Twitter Shuts 2 Office : ದೆಹಲಿ ಮತ್ತು ಮುಂಬೈನಲ್ಲಿರುವ ಟ್ವಿಟರ್‌ ಕಛೇರಿಗೆ ಬೀಗ ಹಾಕಿದ ಎಲಾನ್‌ ಮಸ್ಕ್‌; ಕಾರಣ ಏನು ಗೊತ್ತಾ…

ಎಲಾನ್‌ ಮಸ್ಕ್‌ (Elon Musk) ಟ್ವಿಟರ್‌ (Twitter) ಖರೀದಿಸಿದಾಗಿಂದಲೂ ಬಹಳಷ್ಟು ಬದಲಾವಣೆಗಳನ್ನು (Changes) ಮಾಡುತ್ತಲೇ ಇದ್ದಾರೆ. ಈಗ ಆ ಸಾಲಿಗೆ ಕಾಸ್ಟ್‌ ಕಟಿಂಗ್‌ (Cost Cutting) ಕೂಡ ಸೇರಿಕೊಂಡಿದೆ. ಇದಕ್ಕೆ ಕಂಪನಿಯು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಟ್ವಿಟರ್‌ ಸಹ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ (Layoff). ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಿಂದ ಅನೇಕ ವಸ್ತುಗಳನ್ನು ಹರಾಜು ಮಾಡಲಾಗಿದೆ. ಸದ್ಯದ ಬೆಳವಣಿಗೆಯೆಂದರೆ ಟ್ವಿಟರ್, ಭಾರತದಲ್ಲಿರುವ ತನ್ನ ಮೂರು ಕಚೇರಿಗಳಲ್ಲಿ ಎರಡನ್ನು ಲಾಕ್ ಮಾಡಿದೆ (Twitter Shuts 2 Office). ಭಾರತದಲ್ಲಿ ಟ್ವಿಟರ್‌ 3 ಕಛೇರಿಗಳನ್ನು ಹೊಂದಿತ್ತು. ದೆಹಲಿ, ಮುಂಬೈ ಮತ್ತು ಬೆಂಗಳೂರು. ಅದರಲ್ಲಿ ಈಗ ದೆಹಲಿ ಮತ್ತು ಮುಂಬೈನ ಕಛೇರಿಗೆ ಬೀಗ ಹಾಕಲಾಗಿದೆ. ಅಂದರೆ ಇನ್ನು ಮುಂದೆ ಟ್ವಿಟರ್‌ ಭಾರತದಲ್ಲಿ ಒಂದೇ ಒಂದು ಕಛೇರಿಯು ಕಾರ್ಯನಿರ್ವಹಿಸುತ್ತದೆ. ಅದು ಬೆಂಗಳೂರಿನಲ್ಲಿದೆ. ಮುಖ್ಯವಾಗಿ ಅಲ್ಲಿ ಇಂಜಿನಿಯರ್‌ಗಳು ಮುಂತಾದವರು ಕೆಲಸ ಮಾಡುತ್ತಿದ್ದಾರೆ.

ದೆಹಲಿ–ಮುಂಬೈ ಕಛೇರಿಯ ನೌಕರರಿಗೆ ಹೇಳಿದ್ದೇನು?
ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಎಲೋನ್ ಮಸ್ಕ್ ಕೇಳಿಕೊಂಡಿದ್ದಾರೆ. ಇದರಿಂದ ಕಂಪನಿಯ ವೆಚ್ಚಗಳು ಕಡಿಮೆಯಾಗಬಹುದು ಮತ್ತು ಹಣವನ್ನು ಉಳಿಸಬಹುದು ಎಂಬುದಾಗಿದೆ. ಟ್ವಿಟರ್ ಕಳೆದ ವರ್ಷ ಭಾರತದಲ್ಲಿ ತನ್ನ 90% ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಟ್ವಿಟರ್‌ನ ಬ್ಲೂ ಟಿಕ್‌ಗೆ ಭಾರತದಲ್ಲಿ ತಗಲುವ ವೆಚ್ಚವೆಷ್ಟು?
ಭಾರತದಲ್ಲಿ ಬ್ಲೂ ಟಿಕ್‌ ಪ್ರಾರಂಭವಾಗಿ ಕೆಲವೇ ತಿಂಗಳುಗಳು ಕಳೆದಿದೆ. ಟ್ವಿಟರ್ ಬ್ಲೂಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ತಿಂಗಳಿಗೆ 900 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹಾಗೆ ವೆಬ್ ಬಳಕೆದಾರರು ತಿಂಗಳಿಗೆ 650 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ, ಬಳಕೆದಾರರು ಟ್ವೀಟ್ ಅನ್ನು ರದ್ದುಗೊಳಿಸುವುದು, HD ವೀಡಿಯೊವನ್ನು ಅಪ್‌ಲೋಡ್ ಮಾಡುವುದು, ಸರ್ಚನಲ್ಲಿ ಆದ್ಯತೆ ಇತ್ಯಾದಿ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್‌ ಕ್ವಾಲಿಟಿಯಲ್ಲೇ ಫೋಟೋ ಶೇರ್‌ ಮಾಡಬಹುದು; ಹೇಗೆ ಗೊತ್ತಾ…

ಇದನ್ನೂ ಓದಿ : Poco X5 Pro: ಭಾರತದ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಲಗ್ಗೆ; ಇಂದು ಬಿಡುಗಡೆಯಾಗುತ್ತಿರುವ ಪೋಕೊ X5 ಪ್ರೋ ಸ್ಮಾರ್ಟ್‌ಫೋನ್‌

(Twitter Shuts 2 Office Delhi-Mumbai Twitter Office, ask the employee to do work from home)

Comments are closed.