇವೆ ಎಂದರು.

ಟಾಟಾ ಪ್ಲೇ ನೆಟ್‌ಫ್ಲಿಕ್ಸ್ ಕಾಂಬೊ ಪ್ಯಾಕ್‌ಗಳು ಜನವರಿ 27 ರಿಂದ ತಿಂಗಳಿಗೆ ರೂ 399 ರಿಂದ ಪ್ರಾರಂಭವಾಗಿದ್ದವು. ಈಗ ಈ ಪ್ಯಾಕ್‌ನಲ್ಲಿ ಇಳಿಕೆಯಾದಂತಾಗಿದೆ. ಹೀಗಾಗಿ ಟಾಟಾ ಪ್ಲೇ ಇನ್ನು ಮುಂದೆ ಡಿಟಿಎಚ್ (ಕೇಬಲ್ ಚಾನೆಲ್) ಸೇವೆಗಳಷ್ಟೇ ಅಲ್ಲ, ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ.ಬಾಲಿವುಡ್ ನಟರಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರು ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಚಾರ ಮಾಡಲಿದ್ದಾರೆ.

ಟಾಟಾ ಸ್ಕೈ, 2004 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. ಈ ಕಂಪನಿಯು ಟಾಟಾ ಸನ್ಸ್ ಮತ್ತು 21 ನೇ ಸೆಂಚುರಿ ಫಾಕ್ಸ್ ನಡುವೆ 80:20 ಜಂಟಿ ಉದ್ಯಮವಾಗಿ ಪ್ರಾರಂಭಿಸಲಾಯಿತು. ನಂತರ ಮುರ್ಡೋಕ್‌ನ ಫಾಕ್ಸ್ ಮನರಂಜನಾ ವ್ಯವಹಾರವನ್ನು ವಾಲ್ಟ್ ಡಿಸ್ನಿ ಕಂಪನಿಗೆ ಮಾರಾಟ ಮಾಡಿತು, ಅದರೊಂದಿಗೆ ಅದರ ಪಾಲನ್ನು ಸಹ ವರ್ಗಾಯಿಸಲಾಯಿತು. ಪ್ರಸ್ತುತ ಭಾರತದಲ್ಲಿ 23 ಮಿಲಿಯನ್ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸಿದೆ.

ಇದನ್ನೂ ಓದಿ: Government Mobile Apps:: ಯಾರ ಕಿರಿಕಿರಿಯಿಲ್ಲದೇ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

(Tata Play OTT Plans rate decreased by Rs 100)

Comments are closed.