Eldrok India K-12 ಶೃಂಗಸಭೆಯಲ್ಲಿ ಆರ್ಕಿಡ್ಸ್‌ ಸಂಸ್ಥೆಗೆ ಎರಡು ಪ್ರಶಸ್ತಿಗಳು

ಬೆಂಗಳೂರು : ಎಲ್ಡ್ರೋಕ್ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಕೆ-12 2022 ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಆರ್ಕಿಡ್ಸ್‌ ದಿ ಇಂಟರ್ನಾಷನಲ್‌ ಸಂಸ್ಥೆಯ ಎರಡು ಶಾಖೆಗಳು ಪ್ರಶಸ್ತಿಗೆ ಭಾಜವಾಗಿದೆ. ಎಲ್ಡ್ರೋಕ್ ಇಂಡಿಯಾ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೊಸರೂಪ ಕೊಡುತ್ತಿರುವ ಶಿಕ್ಷಣ ತಜ್ಞರು, ಚಿಂತಕರಿಗೆ ವೇದಿಕೆಯನ್ನು ಒದಗಿಸುತ್ತದೆ. ಆರ್ಕಿಡ್‌ ಸರ್ಜಾಪುರ ಶಾಖೆ – ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ‘Excellence in inclusive and Experiential Learning Programś ಎಂಬ ಪ್ರಶಸ್ತಿ ’ ಮತ್ತು ಜಾಲಹಳ್ಳಿ ಶಾಖೆಗೆ ‘Excellence in Academic structure’’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಲ್ಡ್ರೋಕ್ ಇಂಡಿಯಾ ಕೆ-12 (Eldrok India K-12 ) ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸುವಾಗ, ಪ್ರಾಂಶುಪಾಲರಾದ ಡಾ ರಜನಿ ಭಕ್ಷಿ ಮಾತನಾಡಿ, “ಎಲ್ಡ್ರೋಕ್‌ನಿಂದ (Eldrok India K-12 ) ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯಾಗುತ್ತಿದೆ. ನಮ್ಮ ಪ್ರಯತ್ನ ಹಾಗೂ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದಕ್ಕಾಗಿ ತುಂಬಾ ಸಂತೋಷವಾಗುತ್ತಿದೆ. ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಅತ್ಯುತ್ತಮ ಶೈಕ್ಷಣಿಕ ಮೂಲಸೌಕರ್ಯ ಮತ್ತು ಕಲಿಕಾ ಕಾರ್ಯಕ್ರಮಗಳನ್ನು ಒದಗಿಸಲು ಆರ್ಕಿಡ್‌ ಸಂಸ್ಥೆಗಳು ಯಾವಾಗಲೂ ಶ್ರಮಿಸುತ್ತವೆ ” ಎಂದರು.

ಡಾ ರಜನಿ ಬಕ್ಷಿ ಆರ್ಕಿಡ್ಸ್ – ದಿ ಇಂಟರ್‌ನ್ಯಾಶನಲ್ ಶಾಲೆಯ ಪ್ರತಿನಿಧಿಯಾಗಿ, ಏಳು ಖ್ಯಾತ ಶಿಕ್ಷಣ ತಜ್ಞರೊಂದಿಗೆ ವೇದಿಕೆ ಹಂಚಿಕೊಂಡರು. “Use of tech and tooļ̧s Innovative Technologies and Robotics in Modern K̲ 12 Education” ಎಂಬ ವಿಷಯದ ಕುರಿತಯ ಅಭಿಪ್ರಾಯ ಹಂಚಿಕೊಂಡರು.

ಈ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಜಾಲಹಳ್ಳಿ ಶಾಖೆಯ ಪ್ರಾಚಾರ್ಯೆಯಾದ ಶ್ರೀಮತಿ ಮಥುರಾ ಕೆ. ಅವರು ಮಾತನಾಡಿ, “ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲು ಬಲಿಷ್ಟವಾದ ಮೂಲಸೌಕರ್ಯದ ಅಗತ್ಯವಿದೆ. ನಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಸಮಗ್ರ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲು ನಾವು ಕಂಕಣಬದ್ಧರಾಗಿರುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: SBI Job Alert 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಲು ಇದೆ ಅವಕಾಶ: ವಿವರ ಓದಿ

Comments are closed.