Tasteless Kebabs : ಪತ್ನಿ ಮಾಡಿಕೊಟ್ಟ ಕಬಾಬ್​ ರುಚಿಯಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ..!

ಬೆಂಗಳೂರು : Tasteless Kebabs : ಕೆಲವರಿಗೆ ಯಾವುದು ಸರಿ ಅಂದರೂ ತಿನ್ನುವ ಆಹಾರ ಮಾತ್ರ ಸರಿ ಇರಬೇಕು. ರುಚಿಯಲ್ಲಿ ಸಣ್ಣ ಬದಲಾವಣೆಯನ್ನೂ ಸಹಿಸುವುದಿಲ್ಲ. ಆದರೆ ಈ ಅಭ್ಯಾಸವು ಒಬ್ಬರ ಜೀವ ತೆಗೆಯುವಂತಿದ್ದರೆ ಭಾರೀ ಕಷ್ಟ. ಈ ವಿಚಾರವನ್ನು ಈ ಸಂದರ್ಭದಲ್ಲಿ ವಿವರಿಸಲು ಕಾರಣ ಕೂಡ ಇದೆ. ಏಕೆಂದರೆ ಈ ಮಾತುಗಳಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯು ಕಬಾಬ್​ ತಯಾರಿಸಿದ್ದು ರುಚಿಯಾಗಿಲ್ಲ ಎಂಬ ಕಾರಣಕ್ಕೆ ಪತಿಯು ಆಕೆಯೊಂದಿಗೆ ಜಗಳವಾಡಿದ್ದು ಮಾತ್ರವಲ್ಲದೇ ಆಕೆಯನ್ನು ಮಾರಕಾಸ್ತ್ರಗಳಿಂದ ಇರಿದಿದ್ದಾನೆ. ಬಳಿಕ ಸ್ಥಳೀಯರು ತನಗೆ ಥಳಿಸಬಹುದು ಎಂಬ ಭಯದಿಂದ ಈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ .


ಮೃತ ಆರೋಪಿಯನ್ನು ಸುರೇಶ್​ ಎಂ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಅರೆಕೆರೆ ಲೇ ಔಟ್​ನ ಬನ್ನೇರುಘಟ್ಟ ರಸ್ತೆಯಲ್ಲಿ ಜುಲೈ 27ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಗಾರ್ಮೆಂಟ್ಸ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಸುರೇಶ್​ ಎಂ. ಕೆಲಸ ಮುಗಿಸಿ ಮನೆಗೆ ತೆರಳಿದ್ದ. ಮನೆಗೆ ಬಂದವನೇ ಮದ್ಯಪಾನ ಮಾಡಲು ಶುರು ಮಾಡಿದ್ದ ಈತ ತನಗೆ ಡ್ರಿಂಕ್ಸ್​ ಮಾಡುವ ವೇಳೆ ತಿನ್ನಲು ಕಬಾಬ್​ ಬೇಕು ಎಂದು ಪತ್ನಿ ಬಳಿ ಡಿಮ್ಯಾಂಡ್​ ಮಾಡಿದ್ದಾನೆ. ಪತ್ನಿ ಶಾಲಿನಿ ಕೂಡ ಪತಿಗೆ ಕಬಾಬ್​ ತಯಾರಿಸಿಕೊಟ್ಟಿದ್ದರು. ಕಬಾಬ್​ ಸೇವಿಸಿದ ಸುರೇಶ್​ ಮಾಡಿದ ಕಬಾಬ್​ ರುಚಿಯಾಗಿಲ್ಲ ಎಂದು ಕ್ಯಾತೆ ತೆಗೆದಿದ್ದ .


ಇದೇ ವಿಚಾರವಾಗಿ ಪತ್ನಿ ಶಾಲಿನಿ ಹಾಗೂ ಸುರೇಶ್​ ನಡುವೆ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ಸುರೇಶ್​ ಪತ್ನಿಯ ಕೈಗಳನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕತ್ತರಿಸಿದ್ದಾನೆ. ನೋವಿನಿಂದ ಪತ್ನಿಯು ಕಿರುಚಲು ಆರಂಭಿಸುತ್ತಿದ್ದಂತೆಯೇ ಈತ ಮನೆಯಿಂದ ಎಸ್ಕೇಪ್​ ಆಗಿದ್ದಾನೆ. ಕೂಡಲೇ ಪತ್ನಿ ಶಾಲಿನಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ಪರಾರಿಯಾಗಿದ್ದ ಸುರೇಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಆತ ಅಲ್ಲೇ ಸಮೀಪದಲ್ಲಿ ಖಾಲಿ ನಿವೇಶನದಲ್ಲಿ ನೇಣಿಗೆ ಶರಣಾದ ಮಾಹಿತಿ ಲಭ್ಯವಾಗಿದೆ. ಸುರೇಶ್​ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.


ಈ ದಂಪತಿ ಮೂಲತಃ ಕೊಡಗಿನವರಾಗಿದ್ದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಬೊಮ್ಮನಹಳ್ಳಿಯಲ್ಲಿರುವ 2 ಬೇರೆ ಬೇರೆ ಗಾರ್ಮೆಂಟ್ಸ್​ಗಳಲ್ಲಿ ಇವರು ಕೆಲಸಕ್ಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Commercial LPG cylinder :ವಾಣಿಜ್ಯ ಸಿಲಿಂಡರ್​ಗಳ ದರ 36 ರೂಪಾಯಿ ಇಳಿಕೆ

ಇದನ್ನೂ ಓದಿ : WhatsApp : ವಾಟ್ಸ್‌ಅಪ್‌ನಲ್ಲಿ ಇನ್ನುಮುಂದೆ ಗ್ರೂಪ್‌ ಅಡ್ಮಿನ್‌ಗಳು ಗ್ರೂಪ್‌ನ ಯಾವ ಮೆಸ್ಸೇಜ್‌ ಆದರೂ ಡಿಲೀಟ್‌ ಮಾಡಬಹುದು!

Bengaluru Man Stabs Wife Over Tasteless Kebabs Dies By Suicide Later

Comments are closed.