iPhone 15 Pro Max ನಿಂದ Google Pixel 8 ವರೆಗೆ : ನೀವು ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಪೋನ್‌

ಐಪೋನ್‌ (iPhone 15 Pro Max) ಮತ್ತು ಸ್ಯಾಮ್‌ಸಂಗ್‌ ( Samsung S23 Ultra) ಸೇರಿದಂತೆ ನವೆಂಬರ್‌ ತಿಂಗಳಿನಲ್ಲಿ ನೀವು ಖರೀದಿದ ಬಹುದಾದ ಅತ್ಯುತ್ತಮ ಪ್ರೀಮಿಯಂ ಕ್ಯಾಮೆರಾ ಪೋನ್‌ಗಳು ಇಲ್ಲಿವೆ

ಐಪೋನ್‌ (iPhone 15 Pro Max) ಮತ್ತು ಸ್ಯಾಮ್‌ಸಂಗ್‌ ( Samsung S23 Ultra) ಸೇರಿದಂತೆ ನವೆಂಬರ್‌ ತಿಂಗಳಿನಲ್ಲಿ ನೀವು ಖರೀದಿದ ಬಹುದಾದ ಅತ್ಯುತ್ತಮ ಪ್ರೀಮಿಯಂ ಕ್ಯಾಮೆರಾ ಪೋನ್‌ಗಳು ಇಲ್ಲಿವೆ. ಈಗಾಗಲೇ ಐಪೋನ್‌ ಕಂಪೆನಿಯು ಈಗಾಗಲೇ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ನ ಗೇಮಿಂಗ್ ಸಾಮರ್ಥ್ಯಗಳನ್ನು ವಿವರಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಆಪಲ್‌, ಗೂಗಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಅತ್ಯುತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆಗೊಳಿಸಿವೆ. ಅತ್ಯುತ್ತಮ ಕ್ಯಾಮೆರಾ ಕಾರ್ಯಕ್ಷಮತೆಯ ಜೊತೆಗೆ Apple ನ iPhone 15 Pro Max ನಿಂದ Google ನ Pixel 8 ವರೆಗೆ, ನವೆಂಬರ್ 2023 ರಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳನ್ನು ನಾವು ನೋಡೋಣ.

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy
Image Credit to Original Source

ಐಪೋನ್‌ 15 ಪ್ರೋ ಮ್ಯಾಕ್ಸ್‌ (iPhone 15 Pro Max)

ಐಪೋನ್‌ 15 ಪ್ರೋ ಮ್ಯಾಕ್ಸ್‌ (iPhone 15 Pro Max) ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಸ್ಮಾರ್ಟ್‌ಪೋನ್ 48ಮೆಗಾ ಫಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದ್ದು, 12MP ಅಲ್ಟ್ರಾ-ವೈಡ್-ಆಂಗಲ್ ಮತ್ತು 12MP ಟೆಲಿಫೋಟೋ ಲೆನ್ಸ್ – ಹಿಂಭಾಗದಲ್ಲಿ, ಜೊತೆಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 12MP ಮುಂಭಾಗದ ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿ : 200 MP ಕ್ಯಾಮೆರಾ, 8GB RAM… ಅಬ್ಬಬ್ಬಾ Motorola Edge 30 Ultra 5G ಫೀಚರ್ಸ್‌ ನೋಡಿದ್ರೆ ಸುಸ್ತಾಗೋದು ಗ್ಯಾರಂಟಿ

ಐಪೋನ್‌ 15 ಪ್ರೋ ಮ್ಯಾಕ್ಸ್‌ (iPhone 15 Pro Max) 48MP ಪ್ರಾಥಮಿಕ ಕ್ಯಾಮೆರಾವು ಬಳಕೆದಾರರಿಗೆ ಮೂರು ಫೋಕಲ್ ಲೆಂತ್ – 24mm, 28mm ಮತ್ತು 35mm – ಬದಲಾವಣೆಗೆ ಅವಕಾಶವನ್ನು ನೀಡುತ್ತಿದೆ. ಜೊತೆಗೆ 4 ಪಟ್ಟು ಅಧಿಕ ರೆಸಲ್ಯೂಶನ್‌ ಹೊಂದಿರುವ 48MP HEIF ಶಾಟ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಐಪೋನ್‌ ಪ್ರೀಮಿಯಂ ಸ್ಮಾರ್ಟ್‌ಫೋನ್‌ನ 12MP ಟೆಲಿಫೋಟೋ ಲೆನ್ಸ್ 5x ಆಪ್ಟಿಕಲ್ ಜೂಮ್ ಸಾಮರ್ಥ್ಯಗಳನ್ನು ಮತ್ತು ಸಂಯೋಜಿತ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಆಟೋ ಫೋಕಸ್ 3D ಸೆನ್ಸಾರ್ ಶಿಫ್ಟ್ ಮಾಡ್ಯೂಲ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಅಲ್ಲದೇ iPhone 15 Pro Max 4K60 ProRes ವೀಡಿಯೊ ರೆಕಾರ್ಡಿಂಗ್‌ ಬೆಂಬಲದ ಜೊತೆಗೆ USB-C ಪೋರ್ಟ್ ಮೂಲಕ ಬಾಹ್ಯ ಡ್ರೈವ್‌ಗಳಿಗೆ ನೇರ ಸಂಪರ್ಕ್‌ ನೀಡುತ್ತದೆ.

Apple iPhone 15 Pro Max (256 GB) ಬೆಲೆ :₹ 1.6 ಲಕ್ಷ

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy
Image Credit to Original Source

ಗೂಗಲ್‌ ಪಿಕ್ಸೆಲ್ 8 (Google Pixel 8) 

ಗೂಗಲ್‌ ಫಿಕ್ಸೆಲ್‌ 8 (Google Pixel 8) 120Hz ರಿಫ್ರೆಶ್ ದರ ಮತ್ತು 428 ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ. 6.2-ಇಂಚಿನ ಡಿಸ್ಪೈ ಒಳಗೊಂಡಿದ್ದು, ಗೂಗಲ್‌ Pixel 8ನ ಸ್ಕ್ರೀನ್‌ ಅತ್ಯಂತ ಪ್ರಭಾವಶಾಲಿಯಾಗಿದ್ದು, 2000 ನಿಟ್ಸ್ ಗರಿಷ್ಠ ಹೊಳಪಿನ ಜೊತೆಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ನೀಡುತ್ತದೆ.

ಇದನ್ನೂ ಓದಿ : ಹೊಸ ಸ್ಮಾರ್ಟ್​ ವಾಚ್​ನ ಹುಡುಕಾಟದಲ್ಲಿದ್ದೀರೇ..? ಅಮೆಜಾನ್​ನಲ್ಲಿದೆ ಬಿಗ್ಗೆಸ್ಟ್​ ಆಫರ್​

ಇನ್ನು Google Pixel 8 ಪ್ರಬಲವಾದ ಕ್ಯಾಮೆರಾ ಕಾರ್ಯಕ್ಷಮತೆಯು 50MP PD ವೈಡ್ ಪ್ರೈಮರಿ ಕ್ಯಾಮೆರಾ ಜೊತೆಗೆ 12MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 10.5MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 4,575mAh ಬ್ಯಾಟರಿಯಿಂದಾಗಿ ಸುದೀರ್ಘ ಅವಧಿಗೆ ಮೊಬೈಲ್‌ ಬಳಕೆ ಮಾಡಲು ಅನುಕೂಲಕರವಾಗಿದೆ.

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23 ಅಲ್ಟ್ರಾ (Samsung Galaxy S23 Ultra)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23 ಅಲ್ಟ್ರಾ (Samsung Galaxy S23 Ultra) 6.8-ಇಂಚಿನ QHD+ ಎಡ್ಜ್ ಡೈನಾಮಿಕ್ AMOLED 2X ಸೂಪರ್ ಸ್ಮೂತ್ ಡಿಸ್ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಗೇಮ್ ಮೋಡ್‌ ಒಳಗೊಂಡಿದೆ. ಸ್ಮಾರ್ಟ್‌ಪೋನ್‌ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾ ಒಳಗೊಂಡಿದೆ.

F2.2 ದ್ಯುತಿರಂಧ್ರದೊಂದಿಗೆ 12MP ಅಲ್ಟ್ರಾ-ವೈಡ್ ಕ್ಯಾಮೆರಾ, F1.7 ದ್ಯುತಿರಂಧ್ರದೊಂದಿಗೆ 200 MP ವೈಡ್ ಕ್ಯಾಮೆರಾ, 3x ಆಪ್ಟಿಕಲ್ ಜೂಮ್ ಮತ್ತು F2.4 ದ್ಯುತಿರಂಧ್ರದೊಂದಿಗೆ 10MP ಟೆಲಿಫೋಟೋ ಕ್ಯಾಮೆರಾ ಮತ್ತು 10MP ಟೆಲಿಫೋಟೋ ಕ್ಯಾಮರಾ ಜೊತೆಗೆ Zoomx4 ಮತ್ತು F2.4. 9 ದ್ಯುತಿರಂಧ್ರವನ್ನು ಹೊಂದಿದೆ.

ಇದನ್ನೂ ಓದಿ : ₹ 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ : Samsung Galaxy M34 5G, IQOO Z7s

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23 ಅಲ್ಟ್ರಾ(Samsung Galaxy S23 Ultra 5G) ಹಸಿರು, 12GB, 256GB ಸಂಗ್ರಹಣೆಯ ಸ್ಮಾರ್ಟ್‌ಪೋನ್‌ ಬೆಲೆ -₹ 1 ಲಕ್ಷ ರೂಪಾಯಿ

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy
Image Credit to Original Source

ಒನ್‌ಪ್ಲಸ್‌ 11 5G (OnePlus 11 5G) 

ಒನ್‌ಪ್ಲಸ್‌ 11 (OnePlus 11 5G)6.7-ಇಂಚಿನ QHD+ Samsung LTPO 3.0 AMOLED ಡಿಸ್ಪ್ಲೇಯನ್ನು ಹೊಂದಿದ್ದು, ಫೋನ್‌ನ ಪರದೆಯು 120Hz ನ ರಿಫ್ರೆಶ್ ದರವನ್ನು ಒಳಗೊಂಡಿದೆ. 20.1:9 ಆಕಾರ ಅನುಪಾತವನ್ನು 1300 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. Adreno 740 GPU ಜೊತೆಗೆ Qualcomm Snapdragon 8 Gen 2 ಆಕ್ಟಾ-ಕೋರ್ ಚಿಪ್‌ ಒಳಗೊಂಡಿದೆ.

ಹ್ಯಾಂಡ್‌ಸೆಟ್ 16GB LPDDR5x RAM ವರೆಗೆ ವಿಸ್ತರಣೆ ಮಾಡ ಬಹುದಾಗಿದೆ. ಈ ಸ್ಮಾರ್ಟ್‌ಪೋನ್‌ನಲ್ಲಿ 5,000mAh ಬ್ಯಾಟರಿ ಹೊಂದಿದ್ದು, ಸುದೀರ್ಘ ಅವಧಿಗೆ ಸ್ಮಾರ್ಟ್‌ಪೋನ್‌ ಬಳಕೆ ಮಾಡಬಹುದಾಗಿದೆ. ಜೊತೆಗೆ 100 ವ್ಯಾಟ್ SuperVOOC ವೇಗದ ಚಾರ್ಜಿಂಗ್ ನೀಡಲಾಗಿದ್ದು, ಅತ್ಯಂತ ವೇಗವಾಗಿ ಮೊಬೈಲ್‌ ಚಾರ್ಜ್‌ ಮಾಡಲು ಸಹಕಾರಿಯಾಗಲಿದೆ.

ಒನ್‌ಪ್ಲಸ್‌ 11 5G (OnePlus 11 5G) ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದ್ದು, f/1.8 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲ ಹೊಂದಿದೆ. ಅಲ್ಲದೇ 50MP ಸೋನಿ IMX890 ಕ್ಯಾಮೆರಾ ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48MP ಸೋನಿ IMX58 ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಜೊತೆಗೆ f/2.2 ಲೆನ್ಸ್ ಮತ್ತು 32MP ಕ್ಯಾಮೆರಾ ಒಳಗೊಂಡಿದೆ.

ಸೆಲ್ಪಿ ಪ್ರಿಯರು ಹಾಗೂ ವಿಡಿಯೋ ಕರೆ ಮಾಡುವವರಿಗೆ ಅನುಕೂಲಕ್ಕಾಗಿಯೇ ಸ್ಮಾರ್ಟ್‌ಪೋನ್‌ ಮುಂಭಾಗದಲ್ಲಿ 16MP ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು f/2.4 ಲೆನ್ಸ್‌ ಹೊಂದಿದ್ದು, 4G LTE, Wi-Fi 6, ಬ್ಲೂಟೂತ್ v5.3, GPS ಕನೆಕಸ್ಟ್‌ ಮಾಡಬಹುದಾಗಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಬಳಕೆ ಮಾಡಲು ಅವಕಾಶವಿದ್ದು, ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy
Image Credit to Original Source

iPhone 15 Pro Max Google Pixel 8 Samsung Galaxy S23 Ultra OnePlus 11 5G best camera smartphone you can buy

Comments are closed.