ಲತಾ ಮಂಗೇಶ್ಕರ್​​ ಇಷ್ಟದ ಖಾದ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ಸಹೋದರಿ ಆಶಾ ಭೋಸ್ಲೆ

ಹಿರಿಯ ಗಾಯಕಿ ಲತಾ ಮಂಗೇಶ್ಕರ್​​ (Lata Mangeshkar) ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದರೂ ಸಹ ತಮ್ಮ ಹಾಡುಗಳ ಮೂಲಕ ಇನ್ನೂ ಜೀವಂತವಾಗಿ ದ್ದಾರೆ. ಭಾರತದ ಗಾನ ಕೋಗಿಲೆ ಇದೇ ಭಾನುವಾರದಂದು ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಲತಾ ಮಂಗೇಶ್ಕರ್​ ತಮ್ಮ ಒಡಹುಟ್ಟಿದವರಾದ ಮೀನಾ ಖದಿಕರ್​, ಆಶಾ ಭೋಸ್ಲೆ, ಉಷಾ ಮಂಗೇಶ್ಕರ್​ ಹಾಗೂ ಹೃದಯ್​ನಾಥ್​ ಮಂಗೇಶ್ಕರ್​ ಜೊತೆ ಉತ್ತಮ ಭಾಂದವ್ಯ ಹೊಂದಿದ್ದರು. ಅದರಲ್ಲೂ ಆಶಾ ಭೋಸ್ಲೆ ಹಾಗೂ ಲತಾ ಮಂಗೇಶ್ಕರ್​ ನಡುವೆ ಅವಿನಾಭಾವವಿತ್ತು. ಲತಾ ಹಾಗೂ ಆಶಾ ಇಬ್ಬರೂ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದವರು. ಹಿಂದಿನ ಸಂದರ್ಶನವೊಂದರಲ್ಲಿ ಆಶಾ ಭೋಸ್ಲೆ ನನ್ನ ಅಕ್ಕ ಲತಾ ಮಂಗೇಶ್ಕರ್​ ನನ್ನ ಅಡುಗೆ (Lata Mangeshkar loved food) ಚಾಕ ಚಕ್ಯತೆಯ ಅಭಿಮಾನಿಯಾಗಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಲತಾ ಮಂಗೇಶ್ಕರ್​ ಅವರ ಇಷ್ಟದ ಖಾದ್ಯ ಯಾವುದು ಎಂಬುದನ್ನೂ ಬಹಿರಂಗಪಡಿಸಿದ್ದರು.

ಹಳೆಯ ಸಂದರ್ಶನವೊಂದರಲ್ಲಿ ಆಶಾ ಭೋಸ್ಲೆಯು ತನ್ನ ಸಹೋದರಿಯ ಬಗ್ಗೆ ಮಾತನಾಡುತ್ತಾ, ಲತಾ ನನ್ನ ಅಡುಗೆ ಕೌಶಲ್ಯದ ಅಭಿಮಾನಿಯಾಗಿದ್ದಾರೆ. ಅಲ್ಲದೇ ಲತಾ ಅಡುಗೆ ವಿಚಾರದಲ್ಲಿ ನನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಎಲ್ಲರ ಬಳಿ ಹೇಳುತ್ತಿದ್ದರಂತೆ. ಅದರಲ್ಲೂ ಲತಾಗೆ ನಾನು ಮಾಡಿದ ಶಮ್ಮಿ ಕಬಾಬ್​ ಅಚ್ಚುಮೆಚ್ಚಾಗಿತ್ತು . ಅಲ್ಲದೇ ಅವರಿಗೆ ಮಟನ್​ ಖಾದ್ಯಗಳು ಎಂದರೂ ಸಹ ತುಂಬಾನೇ ಇಷ್ಟ ಎಂದು ಹೇಳಿದ್ದರು.

ಬಾಲ್ಯದ ದಿನಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಆಶಾ ಭೋಸ್ಲೆ ತನ್ನ ಸಹೋದರಿಗೆ ಅಂತಿಮ ವಿದಾಯವನ್ನು ಸಲ್ಲಿಸಿದ್ದಾರೆ. ಬಾಲ್ಯದ ದಿನಗಳು ಎಂತಹ ದಿನಗಳಾಗಿದ್ದವು. ನಾನು ಹಾಗೂ ದೀದಿ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಆಶಾ ಭೋಸ್ಲೆ ಹಾಗೂ ಲತಾ ಮಂಗೇಶ್ಕರ್‌ ದೇಶ ಕಂಡ ಶ್ರೇಷ್ಟ ಗಾಯಕರಾಗಿದ್ದಾರೆ.

ಇದನ್ನೂ ಓದಿ : ಹೀಗಿತ್ತು ನೋಡಿ ಗಾನ ಕೋಗಿಲೆ ಲತಾ ಮಂಗೇಶ್ಕರ್​​ ಅವರಿಗಿದ್ದ ವಜ್ರದ ವ್ಯಾಮೋಹ

ಇದನ್ನು ಓದಿ : Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಇದನ್ನೂ ಓದಿ : Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

Lata Mangeshkar loved food cooked by sister Asha Bhosle, latter reveals her favourite dish

Comments are closed.