Skin care product: ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪದಾರ್ಥಗಳಿವು

(Skin care product) ಮಹಿಳೆಯರು ಹೆಚ್ಚಾಗಿ ಸೌಂದರ್ಯಕ್ಕೆ ಸಂಬಂಧಿಸಿದ ಪದಾರ್ಥಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಅದರಲ್ಲೀಯೂ ತ್ವಚೆಗೆ ಸಂಬಂಧಿಸಿದ ಪದಾರ್ಥಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ತ್ವಚೆಯ ಕಾಂತಿಯನ್ನು ಕಾಪಾಡಲು ಹಾಗೂ ಆರೋಗ್ಯವನ್ನು ಕಾಪಾಡಲು ಹೆಚ್ಚಾಗಿ ಸ್ಕಿನ್‌ ಕೇರ್‌ ಪ್ರೋಡಕ್ಟ್‌ ಗಳನ್ನು ಗೂಗಲ್‌ ನಲ್ಲಿ ಹುಡುಕಾಡುತ್ತಾ ಇರುತ್ತಾರೆ. ಅಂತೆಯೇ ಈ ವರ್ಷ ಕೂಡ ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪ್ರೋಡಕ್ಟ್‌ ಗಳ ಪಟ್ಟಿಯನ್ನು ಗೂಗಲ್‌ ನೀಡಿದೆ. ಇದರಲ್ಲಿ ತೆಂಗಿನ ಎಣ್ಣೆಗೆ ಮೊದಲ ಪ್ರಾಶಸ್ತ್ಯವಿದೆ.

ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪದಾರ್ಥಗಳ (Skin care product) ಪಟ್ಟಿ ಈ ಕೆಳಗಿನಂತಿವೆ.

*ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯು ತ್ವಚೆಯನ್ನು ಕಾಪಾಡುವಲ್ಲಿ ಪ್ರಮುಖವಾದುದು. ಇದು ನಮ್ಮ ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಆದ್ದರಿಂದ ಸಾಕಷ್ಟು ತಜ್ಞರು ತೆಂಗಿನ ಎಣ್ಣೆಯನ್ನು ಬಳಸಲು ಸಲಹೆ ನೀಡುತ್ತಾರೆ. ಈ ಕಾರಣಕ್ಕಾಗಿ ತೆಂಗಿನ ಎಣ್ಣೆಯು ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆ ಹಾಗೂ ಮೊದಲ ಸ್ಥಾನದಲ್ಲಿದೆ.

ವಿಟಮಿನ್‌-ಇ:
ವಿಟಮಿನ್-ಇ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ತೆಂಗಿನ ಎಣ್ಣೆಯಲ್ಲಿನ ವಿಟಮಿನ್-ಇ ಮಗುವನ್ನು ರಕ್ತಹೀನತೆಯಿಂದ ರಕ್ಷಿಸುತ್ತದೆ. ವಿಟಮಿನ್ ಇ ತಿನ್ನುವ ಮೂಲಕ ಅಲರ್ಜಿಯನ್ನು ತಡೆಗಟ್ಟಬಹುದು. ವಿಟಮಿನ್ ಇ ಕೊರತೆಯು ಕೊಲೆಸ್ಟ್ರಾಲ್ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ಎಲ್ಲಾ ಕಾರಣಕ್ಕಾಗಿ ವಿಟಮಿನ್ ಇ ಅನ್ನು ಜನರು ಹೆಚ್ಚಾಗಿ ಗೂಗಲ್‌ ನಲ್ಲಿ ಹುಡುಕಿದ್ದಾರೆ ಹಾಗೂ ಎರಡನೇ ಸ್ಥಾನದಲ್ಲಿದೆ.

ಲ್ಯಾಕ್ಟಿಕ್‌ ಆಮ್ಲ:
ಲ್ಯಾಕ್ಟಿಕ್ ಆಮ್ಲ ನಿಮ್ಮ ಚರ್ಮದ ಮೇಲ್ಮೈ ಪದರವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತೆಗೆದು ಹಾಕಲು ತುಂಬಾ ಸಹಾಯಕವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ತಜ್ಞರು ಲಾಕ್ಟಿಕ್‌ ಆಮ್ಲವನ್ನು ಉಪಯೋಗಿಸಲು ಸಲಹೆ ನೀಡಿದ್ದರಿಂದ ಲ್ಯಾಕ್ಟಿಕ್ ಆಮ್ಲ ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆ ಎಂದು ಗೂಗಲ್ ವರದಿ ಮಾಡಿದೆ.

ಕೊಲಾಜಿನ್:‌
ಕೊಲಾಜಿನ್ ದೇಹದಲ್ಲಿ ಹೆಚ್ಚು ಹೇರಳವಾಗಿರುವ, ನೈಸರ್ಗಿಕವಾಗಿ ಕಂಡುಬರುವ ಪ್ರೋಟೀನ್ ಅಂಶವಾಗಿದ್ದು, ಚರ್ಮಕ್ಕೆ ರಚನೆ ಮತ್ತು ಶಕ್ತಿಯನ್ನು ಒದಗಿಸುವುದರ ಜೊತೆಗೆ ಚರ್ಮವನ್ನು ರಕ್ಷಿಸುವಲ್ಲಿ ಸಹಾಯಕವಾಗಿದೆ. ಕೊಲಾಜಿನ್ ಸರಿಯಾದ ಪ್ರಮಾಣದಲ್ಲಿದ್ದರೆ ಚರ್ಮವು ನಯವಾಗಿ, ಮೃದುವಾಗಿ ಮತ್ತು ದೃಢವಾಗಿ ಉಳಿಯುತ್ತದೆ. ನಿಮ್ಮ ದೇಹದಲ್ಲಿನ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ತಜ್ಞರು ಸಲಹೆ ನೀಡಿದ್ದರಿಂದ ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟಿದೆ ಎಂದು ಗೂಗಲ್ ವರದಿ ಮಾಡಿದೆ

ಇದನ್ನೂ ಓದಿ : Heel Pain Home Remedies:ಅತಿಯಾದ ಹಿಮ್ಮಡಿ ನೋವು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದ್ರೆ ಇಲ್ಲಿದೆ ಅತ್ಯುತ್ತಮ ಮನೆಮದ್ದು ಮಾಹಿತಿ

(Skin care product) Women mostly prefer beauty products. In that too they give first priority to skin related ingredients. People often search Google for skin care products to keep their skin glowing and healthy.

Comments are closed.