Realme GT3 : ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯದ ರಿಯಲ್‌ಮಿ GT3 ಅನಾವರಣ; 10 ನಿಮಿಷದ ಒಳಗೆ ಚಾರ್ಜ್‌ ಆಗಲಿದೆಯಂತೆ ಈ ಫೋನ್‌…

ರಿಯಲ್‌ಮಿ ಜಾಗತಿಕವಾಗಿ GT3 ಸ್ಮಾರ್ಟ್‌ಫೋನ್‌ ಅನ್ನು ಬಾರ್ಸಿಲೋನಾದಲ್ಲಿ ನಡೆಯುತ್ತಿರುವ MWC-2023 ಅನಾವರಣ ಮಾಡಿದೆ. 240W ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯ ಫೋನ್‌ (Realme GT3) ಇದಾಗಿದೆ ಎಂದು ಕಂಪನಿಯು ಹೇಳಿದೆ. GT ಸರಣಿಯ ಈ ಫೋನ್‌ ತನ್ನ ನೇರ ಪ್ರತಿಸ್ಪರ್ಧಿ ಒನ್‌ಪ್ಲಸ್‌ 11R ಗೆ ಸ್ಪರ್ಧೆ ನೀಡಲಿದೆ. ಅದೇನೇ ಇರಲಿ ಹೊಸ ರಿಯಲ್‌ಮಿ GT3 ಸ್ಮಾರ್ಟ್‌ಫೋನ್‌ 240W ನ ಅಲ್ಟ್ರಾ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಕೇವಲ 10 ನಿಮಿಷಗಳಲ್ಲಿ ಫೋನ್‌ ಅನ್ನು ಚಾರ್ಜ್‌ ಮಾಡಬಹುದು ಎಂದು ರಿಯಲ್‌ಮಿ ಹೇಳುತ್ತಿದೆ.

ರಿಯಲ್‌ಮಿ GT3 ಫೋನ್‌ನಲ್ಲಿ 240W ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ನ ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಿದೆ. ಈ ಪೋನ್‌ ಸಂಪೂರ್ಣವಾಗಿ ಡೆಡ್‌ ಸ್ಥಿತಿಗೆ ಹೋದರೂ ಚಾರ್ಜ್ಂಗ್‌ಗೆ ಅಳವಡಿಸಿದ ನಂತರ ಅಷ್ಟೇ ವೇಗವಾಗಿ ರೀಬೂಟ್‌ ಆಗಲಿದೆ. ಇದು ಆರಂಭಿಕ 50% ಚಾರ್ಜಿಂಗ್‌ ಗುರಿ ತಲುಪಲು ವೇಗವಾಗಿ ಕಾರ್ಯನಿರ್ವಹಿಸಲಿದೆ. 30% ಗುರಿ ತಲುಪಿದ ನಂತರ ಚಾರ್ಜ್‌ ಮಾಡುವ ವೇಗವು 155W ಸಾಮರ್ಥ್ಯಕ್ಕೆ ಇಳಿಯಲಿದೆ. 4600mAh ಬ್ಯಾಟರಿಯು 9 ನಿಮಿಷಗಳ ಒಳಗೆ 90% ಚಾರ್ಜ್‌ ಆಗಲಿದೆ. ಇದು 240W ಚಾರ್ಜಿಂಗ್‌ನ ವಿಶೇಷತೆಯಾಗಿದೆ. ಕ್ವಿಕ್‌ ಚಾರ್ಜಿಂಗ್‌ ಒಂದು ರೀತಿಯ ಗೇಮ್‌ ಚೇಂಜರ್‌ ಏಕೆಂದರೆ, ಕೇವಲ ಒಂದೆರಡು ನಿಮಿಷಗಳ ಚಾರ್ಜ್‌ ನಿಮಗೆ ಅರ್ಧ ದಿನಕ್ಕೆ ಸುಲಭವಾಗಿ ಹೊಂದಿಸಬಹುದು ಎಂದು ಹೇಳುತ್ತಿದೆ.

ರಿಯಲ್‌ಮಿ GT3 ವಿಶೇಷತೆಗಳು:
ರಿಯಲ್‌ಮಿ GT3 ಸ್ಮಾರ್ಟ್‌ಫೋನ್‌ SoCಯ ಫ್ಲಾಗ್‌ಶಿಪ್‌ ಇರುವ ಸ್ನಾಪ್‌ಡ್ರಾಗನ್‌ 8+ ಜೆನ್‌ 1 ಚಿಪ್‌ಸೆಟ್‌ ನಿಂದ ಬರಲಿದೆ. ಈ ಫೋನ್‌ ಬಿಸಿಯಾಗುವುದನ್ನು ನಿಯಂತ್ರಿಸಲು ಸ್ಟೇನ್‌ಲೆಸ್‌ ಸ್ಟೀಲ್‌ ವೇಪರ್‌ ಕೂಲಿಂಗ್‌ ಸಿಸ್ಟಮ್‌ ಮ್ಯಾಕ್ಸ್‌ 2.0 ಯನ್ನು ಬಳಸಿಕೊಳ್ಳಲಿದೆ. ಈ ಫೋನ್‌ ಸಂಗ್ರಹಣೆಗಾಗಿ UFS 3.1ಅನ್ನು ಪಡೆದುಕೊಂಡಿದೆ. ರಿಯಲ್‌ಮಿ GT3 ದೊಡ್ಡದಾದ 6.74 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಜೊತೆಗೆ ಇದರ ರಿಫ್ರೆಶ್‌ ದರವು 144 Hz ಆಗಿದೆ. ಇದರಲ್ಲಿ 2772X1240 ರೆಸಲ್ಯೂಷನ್‌ ಮತ್ತು 93.69 % ನ ಸ್ಕ್ರೀನ್‌–ಟು–ಬಾಡಿ ಅನುಪಾತವಿರಲಿದೆ.

ರಿಯಲ್‌ಮಿ GT3 ಫೋನ್‌ ಟ್ರಿಪ್ಪಲ್‌ ಕ್ಯಾಮೆರಾ ಸೆಟ್‌ಅಪ್‌ ನಿಂದ ಬರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಆಗಿದ್ದು, ಎರಡನೇ ಕ್ಯಾಮೆರಾವು 2MP ಮೈಕ್ರೋಲೆನ್ಸ್‌ ಮತ್ತು ಮೂರನೇ ಕ್ಯಾಮೆರಾವು 8MPವೈಡ್‌ ಆಂಗಲ್‌ ಲೆನ್ಸ್‌ ಹೊಂದಿದೆ. ಇದು ಸೆಲ್ಪೀ ಮತ್ತು ವಿಡೀಯೋ ಕರೆಗಳಿಗಾಗಿ ಮುಂಭಾಗದಲ್ಲಿ 16 MP ಕ್ಯಾಮೆರಾ ಇರಲಿದೆ.

ಇದನ್ನೂ ಓದಿ : OnePlus 11 R 5G ಸ್ಮಾರ್ಟ್‌ಫೋನ್‌ನ ಮಾರಾಟ ಆರಂಭ; ಪಡೆದುಕೊಳ್ಳಿ 9,000 ರೂ.ಗಳ ವರೆಗಿನ ಭರ್ಜರಿ ಆಫರ್‌

ಇದನ್ನೂ ಓದಿ : Pacemaker and Smartwatches : ಸ್ಮಾರ್ಟ್‌ವಾಚ್‌ನಿಂದ ಪೇಸ್‌ಮೇಕರ್‌ ಹಾಕಿಸಿಕೊಂಡವರಿಗೆ ತೊಂದರೆ ಆಗಬಹುದಾ? ಅಧ್ಯಯನ ಹೇಳುವುದಾದರೂ ಏನು?

(Ultra-fast charging 240W Realme GT3 smartphone launch in MWC 2023)

Comments are closed.