ಅತ್ಯಂತ ಜನಪ್ರಿಯ ಮೆಸ್ಸೇಜಿಂಗ್ ಆಪ್ ವಾಟ್ಸ್‌ಅಪ್(WhatsApp Chat Lock) ತನ್ನ ಬಳಕೆದಾರರಿಗೆ ಹಲವಾರು ವೈಶಿಷ್ಟ್ಯಗಳನ್ನು ಒದಿಗಿಸಿದೆ. ಅದರಲ್ಲಿ ಪ್ರಮುಖವಾದದ್ದು ಬಯೋಮೆಟ್ರಿಕ್ ಸೆಕ್ಯುರಿಟಿ ಅಂದರೆ ನಿಮ್ಮ ಫಿಂಗರ್‌ಪ್ರಿಂಟ್ ಮೂಲಕ ಲಾಕ್ ಮಾಡುವ ವೈಶಿಷ್ಟ್ಯ(WhatsApp Chat Lock). ಐಒಎಸ್ ಮತ್ತು ಎಂಡ್ರಾಯ್ಡ್‌ಗಳಿ ಈ ಸೌಲಭ್ಯವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಟ್ಸ್‌ಅಪ್ ಒದಗಿಸಿದೆ. ಆದರೆ ನಾವು ಇಲ್ಲಿ ನಿಮಗೆ ಎಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಮೂಲಕ ಹೇಗೆ ಲಾಕ್ ಮಾಡಬಹುದು ಅನ್ನುವುದನ್ನು ಹೇಳಿದ್ದೇವೆ.
ಈ ವೈಶಿಷ್ಟ್ಯವೂ ನೀವು ಅಂದುಕೊಂಡಂತೆಯೇ ಬಹಳ ಸುಲಭವಾಗಿಯೇ ಕೆಲಸ ಮಾಡುತ್ತದೆ. ನೀವು ಮೊಬೈಲ್ ಅನ್‌ಲಾಕ್ ಮಾಡಿದ್ದರೂ ಕೂಡಾ ಆಪ್ ತೆರೆಯಬೇಕು ಎಂದರೆ ಮತ್ತೊಮ್ಮೆ ಫಿಂಗರ್‌ಪ್ರಿಂಟ್ ಒದಗಿಸುವುದರ ಮೂಲಕವೇ ತೆರೆಯಬೇಕು. ಒಂದು ಅರ್ಥದಲ್ಲಿ ಇದನ್ನು ಡಬಲ್ ಲೇಯರ್ ಸೆಕ್ಯುರಿಟಿ ಅನ್ನಬಹುದು. ನೀವೊಬ್ಬರೇ ನಿಮ್ಮ ಮೊಬೈಲ್‌ನ ವಾಟ್ಸ್‌ಅಪ್ ಅನ್ನು ತೆರೆಯಬಹುದು.
ವಾಟ್ಸ್‌ಅಪ್ ತನ್ನ ಎಂಡ್ರಾಯ್ಡ್ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾದ ಫಿಂಗರ್‌ಪ್ರಿಂಟ್ ಲಾಕ್ ಕೂಡ ಒಂದು. ಈ ವೈಶಿಷ್ಟ್ಯ ಕೇವಲ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಂವೇದನಾ ಸಾಮರ್ಥ್ಯವಿರುವ ಮೊಬೈಲ್ ಫೋನ್‌ಗಳಲ್ಲಿ ಮಾತ್ರ ಉಪಯೋಗಿಸಬಹುದಾಗಿದೆ, ಮತ್ತು ವಾಟ್ಸ್‌ಅಪ್‌ನ ಇತ್ತೀಚಿನ ವರ್ಷನ್ ಗಳಲ್ಲಿ ಮಾತ್ರ ಬಳಸಬಹುದಾಗಿದೆ.
ಎಂಡ್ರಾಯ್ಡ್ ಫೋನ್‌ನ ವಾಟ್ಸ್‌ಅಪ್ ಚಾಟ್‌ಗಳನ್ನು ಫಿಂಗರ್‌ಪ್ರಿಂಟ್‌ನಿಂದ ಲಾಕ್ ಮಾಡುವುದು ಹೇಗೆ?
- ನೀವು ವಾಟ್ಸ್‌ಅಪ್‌ನ ಇತ್ತೀಚಿನ ವರ್ಷನ್ ಗೆ ಅಪ್ಡೇಟ್ ಆಗಿದ್ದೀರಿ ಎಂದು ಖಾತ್ರಿಪಡಿಸಿಕೊಳ್ಳಿ.
- ನಿಮ್ಮ ಫೋನ್‌ನ ವಾಟ್ಸ್‌ಅಪ್ ತೆರೆಯಿರಿ.
- ಬಲ ಮೇಲಿನ ಮೂಲೆಯಲ್ಲಿರುವ ಓವರ್‌ಫ್ಲೋ (ಮೂರು ಡಾಟ್) ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಸೆಟ್ಟಿಂಗ್ಸ್ ಆಯ್ದುಕೊಳ್ಳಿ.
- ನಂತರ ಅಕಾಂಟ್ > ಪ್ರೈವೆಸಿ ಗೆ ಹೋಗಿ.
- ಪ್ರೈವೆಸಿ ಯಲ್ಲಿ ಕೆಳಗಡೆ ಸ್ಕಾಲ್ ಮಾಡಿ.
- ಫಿಂಗರ್‌ಪ‍್ರಿಂಟ್ ಲಾಕ್ ಆಯ್ಕೆ ಆಯ್ದುಕೊಳ್ಳಿ ಮತ್ತು ಎನೇಬಲ್ ಮಾಡಿ.
- ನಂತರ ವಾಟ್ಸ್‌ಅಪ್ ಅನ್‌ಲಾಕ್ ಮಾಡಲು ನಿಮ್ಮ ಫಿಂಗರ್‌ಪ್ರಿಂಟ್‌ನೊಂದಿಗೆ ನೀವು ದೃಢಿಕರಿಸಬೇಕಾಗುತ್ತದೆ.
ಇದನ್ನೂ ಓದಿ : WhatsApp : ಕಾಂಟಾಕ್ಟ್ ನಂಬರ್ ಸೇವ್ ಮಾಡ್ದೆನೇ ವ್ಯಾಟ್ಸಅಪ್‌ನಲ್ಲಿ ಮೆಸೇಜ್ ಕಳುಹಿಸಬಹುದು! ಹೇಗೆ ಗೊತ್ತೇ?
(WhatsApp Chat Lock How to lock chats on WhatsApp on Android Phone)