WhatsApp Outage:ವಾಟ್ಸಾಪ್​ ಸೇವೆ ಡೌನ್​ : ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗದೇ ಕಸಿವಿಸಿಗೊಂಡ ಬಳಕೆದಾರರು

WhatsApp Outage: ಮೆಟಾ ಒಡೆತನದ ಅತ್ಯಂತ ಜನಪ್ರಿಯ ತ್ವರಿತ ಸಂವಹನ ಅಪ್ಲಿಕೇಶನ್​ ಆಗಿರುವ ವಾಟ್ಸಾಪ್​ನ್ನು ಬಳಕೆ ಮಾಡದಿರುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ವಾಟ್ಸಾಪ್​ ಮಾದರಿಯಲ್ಲಿಯೇ ಸಾಕಷ್ಟು ಅಪ್ಲಿಕೇಶನ್​ಗಳು ಬಂದಿದ್ದರೂ ಸಹ ಈ ಅಪ್ಲಿಕೇಶನ್​ಗೆ ಇರುವ ಬಳಕೆದಾರರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಪ್ರಸ್ತುತ ವಾಟ್ಸಾಪ್​ ಬಳಕೆದಾರರಿಗೆ ವಾಟ್ಸಾಪ್​ ಸಂದೇಶವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ವಾಟ್ಸಾಪ್​​ನ ವೈಯಕ್ತಿಕ ಚಾಟ್​ಗಳು ಹಾಗೂ ಗ್ರೂಪ್​ ಮೆಸೇಜ್​ಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತೊಡಕು ಉಂಟಾಗಿದೆ ಎಂಬ ಧೃಡ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ವಾಟ್ಸಾಪ್​ ಬಳಕೆ ಮಾಡುತ್ತಿರುವ ಪ್ರತಿಯೊಬ್ಬರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಡೌನ್​ಡಿಟೆಕ್ಟರ್​ ವೆಬ್​ಸೈಟ್​ ನೀಡಿರುವ ಮಾಹಿತಿಯ ಪ್ರಕಾರ ಸಾವಿರಾರು ವಾಟ್ಸಾಪ್​ ಬಳಕೆದಾರರು ತಮಗೆ ವಾಟ್ಸಾಪ್​ ಸೇವೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ ಎಂಬ ಮಾಹಿತಿಯನ್ನು ಖಚಿತಪಡಿಸಿದೆ. ವೆಬ್​ಸೈಟ್​ನ ಹೀಟ್​ ಮ್ಯಾಪ್​ ಆಧರಿಸಿ ಮುಂಬೈ, ದೆಹಲಿ, ಕೋಲ್ಕತ್ತಾ, ಲಕ್ನೋ ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿಯೇ ಈ ಸಮಸ್ಯೆ ಎದುರಾಗಿದೆ. ವಾಟ್ಸಾಪ್​ ಡೌನ್​ ಸಮಸ್ಯೆಯು ಎಲ್ಲೆಡೆ ವಾಟ್ಸಾಪ್​ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.

ವಾಟ್ಸಾಪ್​ ವೆಬ್​ ಬಳೆಕದಾರರೂ ಕೂಡ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ವಾಟ್ಸಾಪ್​ ಮೊಬೈಲ್​ಗಳಲ್ಲಿ ಬಳಕೆಯಾಗದ ಹಿನ್ನೆಲೆಯಲ್ಲಿ ಅನೇಕರು ವಾಟ್ಸಾಪ್​ ವೆಬ್​ ಬಳಕೆ ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲಿ ಕೂಡ ವಾಟ್ಸಾಪ್​ ಡೌನ್​ ಸಮಸ್ಯೆ ಬಳಕೆದಾರರನ್ನು ಕಾಡುತ್ತಿದೆ.


ಪ್ರತಿಷ್ಠಿತ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸಾಪ್​ ಮಾಲೀಕ ಕಂಪನಿ ಮೆಟಾ ವಾಟ್ಸಾಪ್​ ಡೌನ್​ ಆಗಿರುವ ವಿಚಾರವನ್ನು ಒಪ್ಪಿಕೊಂಡಿದೆ. ಹಾಗೂ ಈ ದೋಷವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಕೆಲವರು ವಾಟ್ಸಾಪ್​ ಸಂದೇಶವನ್ನು ಸ್ವೀಕರಿಸಲು ಹಾಗೂ ಕಳುಹಿಸಲು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮೆಟಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Healthy Stomach : ಔಷಧಗಳ ಬಳಕೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದದ್ದು ಏನು ಗೊತ್ತಾ…

ಇದನ್ನೂ ಓದಿ : Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ

WhatsApp Outage: WhatsApp, WhatsApp Web down for thousands of users

Comments are closed.