PM Kisan 13th installment : ದೇಶದ ರೈತರಿಗೆ ಸಿಹಿ ಸುದ್ದಿ : ಶೀಘ್ರವೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು

ನವದೆಹಲಿ : ದೇಶಾದ್ಯಂತ ರೈತ ಬಾಂಧವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ (PM Kisan 13th installment) ಕಾಯುತ್ತಿದ್ದಾರೆ. ಈ ಯೋಜನೆಯ 12ನೇ ಕಂತು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ ರೈತರು 13ನೇ ಕಂತಿಗಾಗಿ ಕಾಯುತ್ತಿದ್ದು, ಶೀಘ್ರವೇ ರೈತರ ಖಾತೆಗೆ ಜಮೆ ಆಗಲಿದೆ ಎಂದು ವರದಿಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಹೊಸ ವರ್ಷವನ್ನು ಎದುರು ನೋಡುತ್ತಿರುವ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ, ಪಿಎಂ ಕಿಸಾನ್‌ನ 13 ನೇ ಕಂತನ್ನು ಫಲಾನುಭವಿ ರೈತರ ಖಾತೆಗೆ ಜಮೆ ಮಾಡುವ ಸಾಧ್ಯತೆ ಇದೆ. ಆದರೆ ಈ ಕುರಿತು ಇದುವರೆಗೂ ಅಧಿಕೃತ ಘೋಷಣೆಯಾಗಿಲ್ಲ.

ದೇಶದ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಮೋದಿ ಸರಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಕಂತುಗಳಾಗಿ ತಲಾ 2000 ರೂ. ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡುತ್ತದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ರೈತರ ಖಾತೆಗೆ ಇದುವರೆಗೆ 12 ಕಂತುಗಳನ್ನು ಜಮೆ ಮಾಡಿದೆ. ರೈತರು ಈಗ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳು ಈ ವಿಷಯಗಳನ್ನು ಈಗಲೇ ಚೆಕ್‌ ಮಾಡಿ :
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು ಯೋಜನೆಯ 13 ನೇ ಕಂತಿಗಾಗಿ ಕಾಯುತ್ತಿದ್ದರೆ, ಫಲಾನುಭವಿಗಳು ಕಾಳಜಿ ವಹಿಸಬೇಕಾದ ಕೆಲವು ವಿಷಯಗಳಿವೆ. ಈ ವಿಷಯಗಳಲ್ಲಿ ಯಾವುದಾದರೂ ತಪ್ಪುಗಳಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗದೆಯೇ ಇರಬಹುದು.ಹಾಗಾಗಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಬೇಕಾಗಿದೆ.

ಇದನ್ನೂ ಓದಿ : Fertilizer subsidy : ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರಕಾರ : ರಸಗೊಬ್ಬರ ಸಬ್ಸಿಡಿ ಕಂತು ಬಿಡುಗಡೆ

ಇದನ್ನೂ ಓದಿ : PM Kisan Update : ಪಿಎಂ ಕಿಸಾನ್ ಯೋಜನೆಯಿಂದ 6000 ರೂ. ಜಮೆ ಆಗಬೇಕಾ : ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ

ಪಿಎಂ ಕಿಸಾನ್‌ ಯೋಜನೆಯ ಎಲ್ಲಾ ಕಂತುಗಳ ಹಣ ನಿಮ್ಮ ಖಾತೆಗೆ ಬರ ಬೇಕಾದರೆ, ಮೊದಲು ಫಲಾನುಭವಿಗಳು ತಮ್ಮ ಇ-ಕೆವೈಸಿಯನ್ನು ತಪ್ಪದೇ ಮಾಡಿಕೊಳ್ಳಬೇಕು. PM ಕಿಸಾನ್ ಅವರ ಅಧಿಕೃತ ವೆಬ್‌ಸೈಟ್‌ ಆದ pmkisan.gov.in ನಿಂದ ಅಥವಾ ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗಿದೆ. ಅಷ್ಟೇ ಅಲ್ಲದೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ಕಂತಿನ ಲಾಭವನ್ನು ಪಡೆಯುವುದನ್ನು ಮುಂದುವರಿಸಲು ಫಲಾನುಭವಿಗಳು ಬಯಸಿದರೆ, ಇದಕ್ಕಾಗಿ ತಮ್ಮ ಭೂಮಿ ಪರಿಶೀಲನೆ ಮಾಡಬೇಕಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರತಿಯೊಬ್ಬ ಫಲಾನುಭವಿಗೆ ಭೂ ಪರಿಶೀಲನೆ ಮಾಡಿಸುವುದು ಅವಶ್ಯಕವಾಗಿದೆ.

PM Kisan 13th installment: Good news for the farmers of the country: The 13th installment of PM Kisan scheme will be released soon.

Comments are closed.