ಕಾಶ್ಮೀರದಲ್ಲಿ ಪತ್ತೆಯಾಯ್ತು 1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ

ನವದೆಹಲಿ : ಭಾರತದ ಪ್ರಾಚೀನ ಶ್ರೀಮಂತಿಕೆ ಇಲ್ಲಿನ ದೇವಾಲಯ, ಶಿಲ್ಪಕಲೆ, ವಿಗ್ರಹಗಳಲ್ಲಿದೆ. ಆದರೆ ಪಾಶ್ಚಾತ್ಯರ ದಾಳಿಗೆ ಹಲವು ವಿಗ್ರಹ, ದೇವಸ್ಥಾನಗಳು ನಾಶವಾಗಿವೆ. ಇದೀಗ 1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ ಕಾಶ್ಮೀರದಲ್ಲಿ ಪತ್ತೆಯಾಗಿದೆ.

ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ್ದಾರೆ. ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪ್ರಾಚ್ಯ ವಸ್ತು ಇಲಾಖೆ ಹಾಗೂ ಪೊಲೀಸರಿಗೆ ಈ ಪ್ರಾಚೀನ ವಿಗ್ರಹ ಸಿಕ್ಕಿದೆ.

ಇದನ್ನೂ ಓದಿ: ರಾಮ ಸೇತುವಿನ ಬಗ್ಗೆ ನಿಮಗೆ ತಿಳಿಯದ ರಹಸ್ಯ ! ಸಂಶೋಧನೆಯಿಂದ ತಿಳಿದು ಬಂದಿದ್ದೇನು ?

ಈ ವಿಗ್ರಹವು 7-8ನೇ ಶತಮಾನಕ್ಕೆ ಸೇರಿದ್ದೆಂದು ಪರಿಶೀಲನೆ ವೇಳೆ ತಿಳಿದುಬಂದಿದೆ. ವಿಗ್ರಹವು 12×8 ಇಂಚು ಗಾತ್ರವಿದ್ದು, ಸಿಂಹಾಸನದ ಮೇಲೆ ತನ್ನ ಸಹಾಯಕರೊಂದಿಗೆ ದುರ್ಗಾಮಾತೆ ಕುಳಿತಿರುವಂತೆ ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ದುರ್ಗಾಮಾತೆ ಪ್ರತಿಮೆ ವಿಗ್ರಹವನ್ನುಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

(1200  year old durga devi statue found in Kashmir)

Comments are closed.