Whatsapp new feature: ವಾಟ್ಸಾಪ್‌ ನಲ್ಲಿ ತಪ್ಪಿ ಮೆಸೇಜ್‌ ಮಾಡಿದ್ರೆ ಚಿಂತೆ ಬೇಡಾ : ನಿಮಗಾಗಿ ಬಂದಿದೆ ಹೊಸ ಫೀಚರ್ಸ್‌

(Whatsapp new feature) ಹೆಚ್ಚಾಗಿ ಎಲ್ಲರ ಕೈಯಲ್ಲೂ ಮೊಬೈಲ್‌ಫೋನ್‌ ಇದ್ದೇ ಇರುತ್ತದೆ. ಪ್ರತಿಯೊಬ್ಬರು ವಾಟ್ಸ್‌ ಆಪ್‌ ಬಳಸುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗುವ ಒಂದು ವೇಗದ ಮೆಸೇಜಿಂಗ್‌ ಅಪ್ಲಿಕೇಶನ್‌ ಎಂದರೆ ತಪ್ಪಾಗಲಾರದು. ವಾಟ್ಸ್‌ ಅಪ್‌ ನಲ್ಲಿ ಸಂದೇಶಗಳನ್ನು ಕಳುಹಿಸಬೇಕಾದರೆ ಅಪ್ಪಿತಪ್ಪಿ ಒಬ್ಬರಿಗೆ ಕಳುಹಿಸುವ ಸಂದೇಶ ಬೇರೊಬ್ಬರಿಗೆ ಕಳುಹಿಸಿ ನಂತರ ಪೇಚಾಡುತ್ತೇವೆ. ಆದರೆ ಇದೀಗ ವಾಟ್ಸಾಪ್‌ ಮತ್ತೊಂದು ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದ್ದು, ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಮೆಟಾ ಮಾಲಿಕತ್ವದಲ್ಲಿರುವ ವಾಟ್ಸಾಪ್‌ ಕಂಪನಿಯು ವಾಟ್ಸಾಪ್‌ ಬಳಕೆದಾರರ ಅಗತ್ತತೆಗಳನ್ನು ಪೂರೈಸಲು ದಿನೇ ದಿನೇ ಹೊಸ ಹೊಸ ಫೀಚರ್ಸ್‌(Whatsapp new feature) ಗಳನ್ನು ನೀಡುತ್ತಿದೆ. ಕೆಲವೊಮ್ಮೆ ವಾಟ್ಸಾಪ್‌ ಬಳಕೆದಾರರು ತಪ್ಪಾಗಿ ಒಬ್ಬರಿಗೆ ಕಳುಹಿಸುವ ಸಂದೇಶವನ್ನು ಇನ್ನೊಬ್ಬರಿಗೆ ಕಳುಹಿಸಿ ನಂತರದಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಸಂದರ್ಭಗಳಿಗೆ ಸಹಾಯವಾಗುವಂತೆ ಇದೀಗ ಹೊಸ ಫೀಚರ್ಸ್‌ ಬಿಡುಗಡೆಯಾಗಿದ್ದು, ಅಪ್ಪಿತಪ್ಪಿ ಸಂದೇಶ ರವಾನೆಯಾದಾಗ ಡಿಲೀಟ್‌ ಫಾರ್‌ ಎವ್ರಿವನ್‌ ನೀಡುತ್ತಿದ್ದೆವು. ಅದರೆ ಇನ್ನುಮುಂದೆ ಡಿಲೀಟ್‌ ಫಾರ್‌ ಮೀ ಎಂಬ ಆಯ್ಕೆಯನ್ನು ಒತ್ತಿದಾಗ ಅಂಡೂ (undo) ಮಾಡಲು ವಾಟ್ಸಾಪ್‌ ನಿಮಗೆ ಅನುಮತಿಯನ್ನು ನೀಡುತ್ತದೆ.

ಇತ್ತೀಚೆಗೆ ವಾಟ್ಸಾಪ್‌ ಆಕ್ಸಿಡೆಂಟಲ್‌ ಡಿಲೀಟ್‌ ಎಂಬ ಹೊಸ ರೀತಿಯ ಅಪ್ಡೇಟ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಈ ಅಪ್ಡೇಟ್‌ ಬಳಕೆದಾರರು ಕಳುಹಿಸಿದ ಸಂದೇಶವನ್ನು ಪುನರಾವರ್ತಿಸಲು ಐದು ಸೆಕೆಂಡ್‌ ನ ಆಯ್ಕೆಯನ್ನು ನೀಡುತ್ತದೆ. ಈ ಫೀಚರ್‌ ಮೂಲಕವಾಗಿ ವಾಟ್ಸಾಪ್‌ ಬಳಕೆದಾರರು ತಾವು ತಪ್ಪಿ ಕಳುಹಿಸಿದ ಮೆಸೇಜ್‌ ಅನ್ನು ಅಂಡೂ (undo)ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಯಾರಿಗೂ ಕಾಣದಂತೆ ಮೆಸೇಜ್‌ ಅನ್ನು ಡಿಲೀಟ್‌ ಮಾಡಬಹುದು.

ವಾಟ್ಸಾಪ್‌ ಅಪ್ಲಿಕೇಶನ್‌ ಅಲ್ಲಿ ಡಿಲೀಟ್‌ ಫಾರ್‌ ಎವ್ರಿವನ್‌ ಎಂಬ ಆಯ್ಕೆ 2017 ರಲ್ಲಿ ಪರಿಚಯಿಸಲಾಯಿತು. ಈ ಹಿಂದೆ ಈ ಆಯ್ಕೆ ಮೆಸೇಜ್‌ ಕಳುಹಿಸಿದ ನಂತರ ಕೇವಲ ಏಳು ನಿಮಿಷಗಳಿಗಷ್ಟೇ ಬಳಸಬಹುದಾಗಿತ್ತು. ಆದರೆ ಈ ವರ್ಷದ ಅಗಸ್ಟ್‌ ತಿಂಗಳಲ್ಲಿ ಇದರ ಅವದಿಯನ್ನು ವಿಸ್ತರಿಸಿ ಅರವತ್ತು ಗಂಟೆಗಳ ವರೆಗೆ ಹೆಚ್ಚಿಸಲಾಯಿತು.

ವಾಟ್ಸಾಪ್‌ ನಲ್ಲಿ ನೀಡಿರುವ ಈ ಹೊಸ ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಕೆಲವು ಐಫೋನ್‌ ಗಳಲ್ಲಿ ಲಭ್ಯವಿರುತ್ತದೆ. ಅಲ್ಲದೇ ಈ ಹೊಸ ಫೀಚರ್‌ ವೈಯಕ್ತಿಕ ಹಾಗೂ ಗ್ರೂಪ್‌ ಮೆಸೇಜ್‌ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ : Lava X3 : ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ X3 ಅನ್ನು ಪರಿಚಯಿಸಿದ ಲಾವಾ

ಇದನ್ನೂ ಓದಿ : Smartphones: ಈ ವರ್ಷ ಕುತೂಹಲ ಹೆಚ್ಚಿಸಿದ್ದ 5 ಸ್ಮಾರ್ಟ್‌ಫೋನ್‌ಗಳು..

ಇದನ್ನೂ ಓದಿ : Electric water heater: ಜನವರಿ 1ರಿಂದ ಎಲೆಕ್ಟ್ರಿಕ್‌ ವಾಟರ್‌ ಹೀಟರ್‌ ಬ್ಯಾನ್ : ಕಾರಣ ಏನು ಗೊತ್ತಾ ?

ಇದನ್ನೂ ಓದಿ : Skin care product: ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪದಾರ್ಥಗಳಿವು

(Whatsapp new feature) Most of the time everyone has a mobile phone. Everyone uses WhatsApp. It is unmistakably one of the most used fast messaging apps in the world. If we want to send messages on WhatsApp, Appitappi sends the message to one person and then sends it to another person.

Comments are closed.