BMTC Bus Ticket Price : ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಜೀವನಾಡಿ: ಬಿಎಂಟಿಸಿ ಬಸ್ ಟಿಕೇಟ್ ದರ‌ ಹೆಚ್ಚಳ

ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ಬೆಳಗ್ಗೆ ಎದ್ದರೇ ಸಾಕು ಯಾವುದರ ದರ ಏರಿಕೆಯಾಗುತ್ತೋ ಅಂತ ಅತಂಕ ಪಡೋ ಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಡಿಸೇಲ್ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದ್ದರೇ, ಇತ್ತ ವಿದ್ಯುತ್, ಹೊಟೇಲ್ ಊಟ ತಿಂಡಿ ಸೇರಿದಂತೆ ಎಲ್ಲ ವಸ್ತುವಿನ ದರವೂ ಒಂದಿಲ್ಲೊಂದು ರೂಪದಲ್ಲಿ ಏರಿಕೆ ಆಗುತ್ತಿದೆ. ಈ ಮಧ್ಯೆ ಈಗ ಬೆಂಗಳೂರಿನ ಜೀವನಾಡಿ ಎನಿಸಿದ ಬಿಎಂಟಿಸಿ (BMTC Bus Ticket Price) ಕೂಡ ದರ ಏರಿಕೆ ಶಾಕ್ ನೀಡಿದೆ.

ಹೌದು ಕೊರೋನಾದಿಂದ ಕಳೆದ ಎರಡು ಮೂರು ವರ್ಷದಿಂದ ರಾಜ್ಯದ ಹಾಗೂ ರಾಜ್ಯ ರಾಜಧಾನಿಯ ಜೀವನಾಡಿ ಎನ್ನಿಸಿರುವ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ‌ ನಷ್ಟದಲ್ಲಿದೆ. ಈ ಮಧ್ಯೆ ಈ ನಷ್ಟ ಸರಿದೂಗಿಸಲು ಈಗ ಬಿಎಂಟಿಸಿ ದರ ಏರಿಕೆಗೆ ಮುಂದಾಗಿದೆ. ಬಸ್ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್ ತಟ್ಟಲಿದ್ದು, ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಬಿಎಂಟಿಸಿ 2 ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.

ಇದಕ್ಕೂ ಮೊದಲು ಬಿಎಂಟಿಸಿ ಶೇ.20ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಆದ್ರೆ ಈಗ 2 ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಕಳೆದ ವಾರ BMTC ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಒಂದೊಮ್ಮೆ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಪ್ರಯಾಣ ದರ ಹೆಚ್ಚಳವಾಗಲಿದೆ. ನಷ್ಟವನ್ನು ಸರಿದೂಗಿಸುವುದು, ಉದ್ಯೋಗಿ ಗಳ ಸಂಬಳ ಹಾಗೂ ಪಿಎಫ್ ಸೇರಿದಂತೆ ಬಿಎಂಟಿಸಿಯ ಪ್ರತಿ‌ತಿಂಗಳ ಖರ್ಚಿನ ಅಗತ್ಯಕ್ಕಾಗಿ 35 ಶೇಕಡಾ ದರ ಏರಿಕೆ ಅನಿವಾರ್ಯ ಎಂದು ಬಿಎಂಟಿಸಿ ಸರ್ಕಾರಕ್ಕೆ ಮನವರಿಕೆ‌ಮಾಡಿಸಿದೆ.

ಇನ್ನು ಒಂದೊಮ್ಮೆ ಶೇಕಡಾ 35 ರಷ್ಟು ಟಿಕೇಟ್ ದರ ಏರಿಕೆಯಾದ್ರೇ ಈಗ ಆರಂಭಿಕ ದರ ಇರೋ 5 ರೂ. 35% ಹೆಚ್ಚಾದ್ರೆ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಎಂದು ಬಿಎಂಟಿಸಿ 7 ರೂ ನಿಗದಿ ಮಾಡಬಹುದು. ಇದೇ ರೀತಿ 10 ರೂ ಇದ್ದ ದರ 13 ರೂ. 15 ಇದ್ದ ದರ 20ರೂ ಹೀಗೆ ಏರಿಕೆ ಆಗಲಿದೆ. ಪ್ರಯಾಣಿಕರಿಗೆ ದೊಡ್ಡಮಟ್ಟದ ಹೊರೆ ಬೀಳಲಿದೆ. ಆದರೆ ಚುನಾವಣೆ ಹೊತ್ತಿನಲ್ಲಿ ಈ ಬೆಲೆ ಏರಿಕೆ ಪ್ರಸ್ತಾಪಕ್ಕೆ ಸರ್ಕಾರ ಒಪ್ಪುತ್ತಾ ಎನ್ನೋದು ಕುತೂಹಲದ ಸಂಗತಿ.

ಇದನ್ನೂ ಓದಿ : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ

ಇದನ್ನೂ ಓದಿ : ಸಿಲಿಕಾನ್‌ ಸಿಟಿಗೆ ಮಾಲಿನ್ಯದಿಂದ ಆತಂಕ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

BMTC Bus Ticket Price Hike Shortly

Comments are closed.