Twitter/X Down : ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಎನಿಸಿಕೊಂಡಿರುವ ಟ್ವೀಟರ್ (Twitter/X Down) ಡೌನ್ ಆಗಿದೆ. ಇದರಿಂದಾಗಿ ಕೋಟ್ಯಾಂತರ ಬಳಕೆದಾರರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಫೀಡ್ ರಿಫ್ರೆಶ್ ಮಾಡಲು ಸಾಧ್ಯವಾಗದೇ ಇರುವುದರಿಂದಾಗಿ ಹೊಸದಾಗಿ ಪೋಸ್ಟ್ ಮಾಡಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ಡೌನ್ ಡಿಟೆಕ್ಟರ್ ವರದಿಯ ಪ್ರಕಾರ ಒಟ್ಟು 7,193 ಮಂದಿ ಬಳಕೆದಾರರು ವರದಿ ಮಾಡಿದೆ.
ಈ ಪೈಕಿ ಶೇ.56ರಷ್ಟು ಬಳಕೆದಾರರು ವೆಬ್‌ಸೈಟ್ ಜೊತೆಗೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶೇ.9ರಷ್ಟು ಬಳಕೆದಾರರು ಸರ್ವರ್ ಸಂಪರ್ಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಹಕರು ತಮ್ಮ ಖಾತೆಯನ್ನು ಲಾಗಿನ್ ಮಾಡಿದ್ರೆ, ಸ್ವಯಂ ಚಾಲಿತವಾಗಿ ಖಾತೆ ಲಾಗ್‌ಔಟ್ ಆಗುತ್ತಿದೆ. ಅಲ್ಲದೇ ಹೊಸ ಫೀಡ್ ಪೋಸ್ಟ್ ಮಾಡುವುದಕ್ಕೆ ಕೂಡ ಸಾಧ್ಯವಾಗುತ್ತಿಲ್ಲ ಎಂಬ ಅಳಲನ್ನು ತೋಡಿ ಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಜುಲೈ ಹಾಗೂ ಅಗಸ್ಟ್‌ನಲ್ಲಿ ಬಳಕೆದಾರರು ಇಂತಹದ್ದೇ ಸಮಸ್ಯೆಯನ್ನು ಎದುರಿಸಿದ್ದರು. ಬೆಳಗ್ಗೆಯಿಂದಲೇ ಎಕ್ಸ್‌ನಲ್ಲಿ ಸಮಸ್ಯೆ ಕಂಡು ಬಂದಿದ್ದು, ಗ್ರಾಹಕರು ನಿರಂತರವಾಗಿ ಸಮಸ್ಯೆಯನ್ನು ವರದಿ ಮಾಡುತ್ತಲೇ ಇದ್ದಾರೆ. ಪ್ರಮುಖವಾಗಿ ವೆಬ್‌ಸೈಟ್ ಮತ್ತು ಆಫ್ಲಿಕೇಶನ್ ಬಳಕೆ ಮಾಡುವಲ್ಲಿ ಈ ಸಮಸ್ಯೆ ತಲೆದೋರಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಕಂಪೆನಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಇದನ್ನೂ ಓದಿ : OTP ಇಲ್ಲದೇ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆಯ ಹಣ : ತಪ್ಪದೇ ಈ ಕೆಲಸ ಇಂದೇ ಮಾಡಿ ಮುಗಿಸಿ
Twitter ಟೈಮ್‌ಲೈನ್ ವೆಬ್ ಮತ್ತು ಮೊಬೈಲ್ ಆವೃತ್ತಿಗಳಲ್ಲಿ ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಟ್ವೀಟರ್‌ನಲ್ಲಿ ಯಾವುದೇ ಟ್ವೀಟ್ ಗಳು ಗೋಚರವಾಗುತ್ತಿರಲಿಲ್ಲ. ಗುರುವಾರ ಬೆಳಗ್ಗೆ ಒಂದು ಗಂಟೆಗಳಿಗೂ ಅಧಿಕ ಕಾಲ ಟ್ವೀಟರ್ ಡೌನ್ ಆಗಿತ್ತು. ಇದೀಗ ಒಂದು ಗಂಟೆಗಳ ನಂತರ ಟ್ವೀಟರ್ ಸೇವೆಗಳು ಪುನರಾರಂಭಗೊಂಡಿವೆ.

ಟ್ವೀಟ್ ಆಪ್ ಮತ್ತು ವೆಬ್‌ಸೈಟ್‌ಗಳಲ್ಲಿ ಬಳಕೆದಾರರಿಗೆ ಯಾವುದೇ ಟ್ಯಾಬ್‌ಗಳಲ್ಲಿ ಯಾವುದೇ ಟ್ವೀಟ್‌ಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಎಲ್ಲಾ ಟ್ಯಾಬ್‌ಗಳು – ಫಾಲೋ ಮಾಡುವುದು, ನಿಮಗಾಗಿ ಸೇರಿದಂತೆ ಎಲ್ಲವೂ ಖಾಲಿಯಾಗಿ ಕಾಣಿಸುತ್ತಿತ್ತು. ಸಮಸ್ಯೆ ಕೇವಲ ಭಾರತೀಯ ಗ್ರಾಹಕರಿಗೆ ಮಾತ್ರವಲ್ಲದೇ ವಿಶ್ವದಾದ್ಯಂತ ಗೋಚರಿಸಿದೆ ಎಂದು ಇಂಡಿಯಾ ಡಾಟ್ ಕಾಂ. ವರದಿ ಮಾಡಿದೆ.
ಇದನ್ನೂ ಓದಿ : ಭರ್ಜರಿ ಡಿಸ್ಕೌಟ್ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್
ಎಲೋನ್ ಮಸ್ಕ್ ಒಡೆತನದ ಪ್ಲಾಟ್‌ಫಾರ್ಮ್ ಕಳೆದ ಎರಡು ತಿಂಗಳಿನಿಂದಲೂ ಹಲವು ಬಾರಿ ಇಂತಹ ಸಮಸ್ಯೆಯನ್ನು ಎದುರಿಸಿದೆ. ಡಿಸೆಂಬರ್ 14 ರಂದು, X ನಿಂದ ಹೊರಹೋಗುವ ಎಲ್ಲಾ ಲಿಂಕ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲದೇ ಲಿಂಕ್‌ಗಳು ಮರು ನಿರ್ದೇಶನವಾಗುತ್ತಿದ್ದರು. ಜುಲೈನಲ್ಲಿ, ಡೌನ್‌ಡೆಕ್ಟರ್ ಯುಎಸ್ ಮತ್ತು ಯುಕೆಯಲ್ಲಿ X ನ 13,000 ಕ್ಕೂ ಅಧಿಕ ದೂರುಗಳು ದಾಖಲಾಗಿದ್ದವು.
ಮಾರ್ಚ್ 6 ರಂದು ಟ್ವೀಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಟ್ವೀಟರ್ ಕೆಲವು ಕಾಲ ಬ್ಲ್ಯಾಂಕ್ ಆಗಿ ಕಾಣಿಸಿಕೊಂಡಿತ್ತು. ಅಲ್ಲೇ ಬಳಕೆದಾರರ ಲಿಂಕ್‌ಗಳು, ಚಿತ್ರಗಳು ಮತ್ತು ವಿಡಿಯೋ ಓಪನ್ ಮಾಡುವ ವೇಳೆಯಲ್ಲಿ ತೊಂದರೆಯನ್ನು ಎದುರಿಸಿದ್ದರು. ಅಲ್ಲದೇ ನಿಯಮಿತ ಬಳಕೆಯಲ್ಲಿ ಸಾಕಷ್ಟು ಅಡಚಣೆಯನ್ನು ಎದುರಿಸಬೇಕಾಗಿತ್ತು. ಇದೀಗ ಟ್ವೀಟರ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಿತ್ತು. ಕೆಲವೊಂದು ಗ್ರಾಹಕರಿಗೆ ಟ್ವೀಟರ್ ಸಾಮಾನ್ಯಕ್ಕಿಂತ ನಿಧಾನವಾಗಿ ಕಾರ್ಯನಿರ್ವಹಿಸಿದ್ದು, ವೆಬ್‌ಸೈಟ್ ಕಾರ್ಯಕ್ಷಮತೆಯನ್ನು ವರದಿ ಮಾಡಿದೆ.
ಇದನ್ನೂ ಓದಿ : IPhone 15 Pro Max ನಿಂದ Google Pixel 8 ವರೆಗೆ : ನೀವು ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಪೋನ್
Twitter/X Down Global Outrage ads Tweets errors