Voter Id Case: ವೋಟರ್‌ ಐಡಿ ಅಕ್ರಮ ಪ್ರಕರಣ : ಚಿಲುಮೆ ಸಂಸ್ಥೆಯ ಇಬ್ಬರು ಅರೆಸ್ಟ್, ಅಕ್ರಮದಲ್ಲಿ ಶಾಸಕರು -ಸಚಿವರ ಹೆಸರು

ಬೆಂಗಳೂರು: (Voter Id Case) ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಚಿಲುಮೆ ಸಂಸ್ಥೆಯ ವಿರುದ್ಧ ಬಿಬಿಎಂಪಿ ಹಲಸೂರು ಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಹಲಸೂರು ಗೇಟ್‌ನ ಅಧಿಕಾರಿ ಜಗದೀಶ್‌ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು, ಚಿಲುಮೆ ಸಂಸ್ಥೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಬೆಂಗಳೂರು ಕೆಂದ್ರ ವಿಭಾಗದ ಪೊಲೀಸರು ಬಂದಿಸಿದ್ದಾರೆ. ಈ ಅಕ್ರಮದಲ್ಲಿ ಸಚಿವರು ಹಾಗೂ ಶಾಸಕರ ಹೆಸರು ಕೇಳಿಬಂದಿದೆ.

ಚಿಲುಮೆ(Voter Id Case) ಕಚೇರಿಯ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಹಲಸೂರು ಗೇಟ್‌ ಪೊಲೀಸರು, ಕಚೇರಿಯಲ್ಲಿದ್ದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿದ್ದ ಕಚೇರಿಯಲ್ಲಿದ್ದ ಕಂಪ್ಯೂಟರ್‌ ಸೇರಿದಂತೆ ಇನ್ನೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದಡೆಯಲ್ಲಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಕ್ರಮದಲ್ಲಿ ಬಿಜೆಪಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಕಲೆಹಾಕಲಾಗಿದ್ದ ಮಾಹಿತಿಗಳನ್ನು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಸೋರಿಕೆ ಮಾಡಿದೆ, ಅಲ್ಲದೇ ಚುನಾವಣೆಯಲ್ಲಿ ಅದನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ಕಾಂಗ್ರೆಸ್‌ ವಿರುದ್ದ ದೂರಿದೆ. ಈ ಪ್ರಕರಣದಲ್ಲಿ ನಂದೀಶ್‌ ರೆಡ್ಡಿ ಹೆಸರು ಕೇಳಿಬರುತ್ತಿದೆ. ಆದರೆ ನಂದೀಶ್ ರೆಡ್ಡಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತನಗೆ ಚಿಲುಮೆ ಸಂಸ್ಥೆಯ ಕುರಿತು ಮೊದಲಿನಿಂದಲೂ ಅನುಮಾನವಿತ್ತು. ಆದರೆ ಅಶ್ವಥ್ ನಾರಾಯಣ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಿದ್ದೇನೆ. ಇದೀಗ ಸದಾನಂದ ಗೌಡರ ಜೊತೆಗೆ ತೆರಳಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : Revision of Voter ID: ವೋಟರ್‌ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ: ಚಿಲುಮೆ ಕಚೇರಿಗೆ ಪೊಲೀಸರ ದಾಳಿ

ಇದನ್ನೂ ಓದಿ : VOTER ID SCAM: ವೋಟರ್ ಐಡಿ ಹಗರಣ.. ಸಿದ್ದರಾಮಯ್ಯ ಕೊಟ್ರು ಕೆಜಿಎಫ್.. ಕಾಂತಾರ ಲಿಂಕ್

ಇನ್ನೂ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವುದು ಪಾಲಿಕೆಯ ಮುಖ್ಯ ಆಯುಕ್ತರೇ ಹೊರತು ರಾಜ್ಯ ಸರ್ಕಾರವಲ್ಲ. ಇದು ಚುನಾವಣಾ ಅಯೋಗದ ನಿರ್ದೇಶನದ ಪ್ರಕಾರ ನಡೆದಿರುವ ಪ್ರಕ್ರಿಯೇ. ಇದರಲ್ಲಿ ರಾಜ್ಯ ಸರ್ಕಾರ ಯಾವುದೇ ಪಾತ್ರ ಹೊಂದಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟ ಪಡಿಸಿವೆ. “ಈ ಪ್ರಕ್ರಿಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚಿಲುಮೆ ಸಂಸ್ಥೆಗೆ ಮತದಾರರ ಮಾಹಿತಿ ಪಡೆಯಲು ಸರ್ಕಾರದಿಂದಲೇ ಅನುಮತಿ ನೀಡಲಾಗಿತ್ತು ಎಂಬ ಆರೋಪ ಸರಿಯಲ್ಲ” ಎಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.

(Voter Id Case) In connection with the case of theft of personal information of voters in Bengaluru, BBMP had filed a complaint against the Chilume organization at Halasuru Gate and Kadugodi police station. On the basis of the complaint, the raid was conducted under the supervision of Jagadish, the officer of Halasur Gate, and two senior officials of Chilume were brought by the police of Bangalore Central Division. The names of ministers and MLAs have been heard in this illegality.

Comments are closed.