ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಸೇವೆಯನ್ನು, ಆರು ವರ್ಷಗಳ ಹಿಂದೆ ಅಂದರೆ 2016 ರಲ್ಲಿ ಪ್ರಾರಂಭಿಸಲಾಯಿತು. ಇದು ತ್ವರಿತ ರಿಯಲ್–ಟೈಮ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ ಅಧಿಕಾರ ನೀಡುತ್ತದೆ (UPI Security Tips). ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳನ್ನು, ತಡೆರಹಿತ ಫಂಡ್ ರೂಟಿಂಗ್ ಮತ್ತು ವ್ಯಾಪಾರಿ ಪಾವತಿಗಳನ್ನು ಒಂದು ಅಪ್ಲಿಕೇಶನ್‌ನಲ್ಲಿ ಮಾಡುತ್ತದೆ. ಇದು ಪೀರ್-ಟು-ಪೀರ್ ಸಂಗ್ರಹಣೆಯ ವಿನಂತಿಯನ್ನು ಸಹ ಪೂರೈಸುತ್ತದೆ.
ಯುಪಿಐ ಡಿಜಿಟಲ್ ಪಾವತಿಗಳನ್ನು ತುಂಬಾ ಸುಲಭಗೊಳಿಸಿದೆ. ಭಾರತದಲ್ಲಿ ರಿಯಲ್–ಟೈಮ್ ಪಾವತಿಗಳಲ್ಲಿ ಕ್ರಾಂತಿಯೇ ಆಗಿದೆ. ಆಗಸ್ಟ್‌ನಲ್ಲಿ UPI ಮೋಡ್ ಮೂಲಕ ಮಾಡಿದ ವಹಿವಾಟುಗಳು 10.7 ಟ್ರಿಲಿಯನ್ ರೂ.ಗೆ ಏರಿಕೆಯಾಗಿದೆ ಎಂದು ಎನ್‌ಪಿಸಿಐ ಬಿಡುಗಡೆ ಮಾಡಿದ ಮಾಹಿತಿಯ ಹೇಳುತ್ತದೆ. ಆದಾಗ್ಯೂ, UPI ನ ಜನಪ್ರಿಯತೆ ಹೆಚ್ಚಾದಂತೆ ವಂಚಕರು ಮತ್ತು ಜನರನ್ನು ಮೂರ್ಖರನ್ನಾಗಿಸುವ ಮತ್ತು ಅವರ ಖಾತೆಗಳಿಂದ ಹಣವನ್ನು ಕಸಿದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚುತ್ತಿವೆ. ಪ್ರತಿ ಬಾರಿಯೂ ತಂತ್ರಜ್ಞಾನದ ಪ್ರಗತಿಯೊಂದಿಗೆ, ಸ್ಕ್ಯಾಮರ್‌ಗಳು ಜನರನ್ನು ಲೂಟಿ ಮಾಡಲು ವಿಭಿನ್ನ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
UPI ವಂಚನೆಗಳ ಅಪಾಯದ ದೃಷ್ಟಿಯಿಂದ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಹಿವಾಟುಗಳನ್ನು ಸುರಕ್ಷಿತಗೊಳಿಸಲು UPI ಭದ್ರತಾ ಸಲಹೆಗಳನ್ನು #SafeWithSBI ಎಂದು ಟ್ವೀಟ್ ಮಾಡುವುದರ ಮೂಲಕ ಹಂಚಿಕೊಂಡಿದೆ.
ಟ್ವೀಟ್‌ನಲ್ಲಿ SBI ಸುರಕ್ಷಿತ ವಹಿವಾಟುಗಳನ್ನು ಮಾಡಲು 6 ಸಲಹೆಗಳನ್ನು ಹಂಚಿಕೊಂಡಿದೆ.
Always remember these UPI security Tips while using or making UPI transactions. Stay Alert & #SafeWithSBI. #SBI #AmritMahotsav #CyberSafety #CyberSecurity #StayVigilant #StaySafe pic.twitter.com/LMR9E9nJnG
— State Bank of India (@TheOfficialSBI) September 27, 2022
UPI ವಹಿವಾಟುಗಳನ್ನು ಸುರಕ್ಷಿತವಾಗಿರಿಸಲು SBI ಹಂಚಿಕೊಂಡಿರುವ 6 ಸಲಹೆಗಳು ಹೀಗಿವೆ :
- ಹಣವನ್ನು ಸ್ವೀಕರಿಸುವಾಗ ನಿಮ್ಮ UPI ಪಿನ್ ಅನ್ನು ನೀವು ನಮೂದಿಸುವ ಅಗತ್ಯವಿಲ್ಲ.
- ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಗುರುತನ್ನು ಯಾವಾಗಲೂ ಪರಿಶೀಲಿಸಿಕೊಳ್ಳಿ.
- ರ್‍ಯಾಂಡಮ್/ಅನೌನ್ ಸಂಗ್ರಹ ವಿನಂತಿಯನ್ನು ಸ್ವೀಕರಿಸಬೇಡಿ.
- ನಿಮ್ಮ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- QR ಕೋಟ್ ಮೂಲಕ ಪಾವತಿ ಮಾಡುವಾಗ ಯಾವಾಗಲೂ ಫಲಾನುಭವಿಯ ವಿವರಗಳನ್ನು ಪರಿಶೀಲಿಸಿಕೊಳ್ಳಿ.
- ನಿಯಮಿತವಾಗಿ ನಿಮ್ಮ UPI ಪಿನ್ ಅನ್ನು ಬದಲಾಯಿಸಿ.
ಇದನ್ನೂ ಓದಿ : Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್ ಕಾರ್; ಇದು ಜನಸಾಮಾನ್ಯರ ಕಾರ್ ಆಗಬಹುದೇ…
(UPI Security Tips sbi shares 6 tips for safe upi transactions)