Twitter Accounts : ಖಾತೆಗಳ ಪರಿಶೀಲನೆಗಾಗಿ 3 ಬಣ್ಣಗಳನ್ನು ಪ್ರಾರಂಭಿಸಿದ ಎಲಾನ್ ಮಸ್ಕ್: ಇನ್ನು ಈ ಬಣ್ಣಗಳಲ್ಲಿ ಖಾತೆಗಳನ್ನು ಪರಿಶೀಲಿಸಲಿದೆ ಟ್ವಿಟರ್..
ಟ್ವಿಟರ್ (Twitter) ನ ಬಹುನಿರೀಕ್ಷಿತ ಅಕೌಂಟ್ ವೆರಿಫಿಕೇಷನ್ ಪ್ರೋಗ್ರಾಂ (Twitter Accounts Program) ಅನ್ನು ಕಂಪನಿ ಸಿಇಓ ಎಲಾನ್ ಮಸ್ಕ್ (Elon Musk) ಸೋಮವಾರ ಲಾಂಚ್ ಮಾಡಿದರು. ಇಲ್ಲಿಯ ವರೆಗೆ ಎಲ್ಲಾ ಖಾತೆಗಳನ್ನು ಬ್ಲೂಟಿಕ್ನಲ್ಲಿಯೇ ಪರಿಶೀಲಿಸಲಾಗುತ್ತಿತ್ತು. ಆದರೆ ಈಗ ಮೂರು ವಿಭಿನ್ನ ಬಣ್ಣದ ಚೆಕ್ಮಾರ್ಕ್ಗಳನ್ನು ನೀಡಲಾಗಿದೆ. ಅದು ಗೋಲ್ಡ್, ಗ್ರೇ ಮತ್ತು ಬ್ಲ್ಯೂ (Gold, Gray and Blue) ಬಣ್ಣಗಳಾಗಿವೆ. ಮೊದಲು ಬ್ಲ್ಯೂ ಬಣ್ಣವನ್ನು ಹೊಂದಿದ್ದ ಅನೇಕ ಖಾತೆಗಳು ಈಗ ಗೋಲ್ಡ್ ಚೆಕ್ಮಾರ್ಕ್ಗಳನ್ನು ಪ್ರದರ್ಶಿಸುತ್ತಿವೆ. ಇದಕ್ಕೆ ಕಾರಣವೆಂದರೆ ಪ್ರತ್ಯೇಕ ಬಣ್ಣಗಳು ಟ್ವಿಟರ್ನಲ್ಲಿನ ಖಾತೆಗಳ ಪ್ರಕಾರಗಳನ್ನು ಹೇಳುತ್ತವೆ. ಟ್ವಿಟರ್ ಮೂರು ರೀತಿಯ ಅಕೌಂಟ್ ಪ್ರಕಾರಗಳನ್ನು ಪ್ರಾರಂಭಿಸಿದೆ. ವ್ಯಾಪಾರ, ವೈಯಕ್ತಿಕ ಮತ್ತು ಸರ್ಕಾರಿ ಅಂಗಸಂಸ್ಥೆಗಳು (Business, Individual and Government-affiliated) ಇವೇ ಆ ಪ್ರಕಾರಗಳಾಗಿವೆ.
ಏನಿದು ಗೋಲ್ಡ್, ಗ್ರೇ ಮತ್ತು ಬ್ಲ್ಯೂ ಚೆಕ್ಮಾರ್ಕ್ಗಳು?
ಗೋಲ್ಡ್ ಚೆಕ್ಮಾರ್ಕ್:
ಕಂಪನಿಗಳು ಅಥವಾ ಅಧಿಕೃತ ವ್ಯವಹಾರ ಖಾತೆಗಳಿಗಾಗಿ ಗೋಲ್ಡ್ ಚೆಕ್ಮಾರ್ಕ್ಗಳನ್ನು ಗೊತ್ತುಪಡಿಸಿದೆ.
ಗ್ರೇ ಚೆಕ್ಮಾರ್ಕ್:
ಇದು ಸರ್ಕಾರಿ ಖಾತೆಗಳು ಅಥವಾ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಮತ್ತು ಟ್ವಿಟರ್ ಮೂಲಕ ಮೇಲ್ವಿಚಾರಣೆಯನ್ನು ಮಾಡುವ ಖಾತೆಗಳನ್ನು ಪರಿಶೀಲಿಸಲಿದೆ.
ಬ್ಲ್ಯೂ ಚೆಕ್ಮಾರ್ಕ್:
ವೈಯಕ್ತಿಕ ಖಾತೆಗಳ ಪರಿಶೀಲನೆಗಾಗಿ ಬ್ಲ್ಯೂ ಚೆಕ್ಮಾರ್ಕ್ ಗೊತ್ತುಪಡಿಸಿಲಾಗಿದೆ.
ಟ್ವಿಟರ್ನ ಬ್ಲ್ಯೂ ಸಬ್ಸ್ಕ್ರಿಪ್ಷನ್ ಸೇವೆ:
ಟ್ವಿಟರ್ನಲ್ಲಿ ಬ್ಲ್ಯೂ ಚಂದಾದರಿಕೆಗಾಗಿ ಆಂಡ್ರಾಯ್ಡ್ ಬಳಕೆದಾರರು ಮಾಸಿಕ 8 ಡಾಲರ್ಗಳನ್ನು ಮತ್ತು ಐಫೋನ್ ಬಳಕೆದಾರರು ಮಾಸಿಕ 11 ಡಾಲರ್ಗಳನ್ನು ಭರಿಸಬೇಕಾಗುತ್ತದೆ. ಇಂದಿನಿಂದ ಚಂದಾದಾರರು ಮಾತ್ರ, ನೀವು ನಿಮ್ಮ ಖಾತೆಯ ಚಂದಾದಾರರಾದಾಗ ಎಡಿಟ್ ಟ್ವೀಟ್, 1080p ವೀಡಿಯೊ ಅಪ್ಲೋಡ್ಗಳು, ರೀಡರ್ ಮೋಡ್ ಮತ್ತು ನೀಲಿ ಚೆಕ್ಮಾರ್ಕ್ (ಒಮ್ಮೆ ನಿಮ್ಮ ಖಾತೆಯನ್ನು ಪರಿಶೀಲಿಸಿದ ನಂತರ) ವೈಶಿಷ್ಟ್ಯಗಳನ್ನು ಪಡೆಯುತ್ತೀರಿ ಎಂದು ಕಂಪನಿ ಹೇಳಿದೆ. ಶೀಘ್ರದಲ್ಲೇ, ಬ್ಲ್ಯೂ ಚೆಕ್ ಮಾರ್ಕ್ ಹೊಂದಿರುವ ಚಂದಾದಾರರಿಗೆ ಹುಡುಕಾಟ, ಉಲ್ಲೇಖ ಮತ್ತು ಪ್ರತ್ಯುತ್ತರಗಳಲ್ಲಿ ಆದ್ಯತೆಯ ಶ್ರೇಯಾಂಕಗಳನ್ನು ಪಡೆಯುತ್ತಾರೆ. ಅದು ಸ್ಕ್ಯಾಮ್ಗಳು, ಸ್ಪ್ಯಾಮ್ ಮತ್ತು ಬಾಟ್ಗಳ ವಿಸಿಬಲಿಟಿಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಎಂದು ಮೈಕ್ರೋ–ಬ್ಲಾಗಿಂಗ್ ಪ್ಲಾಟ್ಫಾರ್ಮ್ ಹೇಳಿದೆ.
ಬ್ಲ್ಯೂ ಬ್ಯಾಡ್ಜ್ ಚಂದಾದಾರರಾಗಲು ನಿಮ್ಮ Twitter ಖಾತೆಯು ಕನಿಷ್ಠ 90 ದಿನಗಳ ಹಳೆಯದಾಗಿರಬೇಕು ಮತ್ತು ದೃಢೀಕೃತ ಫೋನ್ ಸಂಖ್ಯೆಯನ್ನು ಹೊಂದಿರಬೇಕು. ಇದಕ್ಕೂ ಮೊದಲು, ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರು ಬೇಸಿಕ್ ಬ್ಲೂ ಚೆಕ್ಮಾರ್ಕ್ ಅರ್ಧದಷ್ಟು ಜಾಹೀರಾತುಗಳನ್ನು ಹೊಂದಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ : Amazon India Smartphone Upgrade Day Sale ನಲ್ಲಿ ಈ ಸ್ಮಾರ್ಟ್ಫೋನ್ಗಳ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್…
ಇದನ್ನೂ ಓದಿ : BBMP master plan: 9 ಮಾಲ್ ನಿಂದ 50 ಕೋಟಿ ತೆರಿಗೆ ವಂಚನೆ: ಟ್ಯಾಕ್ಸ್ ವಸೂಲಿಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್
(Twitter Accounts verification update with gold, gray and blue checkmarks. What does it mean?)
Comments are closed.