Bus Free Travel : ಬಿಎಂಟಿಸಿ ಬಸ್‌ನಲ್ಲಿ ಒಂದು ವಾರ ಉಚಿತ ಪ್ರಯಾಣ

ಬೆಂಗಳೂರು : ನಗರದಲ್ಲಿ ನಮ್ಮ ಮೆಟ್ರೋದಿಂದ ವಾಯುಮಾಲಿನ್ಯದ ಪ್ರಮಾಣ ಕುಗ್ಗಿದೆ ಎಂಬ ಸಂಗತಿ ಅಧ್ಯಯನದಿಂದ ಸಾಬೀತಾಗಿದೆ. ಇದರ ಮಧ್ಯೆಯೇ ನಗರದ ವಾಯು ಮಾಲಿನ್ಯವನ್ನು ಮತ್ತಷ್ಟು ತಗ್ಗಿಸುವ ಉದ್ದೇಶದಿಂದ ಖಾಸಗಿ ವಾಹನ ತ್ಯಜಿಸಿ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಸುವಂತೆ ಮಾಡಲು ಹೊಸ ಪ್ಲ್ಯಾನ್ ಸಿದ್ಧವಾಗಿದ್ದು, ಇದಕ್ಕಾಗಿ ಬಿಎಂಟಿಸಿ (Bus Free Travel )ಒಂದು ವಾರ ಕಾಲ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಿದೆ.

ಹೌದು, ನಗರದಲ್ಲಿ ಪರಿಸರ ಮಾಲಿನ್ಯ ತಡೆಯಲು ಬಿಗ್ ಪ್ಲಾನ್ ಸಿದ್ಧವಾಗಿದೆ.ಖಾಸಗಿ ವಾಹನ ಬಳಕೆಗೆ ಬ್ರೇಕ್‌ ಹಾಕಲು ಬಿಎಂಟಿಸಿಗೆ ಐಐಎಸ್ ಸಿ ಪ್ರಸ್ತಾವನೆ ಸಲ್ಲಿಸಿದ್ದು, ಒಂದು ವಾರ ಬಿಎಂಟಿಸಿ ಬಸ್ ಉಚಿತ ಪ್ರಯಾಣ (Bus Free Travel ) ಕಲ್ಪಿಸಿ ಜನರನ್ನು ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಸುವಂತೆ ಪ್ರೇರೇಪಿಸಲು ಮುಂದಾಗಿದೆ. ದೆಹಲಿಯಂತೆ ಪರಿಸರ ಮಾಲಿನ್ಯ ಹೆಚ್ಚಾಗದಂತೆ ತಡೆಯಲು ಈ ಪ್ಲಾನ್ ಸಿದ್ಧವಾಗಿದ್ದು ಬಿಎಂಟಿಸಿ ಹಾಗೂ ಸರ್ಕಾರಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಸ್ತಾವನೆ ಸಲ್ಲಿಸಿದೆ.ಒಂದು ವಾರದ ಕಾಲ ಬಸ್ ಆದ್ಯತಾ ವಾರ ಎಂದು ಯೋಜನೆ ಜಾರಿಗೆ ತರಲು ಮನವಿ ಮಾಡಿದೆ.

ಐಐಐಸ್ ಸಿ ನೀಡಿದ ಪ್ರಸ್ತಾವನೆಯಲ್ಲೇನಿದೆ ? ಅನ್ನೋದನ್ನು ಗಮನಿಸೋದಾದರೇ, ಒಂದು ವಾರದವರೆಗೆ ಎರಡು ಪಥಗಳನ್ನು ಹೊಂದಿರುವ ಪ್ರತಿಯೊಂದು ರಸ್ತೆಯಲ್ಲಿ ಒಂದು ಪಥವನ್ನು ಬಸ್ ಗಳಿಗೆ ಕಾಯ್ದಿರಿಸಬೇಕು. ಕಡಿಮೆ ಲೇನ್ ಗಳನ್ನು ಹೊಂದಿರುವ ರಸ್ತೆಗಳನ್ನು ಬಸ್ ಗಳಿಗೆ ಮಾತ್ರ ಮೀಸಲಿರಿಸಬೇಕು.ಈ ಅವಧಿಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಯಾಣ ದರ ವಿಧಿಸದೆ ಉಚಿತ ಪ್ರಯಾಣ (Bus Free Travel ) ನೀಡಬೇಕು. ಪ್ರಯಾಣದ ಸಮಯ, ಪ್ರಯಾಣಿಕರ ಹೊರೆ, ಕಾಯುವ ಸಮಯ ಸೇರಿದಂತೆ ದೀರ್ಘವಧಿಯ ಪ್ರಯೋಜನಗಳ ಬಗ್ಗೆ ಮೌಲ್ಯಮಾಪನ ಮಾಡಬಹುದು ಎಂಬುದು ಈ ಪ್ರಸ್ತಾವನೆಯ ಲೆಕ್ಕಾಚಾರ.

ಆದರೆ ಬಿಎಂಟಿಸಿ ಈ ಪರೀಕ್ಷಾರ್ಥ ಪ್ರಯೋಗದಿಂದ ಒಂದು ವಾರಕ್ಕೆ ಬಿಎಂಟಿಸಿಗೆ 20 ಕೋಟಿ ನಷ್ಟವಾಗಲಿದೆ. ಐಐಎಸ್ ಸಿ ಪ್ರಸ್ತಾವನೆಯನ್ನು ಬಿಎಂಟಿಸಿ ಹಾಗೂ ಸರ್ಕಾರಕ್ಕೆ‌ ಕಳುಹಿಸಲಾಗಿದೆ.‌ ಸರ್ಕಾರ ಅನುಮತಿ ನೀಡಿದ್ರೆ ಈ ಯೋಜನೆ ಜಾರಿ ಮಾಡಲಾಗುತ್ತೆ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ. ಆರ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಇದೆ. ಹೀಗಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಮಾದರಿಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಅದರ ಒಂದು ಪ್ರಸ್ತಾವನೆಯೇ ಈ ಒಂದು ವಾರದ ಬಿಎಂಟಿಸಿ ಉಚಿತ ಪ್ರಯಾಣ (Bus Free Travel ) ಯೋಜನೆ . ಆದರೆ ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ : BWSSB Warning : ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಶಾಕ್ ನೀಡಿದ ಜಲಮಂಡಳಿ

ಇದನ್ನೂ ಓದಿ : ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ : ಎಬಿಬಿ ದಾಳಿಯಿಂದ ಬಯಲಾಯ್ತು ಮಾಲ್‌, ಕಂಪೆನಿಗಳ ತೆರಿಗೆ ಕಳ್ಳಾಟ

(New plan to put a brake on air pollution, BMTC Bus free travel for one week)

Comments are closed.