ಕಟ್ಟಡದಿಂದ ನೆರೆಹೊರೆಯವರ ಮಕ್ಕಳನ್ನು ಎಸೆದ ವ್ಯಕ್ತಿ: 1 ಮಗು ಸಾವು: ಆರೋಪಿ ಅರೆಸ್ಟ್‌

ಥಾಣೆ: (Thane crime) ವ್ಯಕ್ತಿಯೊಬ್ಬ ತನ್ನ ನೆರೆಹೊರೆಯವರ ಐದು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳನ್ನು ಕಟ್ಟಡದ ಎರಡನೇ ಮಹಡಿಯಿಂದ ಎಸೆದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮುಂಬ್ರಾ ಟೌನ್‌ಶಿಪ್‌ನ ದೇವ್ರಿಪಾಡಾ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಅಪರಾಧದ ಹಿಂದಿನ ನಿಖರವಾದ ಕಾರಣಗಳು ತಿಳಿದುಬಂದಿಲ್ಲ.

ಆರೋಪಿಯನ್ನು ಆಸಿಫ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಮುಂಬ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮತ್ತು ಆತನ ಪತ್ನಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿ ದಂಪತಿಗಳಿಗೆ ಮಕ್ಕಳಿರಲಿಲ್ಲ. ಆರೋಪಿಯ ಪತ್ನಿ ಸಂತ್ರಸ್ತರ ತಾಯಿಯ ಸ್ನೇಹಿತೆಯಾಗಿದ್ದು, ಅವರು ಆಗಾಗ್ಗೆ ಮಾತನಾಡುತ್ತಿದ್ದರು ಅದು ಅವನಿಗೆ ಇಷ್ಟವಿರಲಿಲ್ಲ. ಆರೋಪಿ ದಂಪತಿಗಳು ಸಂತ್ರಸ್ತ ಕುಟುಂಬದ ನೆರೆಯವರಾಗಿದ್ದು, ಸಂತ್ರಸ್ತ ಕುಟುಂಬದ ಇಬ್ಬರು ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು. ಹೀಗೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಆರೋಪಿಯು ಎರಡೂ ಮಕ್ಕಳನ್ನು ಕಟ್ಟಡದಿಂದ ಕೆಳಗೆ ಎಸೆದಿದ್ದಾನೆ ಎಂದು ಅಧಿಕಾರಿ ಹೇಳಿದರು.

ಘಟನೆಯಲ್ಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸಹೋದರಿಗೆ ಗಂಭೀರ ಗಾಯಗಳಾಗಿವೆ. ಗಂಭೀರ ಗಾಯಗಳಾಗಿದ್ದರೂ ಕೂಡ ಬಾಲಕಿ ಮನೆಗೆ ತೆರಳಿದ್ದು, ಅವರ ನೆರೆಹೊರೆಯವರು ಕಟ್ಟಡದಿಂದ ಎಸೆದಿದ್ದಾರೆ ಎಂದು ತನ್ನ ತಂದೆಗೆ ತಿಳಿಸಿದ್ದಾಳೆ ಕೂಡಲೇ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ : ಆಸ್ಟ್ರೇಲಿಯಾ ಕ್ಲೀನರ್‌ ಹತ್ಯೆ ಪ್ರಕರಣ : ಆರೋಪಿ ತಮಿಳುನಾಡಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಪೊಲೀಸರು

ಇದನ್ನೂ ಓದಿ : Greece train accident: ಗ್ರೀಸ್‌ನಲ್ಲಿ ರೈಲು ಅಪಘಾತ: 26 ಪ್ರಯಾಣಿಕರು ಸಾವು, 85 ಕ್ಕೂ ಹೆಚ್ಚು ಮಂದಿಗೆ ಗಾಯ

Thane crime: Man throws neighbor’s children from building: 1 child dies: Accused arrested

Comments are closed.