Rest of India Team : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

ಬೆಂಗಳೂರು: 2019-20ನೇ ಸಾಲಿನ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧದ ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ (Rest of India team) ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದಿಂದ ಟೆಸ್ಟ್ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ (Mayank Aagrwal) ಮಾತ್ರ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಅಮೋಘ ದ್ವಿಶತಕ ಬಾರಿಸಿದ್ದ ಮುಂಬೈನ ಯುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashaswi Jaiswal), ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದ ಮುಂಬೈನ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಸರ್ಫರಾಜ್ ಖಾನ್ (Sarfaraz Khan) ಅವರಿಗೂ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಸಿಕ್ಕಿದೆ. ಜಮ್ಮು ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ (Umran Malik) ಅವರಿಗೂ ಸ್ಥಾನ ನೀಡಲಾಗಿದೆ.

ರೆಸ್ಟ್ ಇಂಡಿಯಾ ತಂಡವನ್ನು ಭಾರತ ಟೆಸ್ಟ್ ತಂಡದ ಆಟಗಾರ ಹೈದರಾಬಾದ್’ನ ಹನುಮ ವಿಹಾರಿ (Hanuma Vihari) ಮುನ್ನಡೆಸಲಿದ್ದು, ಪಂದ್ಯ ಅಕ್ಟೋಬರ್ 1ರಿಂದ 5ರವೆಗೆ ರಾಜ್’ಕೋಟ್’ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಇರಾನಿ ಕಪ್ ಮತ್ತೆ ವಾಪಸ್ ಬಂದಿದ್ದು, ಈ ವರ್ಷದ ದೇಶೀಯ ಕ್ರಿಕೆಟ್ ಟೂರ್ನಿ ಇರಾನಿ ಕಪ್ ಪಂದ್ಯದೊಂದಿಗೆ ಆರಂಭವಾಗಲಿದೆ.

ಇರಾನಿ ಕಪ್ ಪಂದ್ಯ
ಸೌರಾಷ್ಟ್ರ Vs ರೆಸ್ಟ್ ಆಫ್ ಇಂಡಿಯಾ
ದಿನಾಂಕ: ಅಕ್ಟೋಬರ್ 1ರಿಂದ 5
ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನ, ರಾಜ್’ಕೋಟ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ರೆಸ್ಟ್ ಆಫ್ ಇಂಡಿಯಾ (Rest of India Team ) ತಂಡ:

ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಜಯಂತ್ ಯಾದವ್, ಸೌರಭ್ ಕುಮಾರ್, ಆರ್.ಸಾಯಿ ಕಿಶೋರ್, ಮುಕೇಶ್ ಕುಮಾರ್, ಉಮ್ರಾನ್ ಮಲಿಕ್, ಕುಲ್ದೀಪ್ ಸೇನ್, ಅರ್ಝಾನ್ ನಾಗಸ್ವಾಲಾ.

ಇದನ್ನೂ ಓದಿ : Sanju Samson Cutout : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್

ಇದನ್ನೂ ಓದಿ : Suryakumar Yadav Record : 3.7 ಎಸೆತಕ್ಕೊಂದು ಬೌಂಡರಿ, 8.9 ಎಸೆತಕ್ಕೊಂದು ಸಿಕ್ಸರ್; ಸೂರ್ಯನಿಗೆ Sky is the only limit

Irani Cup 2022 only one Karnataka Plyer Mayank Aagrwal in Rest of India team

Comments are closed.