WhatsApp ನಲ್ಲಿ ಬರುವ ಸುಳ್ಳು ಸುದ್ದಿಗಳು ಯಾವುದು ಎಂದು ನೀವು ತಿಳಿಯಬೇಕೆ? ಈ ಟ್ರಿಕ್ಸ್‌ ಉಪಯೋಗಿಸಿ ನೋಡಿ!

WhatsApp ಜಗತ್ತಿನಲ್ಲೇ ಅತೀ ಹೆಚ್ಚು ಸಂದೇಶಗಳನ್ನು ರವಾನಿಸುವ ಬಹುದೊಡ್ಡ ವೇದಿಕೆ. ಭಾರತದಲ್ಲಂತೂ ಸುಮಾರು 55 ಕೋಟಿಗಿಂತಲೂ ಅಧಿಕ ಜನರು ವ್ಯಾಟ್ಸ್‌ಅಪ್‌ನ(WhatsApp) ಬಳಕೆದಾರರಾಗಿದ್ದಾರೆ. ಅಂದರೆ, ದಿನವೊಂದಕ್ಕೆ ಬಿಲಿಯನ್‌ಗಳಷ್ಟು ಟೆಕ್ಸ್ಟ್‌, ವಿಡಿಯೋ, ಮತ್ತು ಆಡಿಯೋಗಳನ್ನೊಳಗೊಂಡ ಮೆಸ್ಸೇಜ್‌ ಜನರಿಂದ ಜನರಿಗೆ ರವಾನಿಸಲ್ಪಡುತ್ತಿದೆ ಎಂದರ್ಥ.

ಆದರೆ, ಈ ವ್ಯಾಟ್ಸ್‌ಅಪ್‌ನಲ್ಲಿ ಬರುವ ಮಸ್ಸೇಜ್‌ಗಳಲ್ಲಿ ಹೆಚ್ಚಿನವು ತಪ್ಪು ಮಾಹಿತಿಗಳನ್ನು ಕೊಡುವಂತವುಗಳೇ ಆಗಿವೆ. ಒಂದು ವೇಳೆ ನೀವು ವ್ಯಾಟ್ಸ್‌ಅಪ್‌ನಲ್ಲಿ ಬರುವ ತಪ್ಪುಮಾಹಿತಿಗಳಿಂದ ದೂರವಿರಲು ಬಯಸುತ್ತಿದ್ದರೆ ಅವುಗಳನ್ನು ನೀವೇ ಪರೀಕ್ಷಿಸಬಹುದು. ಸಂದೇಶಗಳನ್ನು ದೃಢೀಕರಿಸಲು ಕೆಲವು ಸುಲಭದ ಮಾರ್ಗಗಳಿವೆ.

ವ್ಯಾಟ್ಸ್‌ಅಪ್‌ನಲ್ಲಿಯ ಸುಳ್ಳು ಸುದ್ದಿಗಳನ್ನು ಪರೀಕ್ಷಿಸುವ ಸುಲಭದ ಮಾರ್ಗಗಳು:

ಮೆಸ್ಸೇಜ್‌ಗಳನ್ನು ಸರಿಯಾಗಿ ಗಮನಿಸಿ:
ವ್ಯಾಟ್ಸ್‌ಅಪ್‌ನಲ್ಲಿ ಬಂದತಹ ಮೆಸ್ಸೇಜ್‌ ಸ್ವಾಭಾವಿಕವಾದ ಮಾಹಿತಿಯೇ ಎಂದು ತಿಳಿಯಲು ನಿಮ್ಮ ಸಾಮಾನ್ಯ ಬುದ್ಧಿ ಉಪಯೋಗಿಸಿ. ನೀವು ಪಡೆದ ಮೆಸ್ಸೇಜ್‌ನಲ್ಲಿರುವ ಮಾಹಿತಿ ಸರಿಯಿದೆಯೇ ಎಂದು ತಿಳಿಯಲು ಇಂಟರ್‌ನೆಟ್‌ ಉಪಯೋಗಿಸಿ ಪರೀಕ್ಷಿಸಿ. ಇಂಟರ್‌ನೆಟ್‌ನಲ್ಲಿ ಆರೀತಿಯ ಯಾವುದೇ ಮಾಹಿತಿಗಳು ಲಭ್ಯವಿಲ್ಲವೆಂದಾದರೆ ಅದು ತಪ್ಪುಮಾಹಿತಿಗಳನ್ನು ನೀಡುತ್ತಿರುವ ಮೆಸ್ಸೇಜ್‌ ಎಂದು ತಿಳಿದುಕೊಳ್ಳಿ. ಅಂತಹ ಮೆಸ್ಸೇಜ್‌ಗಳನ್ನು ಯಾರಿಗೂ ಫಾರ್ವರ್ಡ ಮಾಡಲೇಬೇಡಿ ಮತ್ತು ಅವುಗಳನ್ನು ಡಿಲೀಟ್‌ ಮಾಡಿ.

ಇದನ್ನೂ ಓದಿ: WhatsApp Web ನಿಮ್ಮ ಮೆಸ್ಸೇಜ್‌ ಡಿಲೀಟ್‌ ಆಗಿದೆಯೇ? ಅದನ್ನು ಪುನಃ ಪಡೆಯಬಹುದು! ಹೇಗೆ ಅಂತೀರಾ?

ಮೆಸ್ಸೇಜ್‌ನಲ್ಲಿಯ ಸ್ಪೆಲ್ಲಿಂಗ್‌ಗಳನ್ನು ಚೆಕ್‌ ಮಾಡಿ:
ನಿಮಗೆ ಬಂದಂತಹ ಮೆಸ್ಸೇಜ್‌ಗಳಲ್ಲಿನ ಸ್ಪೆಲ್ಲಿಂಗ(ಅಕ್ಷರ)ಗಳನ್ನು ಸರಿಯಾಗಿ ಗಮನಿಸಿ. ಅದರಲ್ಲಿ ಅನೇಕ ತಪ್ಪುಗಳಿದ್ದರೆ ಅದು ಒಂದು ತಪ್ಪು ಮಾಹಿತಿ ಹರಡುವ ಮೆಸ್ಸೇಜ್‌ ಎಂದು ತಿಳಿಯಿರಿ. ಅಂತಹ ಮೆಸ್ಸೇಜ್‌ಗಳನ್ನು ಫಾರ್ವರ್ಡ್‌ ಮಾಡದೆಯೇ ಡಿಲೀಟ್‌ ಮಾಡಿ.

ಮೆಸ್ಸೇಜ್‌ನ ಮೂಲ ತಿಳಿಯಿರಿ:
ಮೆಸ್ಸೇಜ್‌ನ ಮೂಲವನ್ನು ಪರಿಶೀಲಿಸುವುದರಿಂದ ನಿಮಗೆ ಅದು ಅಧಿಕೃತ ಮಾಹಿತಿಯೇ ಅಥವಾ ಸುಳ್ಳು ಮಾಹಿತಿಯೇ ಎಂದು ತಿಳಿದುಕೊಳ್ಳಬಹುದು. ಮೆಸ್ಸೇಜ್‌ಗಳನ್ನು ಮೂಲ ಪರಿಶೀಲಿಸಲು ಮೊದಲು ಆ ಮೂಲದ ಹೆಸರು ಅಥವಾ ವೆಬ್‌ಸೈಟ್‌ ಎಲ್ಲಿಯದು ಎಂದು ತಿಳಿಯಲು ಪ್ರಯತ್ನಿಸಿ. ವೆಬ್‌ಸೈಟ್‌ಗಳು ನಿಜವಾಗಿಯೂ ಅವರದ್ದೇ ಎಂದು ಸರ್ಚ್‌ ಮಾಡಿ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಒಂದೇ ತರಹದ ಅಥವಾ ಸುಳ್ಳು ವೆಬ್‌ಸೈಟ್‌ಗಳು ಇಂತಹ ಮಸ್ಸೇಜ್‌ಗಳನ್ನು ಕಳುಹಿಸಲು ಉಪಯೋಗಿಸಲ್ಪಡುತ್ತವೆ. ಅದರಲ್ಲೂ ಭಾರತದಲ್ಲಿ ಧರ್ಮ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳು ಕಾಳ್ಗಿಚ್ಚಿನಂತೆ ಹರಡುತ್ತವೆ. ಎಂದಾದರೂ ವ್ಯಾಟ್ಸ್‌ಅಪ್‌ನಲ್ಲಿ ಫಾರ್ವರ್ಡ್‌ ಆದ ಮೆಸ್ಸೇಜ್‌ಗಳು ನಿಮ್ಮ ಸಿದ್ಧಾಂತ ಅಥವಾ ಧರ್ಮ ಮತ್ತು ರಾಜಕೀಯ ನಿಲುವುಗಳ ಮೇಲೆ ಪ್ರಭಾವಬೀರುತ್ತಿದೆ ಎಂದೆನಿಸಿದರೆ ಆಗ ನೀವು ಬಹಳ ಎಚ್ಚರಿಕೆಯಿಂದಿರಿ. ಅವುಗಳ ಮೂಲ ಪರಶೀಲಿಸದೇ ಫಾರ್ವರ್ಡ್‌ ಮಾಡಲೇಬೇಡಿ.

PIB(ಪ್ರೆಸ್‌ ಇನ್ಫಾರ್‍ಮೇಷನ್‌ ಬ್ಯೂರೋ)ಯೇ ಎಂದು ಚೆಕ್‌ ಮಾಡಿ:
PIB(ಪ್ರೆಸ್‌ ಇನ್ಫಾರ್‍ಮೇಷನ್‌ ಬ್ಯೂರೋ) ಕಾಲಕಾಲಕ್ಕೆ ಇಂಟರ್‌ನೆಟ್‌ನಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳಿರುವ ಮೆಸ್ಸೇಜ್‌ಗಳನ್ನು ಪರಿಶೀಲಿಸುತ್ತಿರುತ್ತದೆ. ಮುಂದಿನ ಸಲ ನಿಮಗೆ ಅಂತಹ ಮೆಸ್ಸೇಜ್‌ಗಳನ್ನು ಚೆಕ್‌ ಮಾಡಲು PIB ಯ Twitter PIB ಪೇಜ್‌ಗೆ ಹೋಗಿ ಅಲ್ಲಿ ಪರಿಶೀಲಿಸಿ. PIB ನಿರ್ದಿಷ್ಟ ಸುದ್ದಿಗಳನ್ನು ಪರಿಶೀಲಿಸಿದ ಸಾಕಷ್ಟು ನಿದರ್ಶನಗಳಿವೆ.

ಫಾರ್ವರ್ಡ್‌ ಮೆಸ್ಸೇಜ್‌ ಕಂಡುಹಿಡಿಯಲು ಪ್ರಯತ್ನಿಸಿ:
ಫಾರ್ವರ್ಡ್‌ ಮೆಸ್ಸೇಜ್‌ಗಳಿಗೆ ತಪ್ಪು ಮಾಹಿತಿಗಳನ್ನು ರವಾನಿಸುವ ಸಾಕಷ್ಟು ಅವಕಾಶಗಳಿವೆ. 2018ರಲ್ಲಿಯೇ ವೇ ಬ್ಯಾಕ್‌ ಅನ್ನುವ ವೈಶಿಷ್ಟ್ಯವನ್ನು ವ್ಯಾಟ್ಸ್‌ಅಪ್‌ ಅಳವಡಿಸಿದೆ. ಇದರಿಂದ ಆ ಮೆಸ್ಸೇಜ್‌ ಫಾರ್ವರ್ಡ ಆಗಿದೆಯೇ ಅಥವಾ ಇಲ್ಲವೇ ಎಂದು ಬಲ ಮೇಲಿನ ತುದಿಯಲ್ಲುರುವ ಚಿಹ್ನೆಯಿಂದ ಸುಲಭವಾಗಿ ತಿಳಿಯಬಹುದಾಗಿದೆ.

ಮುಂದಿನ ಸಲ ವ್ಯಾಟ್ಸ್‌ಅಪ್‌ನಲ್ಲಿ ಯಾವುದೇ ಮಾಹಿತಿಯ ಸಂದೇಶಗಳು ಬಂದಿದ್ದರೆ ಅದನ್ನು ಕ್ರಾಸ್‌–ಚೆಕ್‌ ಮಾಡದೆಯೇ ಫಾರ್ವರ್ಡ್‌ ಮಾಡಬೇಡಿ. ಕೆಲ ಸಮಯ ಯೋಚಿಸಿ ನಂತರ ಅದು ಸರಿ ಎನಿಸಿದರೆ ಮಾತ್ರ ಫಾರ್ವರ್ಡ್‌ ಮಾಡಿ. ಇಂದಿನ ಇಂಟರ್‌ನೆಟ್‌ ದಿನಗಳಲ್ಲಿ ಸುಳ್ಳು ಮಾಹಿತಿಗಳು ದೊಡ್ಡ ಪ್ರಮಾದವನ್ನೇ ಸೃಷ್ಟಿಸಬಹುದು. ಅದಕ್ಕಾಗಿ ಯಾವುದೇ ಮೆಸ್ಸೇಜ್‌ಗಳನ್ನು ಫಾರ್ವರ್ಡ್‌ ಮಾಡುವ ಮೊದಲು ಎಚ್ಚರವಿರಲಿ.

ಇದನ್ನೂ ಓದಿ: WhatsApp web ನ ಸುರಕ್ಷತೆಗಾಗಿ ಟ್ರಾಫಿಕ್‌ ಲೈಟ್‌! ಈ ಬ್ರೌಸರ್‌ ಎಕ್ಸಟೆಂನ್ಷನ್‌ ನ ಉಪಯೋಗ ನಿಮಗೆ ತಿಳಿದಿದೆಯೇ!

(WhatsApp How to find fake information on WhatsApp)

Comments are closed.