KGF Chapter 2 : ತೆರೆಗೆ ಬಂದ ಧೀರ ಧೀರ ಧೀರ ಸುಲ್ತಾನಾ : ಮೋಡಿ ಮಾಡಿದ ಕೆಜಿಎಫ್-2 ಸಾಂಗ್

ಮೂರು ವರ್ಷಗಳ ಕಾಯುವಿಕೆಯ ಬಳಿಕ ನಾಳೆ ಅಂತಿಮವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಕೆಜಿಎಫ್ (KGF Chapter 2) ರಿಲೀಸ್ ಆದ ವರ್ಷಗಳ ಬಳಿಕ ಮತ್ತೊಮ್ಮೆ ರಾಕಿ ಬಾಯಿಯನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ಈ ಮಧ್ಯೆ ಈಗಾಗಲೇ ಸಾಂಗ್ ಹಾಗೂ ಟ್ರೇಲರ್ ಗಳನ್ನು ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಷಿಸಿರೋ ಚಿತ್ರತಂಡ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ನಡೆದಿರುವಾಗಲೇ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳನ್ನು ಸೆಳೆದಿದೆ.

ಹೌದು, ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-೨ ಸಿನಿಮಾ ರಿಲೀಸ್ ಗೂ ಮುನ್ನವೇ ಯಶ್ ಸಾಹಸವನ್ನು ಬಣ್ಣಿಸುವ ಧೀರ ಧೀರ ಧೀರ ಧೀರ ಈ ಸುಲ್ತಾನ್ ಎಂಬ ಸಾಂಗ್ ನ ರಿಲೀಕಲ್ ವಿಡಿಯೋ ತೆರೆ ಕಂಡಿದೆ. ರವಿ ಬಸ್ರೂರ ಸಂಗೀತದಲ್ಲಿ ಮೂಡಿ ಬಂದಿರೋ ಈ ಹಾಡು ಕೇವಲ ನಾಯಕನನ್ನು ಬಣ್ಣಿಸೋ ಸಾಂಗ್ ಆಗಿದ್ದು, ಪಂಚಿಂಗ್ ಸಾಲುಗಳು ಹಾಗೂ ಮ್ಯೂಸಿಕ್ ಮತ್ತು ಯಶ್ ಗ್ರ್ಯಾಂಡ್ ಸ್ಕ್ರೀನಿಂಗ್ ನಿಂದ ಗಮನ ಸೆಳೆದಿದೆ.

ಸಾಂಗ್ ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಕಂಡಿದ್ದು, 24 ಗಂಟೆಯೊಳಗೆ ಹಾಡು ಲಕ್ಷಾಂತರ ವೀವ್ಸ್ ಪಡೆದು ದಾಖಲೆ ಬರೆಯೋ ಭರವಸೆ ಮೂಡಿಸಿದೆ. ಒಬ್ಬಂಟಿ ನಿಂತ ರಣಧೀರ,ಸುಡುವ ಬೆಂಕಿ ಸುರಿಸುತಾ, ಧೀರ ಧೀರ ಧೀರ ಧೀರ ಸುಲ್ತಾನಾ ಎಂಬ ಸಾಲುಗಳು ರಾಕಿಂಗ್ ಸ್ಟಾರ್ ಖಡಕ್ ಲುಕ್ ಗೆ ಮತ್ತಷ್ಟು ಮೆರುಗು ತಂದಿದೆ. ಸಾಂಗ್ ನಲ್ಲಿ ಸಿನಿಮಾದ ಯಶ್ ಅವತಾರಗಳನ್ನು ತೋರಿಸಲಾಗಿದ್ದು ಒಂದು ಪ್ರೇಮ್ ನಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ.

ಸಾಂಗ್ ಸಖತ್ ಟ್ರೆಂಡ್ ಮೂಡಿಸುವ ಭರವಸೆ ತರುವಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಸಿನಿಮಾ ರಿಲೀಸ್ ಹೊತ್ತಿನಲ್ಲೇ ತೆರೆಗೆ ಬಂದ ಹಾಡು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಧ್ಯೆ ನಾಳೆ ಜಗತ್ತಿನಾದ್ಯಂತ 9 ಸಾವಿರ ಸ್ಕ್ರಿನ್ ಗಳಲ್ಲಿ ರಿಲೀಸ್ ಆಗ್ತಿದ್ದು, ಭಾರತವೊಂದರಲ್ಲೇ ಸರಿಸುಮಾರು 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ನೀವು ಕೆಜಿಎಫ್- 2 ನೋಡಬಹುದಾಗಿದೆ.

ಇದನ್ನೂ ಓದಿ : ಯಶ್‌ ನೆನಪಿನಾಳದ ಮಾತು! ಕೆಜಿಎಫ್ ನ 8 ವರ್ಷಗಳಲ್ಲಿ ನಾವೂ ಬಹಳ ಬೆಳೆದಿದ್ದೇವೆ: ಈ ನೆನಪುಗಳೇ ನಮ್ಮ ಆಸ್ತಿ

ಇದನ್ನೂ ಓದಿ : ಕೆಜಿಎಫ್‌ ನಿಂದ ಅನಂತನಾಗ್ ದೂರ ಸರಿದದ್ದು ಅವರ ವೈಯುಕ್ತಿಕ ಕಾರಣಗಳಿಂದ ಎಂದ ಪ್ರಶಾಂತ್ ನೀಲ್

Sulthana KGF Chapter 2 Songs Release Rocking Star Yash Prashanth Neel Ravi Basrur Hombale Movies

Comments are closed.