Tecno Pop 5S: ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಟೆಕ್ನೋ ಪಾಪ್ 5ಎಸ್: ಜನ ಸಾಮಾನ್ಯರಿಗೂ ಖರೀದಿಸಬಹುದಂತೆ ಈ ಅಗ್ಗದ ಫೋನ್!

ಜನಪ್ರಿಯ ಮೊಬೈಲ್ ಕಂಪೆನಿ ಟೆಕ್ನೋ, ತನ್ನ ಟೆಕ್ನೋ ಪಾಪ್ 5ಎಸ್ (Tecno Pop 5S )ಅನ್ನು ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಮಾಡಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಈ ವರ್ಷ ಇಲ್ಲಿಯವರೆಗೆ ಮೂರು ಇತರ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ – ಟೆಕ್ನೋ ಪಾಪ್ 5 ಎಕ್ಸ್, ಟೆಕ್ನೋ ಪಾಪ್ 5 ಮತ್ತು ಟೆಕ್ನೋ ಪಾಪ್ 5 ಪ್ರೊ. ಕೈಗೆಟುಕುವ ಬೆಲೆಯ (Budget Smartphone) ಟೆಕ್ನೋ ಪಾಪ್ 5ಎಸ್ ಕ್ವಾಡ್-ಕೋರ್ ಯುನಿಸಾಕ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಟೆಕ್ನೋ ಪಾಪ್ 5ಎಸ್ ಅನ್ನು ಮೆಕ್ಸಿಕೋದಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ಕಂಪನಿಯು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ.

ಮೆಕ್ಸಿಕೊ ವೆಬ್‌ಸೈಟ್‌ನಲ್ಲಿ  ಸ್ಮಾರ್ಟ್‌ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ತೋರಿಸುತ್ತದೆ. ಡೀಪ್ ಬ್ಲೂ ಮತ್ತು ಲೈಟ್ ಪರ್ಪಲ್. ಟೆಕ್ನೋ ಭಾರತದಲ್ಲಿ ಮತ್ತು ಇತರ ಮಾರುಕಟ್ಟೆಗಳಲ್ಲಿ ಅದರ ಬೆಲೆಯೊಂದಿಗೆ ಟೆಕ್ನೋ ಪಾಪ್ 5ಎಸ್ ಲಭ್ಯತೆಯ ಕುರಿತು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ.

ಟೆಕ್ನೋ  ಪಾಪ್ 5ಎಸ್ ವಿಶೇಷಣಗಳು (Tecno Pop 5S Specification)
ಈ ಫೋನ್ ಡ್ಯುಯಲ್-ಸಿಮ್ (ನ್ಯಾನೋ) ಟೆಕ್ನೋ ಪಾಪ್ 5ಎಸ್ ಆಂಡ್ರಾಯ್ಡ್ 10 (ಗೋ ಎಡಿಷನ್) ನಲ್ಲಿ ರನ್ ಆಗುತ್ತದೆ. ಸ್ಮಾರ್ಟ್ಫೋನ್ 18:9 ಆಕಾರ ಅನುಪಾತದೊಂದಿಗೆ 5.7-ಇಂಚಿನ (720×1,520 ಪಿಕ್ಸೆಲ್ಗಳು) ಎಚ್ ಡಿ+  ಡಿಸ್ಪ್ಲೇಯನ್ನು ಹೊಂದಿದೆ.

ಟೆಕ್ನೋ ಪಾಪ್ 5 ಎಸ್ ಕ್ವಾಡ್ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 2ಜಿಬಿ  ರಾಮ್( RAM )ನೊಂದಿಗೆ ಜೋಡಿಸಲಾಗಿದೆ. ಹ್ಯಾಂಡ್‌ಸೆಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 5-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ (QVGA) ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಟೆಕ್ನೋ ಪಾಪ್ 5 ಎಸ್2-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ 32ಜಿಬಿ ಇಂಟರ್ನಲ್   ಸಂಗ್ರಹಣೆಯೊಂದಿಗೆ ಬರುತ್ತದೆ. ಮತ್ತು ಮೈಕ್ರೋ ಎಸ್ಡಿ ಕಾರ್ಡ್ ಮೂಲಕ ಸಂಗ್ರಹಣೆಯನ್ನು ವಿಸ್ತರಿಸಬಹುದೇ ಎಂದು ಕಂಪನಿಯು ಬಹಿರಂಗಪಡಿಸಿಲ್ಲ.           

ಟೆಕ್ನೋ ಪಾಪ್ 5ಎಸ್ ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು 4ಜಿ ಎಲ್ ಟಿಇ, ವೈಫೈ, ಬ್ಲೂಟೂತ್ ವಿ4.2, ಮತ್ತು ಜಿಪಿಎಸ್ ಅನ್ನು ಒಳಗೊಂಡಿವೆ. ಸ್ಮಾರ್ಟ್ಫೋನ್ 3,020 ಎಂ ಎಎಚ್ ಬ್ಯಾಟರಿಯಿಂದ ಚಾಲಿತವಾಗಿದೆ ಮತ್ತು ಮೈಕ್ರೋ-ಯುಎಸ್ಬಿ ಮೂಲಕ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ ಸ್ಮಾರ್ಟ್‌ಫೋನ್ 148×72.3×9.9ಎಂಎಂ ಅಳತೆ ಮತ್ತು 160 ಗ್ರಾಂ ತೂಗುತ್ತದೆ.

ಇದನ್ನೂ ಓದಿ: Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

(Tecno pop 5s to be launched soon in India specifications)

Comments are closed.