Reliance Jio : ವೋಡಾಫೋನ್​ ಐಡಿಯಾ ವಿರುದ್ಧ ಟ್ರಾಯ್​ಗೆ ದೂರು ನೀಡಿದ ರಿಲಯನ್ಸ್​ ಜಿಯೋ

ನಿಮಗೆ ಯಾವುದೇ ಒಂದು ಟೆಲಿಕಾಂ ಕಂಪನಿಯ ಸೇವೆಯು ಇಷ್ಟವಾಗದೇ ಇದ್ದಲ್ಲಿ ಬೇರೊಂದು ಟೆಲಿಕಾಂ ಕಂಪನಿಗೆ ಬದಲಾಯಿಸಿಕೊಳ್ಳಬೇಕು ಅಂದರೆ ಪೋರ್ಟ್​ ಎಂಬ ಆಯ್ಕೆಯೊಂದಿದೆ. ನೀವು ಪೋರ್ಟ್​ ಎಂದು ಎಸ್​ಎಂಎಸ್​ ಕಳುಹಿಸುವ ಮೂಲಕ ಇದರ ಪ್ರಯೋಜನ ಪಡೆಯಬಹುದು. ಆದರೆ ಇದೇ ವಿಚಾರವಾಗಿ ಇದೀಗ ರಿಲಯನ್ಸ್​​ ಜಿಯೋ (Reliance Jio) ಕಂಪನಿಯು ಟೆಲಿಕಾಂ ರೆಗ್ಯೂಲೇಟರಿಗೆ ದೂರು ನೀಡಿದೆ.

ವೋಡಾಫೋನ್​ ಐಡಿಯಾ ಕಂಪನಿಯ ಹೊಸ ಪ್ರಿಪೇಯ್ಡ್​ ಪ್ಲಾನ್​ಗಳ ವಿರುದ್ಧ ಸಮರ ಸಾರಿರುವ ಮುಕೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಜಿಯೋ ಕಂಪನಿಯು ಟೆಲಿಕಾಂ ರೆಗ್ಯೂಲೇಟರಿಗೆ ದೂರು ನೀಡಿದೆ. ವೋಡಾಫೋನ್​​ ಐಡಿಯಾದ ಹೊಸ ಪ್ರಿಪೇಯ್ಡ್​ ಪ್ಲಾನ್​ನಿಂದಾಗಿ ಗ್ರಾಹಕರು ಬೇರೆ ಸೇವೆಗಳಿಗೆ ಪೋರ್ಟ್​ ಆಗಲು ಮನಸ್ಸು ಮಾಡುತ್ತಿಲ್ಲ ಎಂದು ಹೇಳಿದೆ. ವೋಡಾಫೋನ್​ ಐಡಿಯಾ ಪ್ರಿಪೇಯ್ಡ್​​ ಗ್ರಾಹಕರಿಗೆ ಎಸ್​ಎಂಎಸ್​ ಸೇವೆಯನ್ನು 149 ರೂಪಾಯಿ ದರದಿಂದ 179 ರೂಪಾಯಿ ದರದ ಯೋಜನೆಗೆ ವರ್ಗಾವಣೆ ಮಾಡಿದೆ. ಅಂದರೆ ಕಡಿಮೆ ಮೊತ್ತದ ಪ್ರಿಪೇಯ್ಡ್​​ ಪ್ಲಾನ್​ ಪಡೆದಿರುವ ಗ್ರಾಹಕರು ಎಸ್​ಎಂಎಸ್​ ಸೇವೆಯನ್ನು ಹೊಂದಿರುವುದಿಲ್ಲ.

ವೋಡಾಫೋನ್​ ಐಡಿಯಾ ಸೇವೆ ಬೇಡವೆಂದು ಬೇರೆ ಸೇವೆಗೆ ಪೋರ್ಟ್​ ಆಗಬೇಕೆಂದು ಗ್ರಾಹಕ ಮನಸ್ಸು ಮಾಡಿದಲ್ಲಿ ಆತ ಅನಿವಾರ್ಯವಾಗಿ ಹೆಚ್ಚಿನ ಮೊತ್ತದ ಕರೆನ್ಸಿ ಹಾಕಿಸಿ ಕೊಳ್ಳಲೇಬೇಕು. ಹೀಗಾಗಿ ಅನೇಕರು ಪೋರ್ಟ್​ ಮಾಡುವ ಇಚ್ಛೆಯಿದ್ದರೂ ಸಹ ಈ ವಿಚಿತ್ರ ನಿಯಮದಿಂದಾಗಿ ಸುಮ್ಮನಾಗಿದ್ದಾರೆ. ಆದ್ದರಿಂದ ಟೆಲಿಕಾಂ ಅಥಾರಿಟಿಯು ಈ ಸಂಬಂಧ ವಿಚಾರಣೆ ನಡೆಸಬೇಕಿದೆ ಎಂದು ರಿಲಯನ್ಸ್​ ಜಿಯೋ ಕಂಪನಿಯು ಪತ್ರದ ಮೂಲಕ ಕೋರಿದೆ.

ವೋಡಾಫೋನ್​ ಐಡಿಯಾ ಕಂಪನಿಯು ತನ್ನೆಲ್ಲ ಗ್ರಾಹಕರಿಗೆ ಎಸ್​ಎಂಎಸ್​ ಸೇವೆಯನ್ನು ನೀಡಬೇಕು. ಅಥವಾ ಪೋರ್ಟ್​ ಆಗಬಯಸುವ ಗ್ರಾಹಕರಿಗೆ ಯಾವುದೇ ರೀತಿಯ ಕಡಿವಾಣ ವಿಧಿಸಬಾರದು ಎಂದು ಪತ್ರದ ಮುಖೇನ ರಿಲಯನ್ಸ್​ ಜಿಯೋ ವೋಡಾಫೋನ್​ ಇಂಡಿಯಾ ಸಲಹೆಯನ್ನೂ ನೀಡಿದೆ ಎನ್ನಲಾಗಿದೆ.

ಇದನ್ನು ಓದಿ :CHEESEBURGER FISH : ಸಮುದ್ರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಮೀನು: ಬರ್ಗರ್​ ಮಾದರಿಯ ಜಲಚರ ಕಂಡ ನೆಟ್ಟಿಗರು ಶಾಕ್​​

( Reliance Jio complains against Vodafone Idea, says telco’s new plan will make it difficult for customers to port )

Comments are closed.