WhatsApp services restored : ಭಾರೀ ದೊಡ್ಡ ಅಡಚಣೆಯ ಬಳಿಕ ವಾಟ್ಸಾಪ್ ಸೇವೆಗಳು ಮತ್ತೆ ಪುನಾರಂಭಗೊಂಡಿವೆ. ವಾಟ್ಸಾಪ್ ಇದೀಗ ಆಂಡ್ರಾಯ್ಡ್ ಹಾಗೂ ಐಓಎಸ್ಗಳಲ್ಲಿ ಮತ್ತೆ ಸೇವೆಯನ್ನು ನಿರ್ವಹಿಸಲು ಆರಂಭಿಸಿದೆ. ಆದರೆ ಇನ್ನೂ ಕೆಲವರ ಮೊಬೈಲ್ಗಳಲ್ಲಿ ವಾಟ್ಸಾಪ್ ಸೇವೆಗಳು ಆರಂಭಗೊಂಡಿಲ್ಲ ಎಂಬ ಮಾಹಿತಿ ಕೇಳಿ ಬಂದಿದೆ. ಈ ಸಮಸ್ಯೆ ಶೀಘ್ರದಲ್ಲಿಯೇ ಸರಿಹೊಂದಲಿದೆ.
ಮೆಟಾ ಒಡೆತನದ ಜನಪ್ರಿಯ ಸಂವಹನ ಅಪ್ಲಿಕೇಶನ್ ವಾಟ್ಸಾಪ್ನ್ನು ತ್ವರಿತ ಪಠ್ಯ ಸಂದೇಶಗಳನ್ನು ಕಳುಹಿಸಲು ಅನೇಕರು ಬಳಕೆ ಮಾಡುತ್ತಾರೆ. ಆದರೆ ಇಂದು ಬರೋಬ್ಬರಿ ಎರಡು ಗಂಟೆಗಳಿಗೂ ಅಧಿಕ ಕಾಲ ವಾಟ್ಸಾಪ್ ಸೇವೆಗಳನ್ನು ಬಳಕೆ ಮಾಡಲು ಪರದಾಡಿದ್ದಾರೆ. ವಾಟ್ಸಾಪ್ ಬರೋಬ್ಬರಿ ಎರಡು ಗಂಟೆಗಳ ಕಾಲ ಬಂದ್ ಆಗಿದ್ದರಿಂದ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತೊಂದರೆಯಾಗಿದೆ.ವಾಟ್ಸಾಪ್ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಅನೇಕರು ಅಡಚಣೆಯನ್ನು ಅನುಭವಿಸಿದ್ದಾರೆ. ಈ ಎಲ್ಲದರ ನಡುವೆಯೇ ಟ್ವಿಟರ್ನಲ್ಲಿ ವಾಟ್ಸಾಪ್ ಸೇವೆ ಡೌನ್ ಆಗಿರುವ ಬಗ್ಗೆ ತರಹೇವಾರಿ ಮೀಮ್ಸ್ಗಳು ಹರಿದಾಡಿದ್ದವು .
ವೈಯಕ್ತಿಕ ಚಾಟ್ ಹಾಗೂ ಗ್ರೂಪ್ ಚಾಟ್ಗಳೆರಡರಲ್ಲಿಯೂ ವಾಟ್ಸಾಪ್ ಸೇವೆ ಡೌನ್ ಆಗಿತ್ತು. ಡೆಸ್ಕ್ಟಾಪ್ ಹಾಗೂ ಲ್ಯಾಪ್ಟಾಪ್ಗಳಲ್ಲಿ ಕೂಡ ವಾಟ್ಸಾಪ್ ವೆಬ್ ಸೇವೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಈ ಎಲ್ಲಾ ಸೇವೆಗಳು ಪುನಾರಂಭಗೊಂಡಿವೆ.
ವಾಟ್ಸಾಪ್ ಸೇವೆ ಸ್ಥಗಿತಗೊಂಡ ಬಗ್ಗೆ ಪ್ರಪಂಚಾದ್ಯಂತ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆ ಕೂಡ ಈ ಬಗ್ಗೆ ಕ್ಷಮೆಯಾಚನೆ ಮಾಡಿತ್ತು. ವಾಟ್ಸಾಪ್ ಸೇವೆಗಳು ಬಂದ್ ಆಗಿರುವ ಬಗ್ಗೆ ನಮಗೆ ದೂರುಗಳು ಕೇಳಿ ಬಂದಿದ್ದು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ ವಾಟ್ಸಾಪ್ ಸೇವೆಯನ್ನು ಪುನಾರಂಭಿಸಲಿದ್ದೇವೆ ಎಂದು ಮಾಹಿತಿಯನ್ನು ನೀಡಿತ್ತು. ಅದರಂತೆ ಎರಡು ಗಂಟೆಗಳ ಸ್ಥಗಿತದ ಬಳಿಕ ವಾಟ್ಸಾಪ್ ಸೇವೆ ಇದೀಗ ಪುನಾರಂಭಗೊಂಡಿದೆ.
ಇದನ್ನು ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!
WhatsApp Outage: WhatsApp services restored after major outage