Google bans 136 apps : ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ ನಿಷೇಧಿಸಿದೆ 136 ಆಪ್‌ : ಈ ಆಪ್‌ ಬಳಸುವ ಮುನ್ನ ಎಚ್ಚರ !

ನವದೆಹಲಿ : ಗೂಗಲ್ ಪ್ಲೇ ಸ್ಟೋರ್ ಅಪಾಯಕಾರಿಯಾದ 136 ಆಪ್‌ಗಳನ್ನು ಪತ್ತೆ ಮಾಡಿ ನಿಷೇಧ ಹೇರಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಳು ಈ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ತಕ್ಷಣ ಅವುಗಳನ್ನು ಅವುಗಳನ್ನು ಡಿಲೀಟ್‌ ಮಾಡಿ. ಇಂತಹ ಆಪ್‌ ಅಪಾಯಕಾರಿಯಾಗಿದ್ದು, ವಿಶ್ವಾದ್ಯಂತ ಆಂಡ್ರಾಯ್ಡ್ ಸ್ಮಾಟ್‌ ಪೋನ್ ಬಳಕೆದಾರರಿಂದ ಲಕ್ಷಾಂತರ ಡಾಲರ್‌ ಹಣವನ್ನು ಕಳವು ಮಾಡಿದೆ ಎಂದು ತಿಳಿಸಿದೆ.

ಗೂಗಲ್‌ ನಿಷೇಧ ಹೇರಿರುವ 136 ಆಪ್‌ಗಳನ್ನು ನಿಮ್ಮ ಪೋನ್‌ನಲ್ಲಿ ಇದ್ದರೆ, ನಿಮ್ಮ ಖಾತೆಗೆ ಕನ್ನ ಹಾಕುವ ಸಾಧ್ಯತೆಯಿದೆ. ಬಳಕೆದಾರರು ಯಾವೆಲ್ಲಾ ಆಪ್‌ಗಳನ್ನು ಗೂಗಲ್‌ ನಿಷೇಧಿಸಿದೆ ಅನ್ನೋದನ್ನು ಅರಿತುಕೊಳ್ಳುವುದು ಬಹಳ ಮುಖ್ಯ.

ಗೂಗಲ್ ನಿಷೇಧಿತ ಅಪ್ಲಿಕೇಶನ್ ಪಟ್ಟಿಯಲ್ಲಿ ಹ್ಯಾಂಡಿ ಟ್ರಾನ್ಸ್‌ಲೇಟರ್ ಪ್ರೊ, ಹಾರ್ಟ್ ರೇಟ್ ಮತ್ತು ಪಲ್ಸ್ ಟ್ರ್ಯಾಕರ್, ಜಿಯೋಸ್ಪಾಟ್: ಜಿಪಿಎಸ್ ಲೊಕೇಶನ್ ಟ್ರ್ಯಾಕರ್, ಐಕೇರ್ – ಲೊಕೇಶನ್, ಮೈ ಚಾಟ್ ಟ್ರಾನ್ಸ್‌ಲೇಟರ್, ಸೇರಿವೆ. ಹ್ಯಾಂಡಿ ಟ್ರಾನ್ಸ್‌ಲೇಟರ್ ಪ್ರೊ, ಹಾರ್ಟ್ ರೇಟ್ ಮತ್ತು ಪಲ್ಸ್ ಟ್ರ್ಯಾಕರ್, ಜಿಯೋಸ್ಪಾಟ್: ಜಿಪಿಎಸ್ ಲೊಕೇಶನ್ ಟ್ರ್ಯಾಕರ್, ಐಕೇರ್ ಲೊಕೇಶನ್, ಮೈ ಚಾಟ್ ಟ್ರಾನ್ಸ್‌ಲೇಟರ್, ಬಸ್ – ಮೆಟ್ರೋಲಿಸ್ 2021, ಫ್ರೀ ಟ್ರಾನ್ಸ್‌ಲೇಟರ್ ಫೋಟೊ, ಲಾಕರ್ ಟೂಲ್, ಫಿಂಗರ್‌ಪ್ರಿಂಟ್ ಚೇಂಜರ್, ಕಾಲ್ ರಿಕಡರ್ ಪ್ರೊ, ಇನ್‌ಸ್ಟಂಟ್ ಸ್ಪೀಚ್ ಟ್ರಾನ್ಸ್ಲೇಷನ್, ರೇಸರ್ ಕಾರ್ ಡ್ರೈವರ್ ಒಳಗೊಂಡಿದೆ.

ಇದನ್ನೂ ಓದಿ : ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬಂದ್ !ಈ ಲಿಸ್ಟ್‌ನಲ್ಲಿ ನಿಮ್ಮ ಖಾತೆಯೂ ಇದೆಯಾ

ಮಾತ್ರವಲ್ಲ ಬಸ್ ಡ್ರೈವಿಂಗ್ ಸಿಮ್ಯುಲೇಟರ್, ಫಿಂಗರ್‌ಪ್ರಿಂಟ್ ಡಿಫೆಂಡರ್, ಲೈಫೆಲ್ ಸ್ಕ್ಯಾನ್ ಮತ್ತು ಟೆಸ್ಟ್, ಲಾಂಚರ್ ಐಒಎಸ್ 15, ಐಡಲ್ ಗನ್ ಟೈಕೂ \ u202an \ u202c, ಸ್ಕ್ಯಾನರ್ ಆಪ್ ಸ್ಕ್ಯಾನ್ ಡಾಕ್ಸ್ ಮತ್ತು ನೋಟ್ಸ್, ಚಾಟ್ ಟ್ರಾನ್ಸ್‌ಲೇಟರ್ ಎಲ್ಲಾ ಮೆಸೆಂಜರ್‌ಗಳು, ಹಂಟ್ ಸಂಪರ್ಕ, ಐಕಾನಿ, ಜಾತಕ: ಫಾರ್ಚೂನ್, ಫಿಟ್‌ನೆಸ್ ಪಾಯಿಂಟ್, ಕಿಬ್ಲಾ ಎಆರ್ ಪ್ರೊ, ಹಾರ್ಟ್ ರೇಟ್ ಮತ್ತು ಮೀಲ್ ಟ್ರ್ಯಾಕರ್, ಮೈನ್ ಈಸಿ ಟ್ರಾನ್ಸ್ಲೇಟರ್, ಫೋನ್ ಕಂಟ್ರೋಲ್ ಬ್ಲಾಕ್ ಸ್ಪ್ಯಾಮ್ ಕರೆಗಳು, ಭ್ರಂಶ ಪೇಪರ್ 3D, ಸ್ನ್ಯಾಪ್ ಲೆನ್ಸ್-ಫೋಟೋ ಟ್ರಾನ್ಸ್ಲೇಟರ್, ಕಿಬ್ಲಾ ಪಾಸ್ ನಿರ್ದೇಶನ, ಕಾಲರ್-ಎಕ್ಸ್, ಕ್ಲಾಪ್, ಫೋಟೋ ಎಫೆಕ್ಟ್ ಪ್ರೊ, ಐ ಕನೆಕ್ಟೆಡ್ ಟ್ರ್ಯಾಕರ್, ಸ್ಮಾರ್ಟ್ ಕಾಲ್ ರೆಕಾರ್ಡರ್, ದೈನಂದಿನ ಜಾತಕ & ಲೈಫ್ ಪಾಮೆಸ್ಟ್ರಿ, ಕಿಬ್ಲಾ ಕಂಪಾಸ್ (ಕಾಬಾ ಲೊಕೇಟರ್), ಪ್ರೊಕಿ-ಕಾರ್ಟೂನ್ ಫೋಟೋ ಎಡಿಟರ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ.

ಇದನ್ನೂ ಓದಿ : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

ಅದ್ರಲ್ಲೂ ಕಿಬ್ಲಾ ಅಲ್ಟಿಮೇಟ್ (Qibla Ultimate), ಟ್ರಕ್ ರೌಡ್‌ಡ್ರೈವ್ ಆಫ್ರೋಡ್ (Truck RoudDrive Offroad), ಜಿಪಿಎಸ್ ಫೋನ್ ಟ್ರ್ಯಾಕರ್ ಫ್ಯಾಮಿಲಿ ಲೊಕೇಟರ್ (GPS Phone Tracker Family Locator), ಕಾಲ್ ರೆಕಾರ್ಡರ್ ಐಕಾಲ್ (Call Recorder iCall), ಪಿಕ್ಚೋ ಎಡಿಟರ್ ಆಪ್ (PikCho Editor app), ಸ್ಟ್ರೀಟ್ ಕಾರ್ಸ್: ಪ್ರೊ ರೇಸಿಂಗ್ ( Street Cars: pro Racing), ಸಿನಿಮಾ ಹಾಲ್: ಉಚಿತ ಎಚ್‌ಡಿ ಚಲನಚಿತ್ರಗಳು (Cinema Hall: Free HD Movies), ಲೈವ್ ವಾಲ್‌ಪೇಪರ್ ಮತ್ತು ಹಿನ್ನೆಲೆ (Live Wallpaper & Background), ಇಂಟೆಲಿಜೆಂಟ್ ಟ್ರಾನ್ಸ್‌ಲೇಟರ್ ಪ್ರೊ (Intelligent Translator Pro), ಫೇಸ್ ಅನಾಲೈಸರ್ (Face Analyzer), ಟ್ರೂಕಾಲರ್ ಮತ್ತು ಟ್ರೂ ರೆಕೋಡರ್ (TrueCaller & TrueRecoder), iTranslator ಪಠ್ಯ ಮತ್ತು ಧ್ವನಿ ಮತ್ತು ಫೋಟೋ (iTranslator Text & Voice & Photo), ಪಲ್ಸ್ ಆಪ್ ಹೃದಯ ಬಡಿತ ಮಾನಿಟರ್ (Pulse App Heart Rate Monitor), ವಿಡಿಯೋ ಮತ್ತು ಫೋಟೋ ರಿಕವರಿ ಮ್ಯಾನೇಜರ್ 2 (Video & Photo Recovery Manager 2) ಬಹಳ ಅಪಾಯಕಾರಿ ಎಂದು ಗೂಗಲ್‌ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ : ಇಂಟರ್‌ನೆಟ್‌ ಇಲ್ಲದೇ ಮಾಡಬಹುದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಯುಪಿಐ ವಹಿವಾಟು

ಇದನ್ನೂ ಓದಿ : ಈ ಆಂಡ್ರಾಯ್ಡ್‌ ಪೋನ್‌ನಲ್ಲಿ ಇನ್ಮುಂದೆ ಓಪನ್‌ ಆಗಲ್ಲ ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಜಿಮೇಲ್ !

( Google bans 136 malicious apps from play store: Details )

Comments are closed.