Health Tips : ಸಾಮಾನ್ಯ ಗಿಡದ ಅಸಾಮಾನ್ಯ ಶಕ್ತಿ ‘ನೆಲನೆಲ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು?

  • ಶ್ರೀರಕ್ಷಾ ಶ್ರೀಯಾನ್

ಪ್ರತಿಯೊಂದು ಗಿಡಕ್ಕೂ ತನ್ನದೇ ಆದ ಔಷದಿಯ ಗುಣಗಳಿರುತ್ತವೆ ಹಾಗೆಯೇ ಅದು ಮಾನವನಿಗೆ ಸಹಕಾರಿ ಆಗಿರುತ್ತದೆ. ಅವುಗಳನ್ನು ಹುಡುಕಿ ತೆಗೆಯುವುದರ ಬಗ್ಗೆ ಅತೀ ಬುದ್ದಿವಂತ ಮನುಷ್ಯ ಸೋತಂತಿದೆ. ಈಗ ಹೇಳಲು ಹೊರಟಿರುವ ಔಷದಿಯ ಸಸ್ಯದ ಹೆಸರು ನಮ್ಮ ನಿಮ್ಮ ಸುತ್ತಮುತ್ತಲೂ ಕಾಣಸಿಗುವ ನೆಲನೆಲ್ಲಿಯ ಬಗ್ಗೆ.

ನೆಲನೆಲ್ಲಿಯು ಏಕವಾರ್ಷಿಕ ಸಸ್ಯವಾಗಿದ್ದು ಅತಿಯಾಗಿ ಮಳೆಗಾಲ ಹಾಗೂ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಗಿಡದ ಎಳೆಗಳು ಚಿಕ್ಕದಾಗಿ ನೆಲ್ಲಿಕಾಯಿ ಗಿಡದ ಎಲೆಯ ಹಾಗೆ ಇದ್ದು ಎಲೆಯ ಹಿಂಭಾಗದಲ್ಲಿ ನೆಲ್ಲಿಕಾಯಿ ರೀತಿಯ ಕಾಯಿಗಳಿಂದ ಜೋಡಿಸಲ್ಪಟ್ಟಿರುತ್ತವೆ. ಹೀಗಾಗಿಯೇ ಇದನ್ನು ನೆಲನೆಲ್ಲಿಕಾಯಿ ಎಂದು ಕರೆಯಲಾಗುತ್ತದೆ. ಇನ್ನೂ ಹಲವು ಕಡೆಗಳಲ್ಲಿ ಕಿರುನೆಲ್ಲಿ ಅಂತಾನೂ ಕರೆಯುತ್ತಾರೆ.

ನೆಲನೆಲ್ಲಿಯ ಗಿಡ ಚಿಕ್ಕದಾಗಿದ್ದರೂ ಅದರ ಪ್ರಯೋಜನ ಮಾತ್ರ ತುಂಬಾನೇ ಇದೆ. ಕಾಮಾಲೆ ರೋಗಕ್ಕೆ ನೆಲನೆಲ್ಲಿ ಅತ್ಯುತಮ ಔಷದಿ. ಸಿದ್ದ ಔಷದಿ ಪದ್ದತಿಯಲ್ಲಿ ಇದನ್ನ ದಶಕಗಳಿಂದಲೂ ಔಷಧವಾಗಿಯೂ ಬಳಸಲಾಗುತ್ತಿದೆ. ಯುನಾನಿ ವೈದ್ಯ ಪದ್ದತಿ ಯಲ್ಲಿ ಗಾಯ, ಕಜ್ಜಿ ಮತ್ತು ಜಂತು ಹುಳು ನಿವಾರಣೆಗೆ ಬಳಸಲಾಗುತ್ತದೆ. ಬೇಧಿಯಾಗುತ್ತಿದ್ದರೆ ಇದರ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು. ಹೀಗೆ ಮಾಡುವುದರಿಂದ ಬೇಧಿ ಸಮಸ್ಯೆ ನಿವಾರಣೆಯಾಗುತ್ತದೆ.

ಗಾಯವಾದಾಗ ಇತರ ರಾಸಾಯನಿಕ ಔವಧಿಗಳನ್ನು ಬಳಕೆ ಮಾಡುವ ಬದಲು. ನೆಲನೆಲ್ಲಿಯ ಬೇರುಗಳನ್ನು ಜಜ್ಜಿ ಗಾಯದ ಮೇಲೆ ಲೇಪಿಸಬೇಕು. ಹೀಗೆ ಮಾಡುವುದರಿಂದ ಗಾಯವನ್ನು ಬಹುಬೇಗನೆ ಗುಣ ಮಾಡುವ ಶಕ್ತಿ ನೆಲನೆಲ್ಲಿಗೆ ಇದೆ. ಇನ್ನು ಚರ್ಮ ರೋಗಗಳಲ್ಲಿ ನೆಲನೆಲ್ಲಿಯ ಎಲೆಗಳು ರಾಮಬಾಣದಂತೆ ಕೆಲಸ ಮಾಡುತ್ತದೆ. ಚರ್ಮದ ಯಾವುದೇ ರೀತಿಯ ಸಮಸ್ಯೆಗಳು ತಲೆದೋರಿದಾಗ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಹಚ್ಚುವುದರಿಂದ ಚರ್ಮರೋಗಗಳು ಕೂಡ ನಿವಾರಣೆಯಾಗುತ್ತದೆ.ನೆಲನೆಲ್ಲಿ ಬಹು ಉಪಯೋಗಿ. ಸಾಮಾನ್ಯ ಕಾಯಿಲೆಗಳಿಗೆ ಮಾತ್ರವಲ್ಲ ಹಲವರನ್ನು ಬಹುವಾಗಿ ಕಾಡುವ ಕುಷ್ಠರೋಗಿಗಳಿಗೂ ಕೂಡ ನೆಲನೆಲ್ಲಿ ಬಹು ಉಪಯೋಗಿ ಅಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ನೆಲನೆಲ್ಲಿ ಉಪಯುಕ್ತ ಔಷದಿಯಾಗಿದೆ.

ಇದನ್ನೂ ಓದಿ : ಚಕ್ರಾಸನದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಚಕ್ರಾಸನ ಮಾಹಿತಿ ನಿಮಗಾಗಿ

ಅಜೀರ್ಣದಿಂದ ಹೊಟ್ಟೆನೋವು ಉಂಟಾದಲ್ಲಿ ನೆಲನೆಲ್ಲಿಯ ಎಲೆಯ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದು ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆಗೆ ಮುಕ್ತಿ ಲಭಿಸುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ನೆಲನೆಲ್ಲಿ ಸಾಕಷ್ಟು ಉಪಯೋಗವನ್ನು ತರುತ್ತದೆ. ಅದರಲ್ಲೂ ಸಾಮಾನ್ಯವನ್ನು ಹೆಂಗಸರನ್ನು ಕಾಡುವ ಮಾಸಿಕ ಸ್ರಾವದ ಸಮಯದಲ್ಲಿ ಅತಿರಕ್ತ ಸ್ರಾವ ಆಗುತ್ತಿದ್ದರೆ ನೆಲನೆಲ್ಲಿಯ ಚಟ್ನಿ ಅಥವಾ ಕಷಾಯ ಮಾಡಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ಹೀಗೆ ಮಾಡಿದ್ರೆ ಅತೀ ರಕ್ತಶ್ರಾವನ್ನು ತಪ್ಪಿಸಬಹುದಾಗಿದೆ. ನೆಲನೆಲ್ಲಿ ಉಪಯೋಗಿಸುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತದೆ.

ಇದನ್ನೂ ಓದಿ :  ಕ್ಯಾನ್ಸರ್ ತಡೆಯುತ್ತೆ, ಬೊಜ್ಜು ಕರಗಿಸುತ್ತೆ ‘ಕಾಮಕಸ್ತೂರಿ’

ಕಾಲರಾ, ಚಿಕನ್ ಗೂನ್ಯಾ, ಡೆಂಗ್ಯೂ ಮುಂತಾದ ರೋಗಗಳು ಹರಡದಂತೆ ತಡೆಯುವ ಶಕ್ತಿಯಿದೆ. ನೆಲನೆಲ್ಲಿಯ ಎಲೆ ಹಾಗೂ ಕಾಂಡವನ್ನು ಹಾಗೆಯೇ ಸೇವನೆ ಮಾಡಬಹುದು. ಇಲ್ಲವಾದ್ರೆ ಕಷಾಯ ಮಾಡಿ ಇಲ್ಲಾ ತಂಬುಳಿ, ಪಲ್ಯ, ಚಟ್ನಿ ಮಾಡಿಯೂ ಸೇವಿಸಬಹುದು. ನೋಡೋದಕ್ಕೆ ಸಾಮಾನ್ಯ ಗಿಡದಂತೆ ಕಾಣಿಸಿಸುವ ನೆಲದ ನೆಲ್ಲಿ ನಿಜಕ್ಕೂ ಬಹು ಉಪಯೋಗಿ. ಮತ್ಯಾಕೆ ತಡ ನೆಲನೆಲ್ಲಿಯ ಗಿಡಗಳ ಸೇವನೆ ಮಾಡಿ ಬಹುರೋಗಗಳಿಂದ ಮುಕ್ತರಾಗಿದೆ.

(Phyllanthus amaras Good for Health )

Comments are closed.